Fact Check | ಮುಸ್ಲಿಂ ವ್ಯಕ್ತಿ ತನ್ನ ಅಂಗಡಿಯಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂಬುದು ನಾಟಕೀಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜವನ್ನು ತನ್ನ ಅಂಗಡಿಯಲ್ಲಿ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ “ಈ ವ್ಯಕ್ತಿಯನ್ನು ನೋಡಿ ಇಂಥವರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಈ ಹಿಂದೆ ಕೇಸರಿ ಧ್ವಜದಲ್ಲಿ ಸಮಸ್ಯೆ ಇದ್ದ ಇವರಿಗೆ, ಈಗ ತ್ರಿವರ್ಣ ಧ್ವಜವನ್ನು ಹಾರಿಸಲು ಕಷ್ಟವಾಗುತ್ತಿದೆ. ಇಂತಹ ದೇಶದ್ರೋಹಿಗಳು ಏನೇ ಆದರೂ ತಮ್ಮ ಸಿದ್ಧಾಂತವನ್ನು ಬಿಡುವುದಿಲ್ಲ” ಎಂದು ವಿಡಿಯೋದೊಂದಿಗೆ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ

ಈ ವಿಡಿಯೋವನ್ನು ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದರು ಈ ಘಟನೆ ನಿಜವಿರಬಹುದು ಎಂದು ಭಾವಿಸಿ ತಮ್ಮ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಕೂಡ ಹೊರಹಾಕುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಪ್ರಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ 14 ಆಗಸ್ಟ್ 2023 ರಂದು ರಿತಿಕ್ ಕಟಾರಿಯಾ ಎಂಬ ವ್ಯಕ್ತಿಯಿಂದ ನಡೆಸಲಾಗುವ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ ಮೂಲ ವಿಡಿಯೋ ಕಂಡು ಬಂದಿದೆ.

ಈ ವಿಡಿಯೋ ಸ್ಕ್ರಿಪ್ಟೆಡ್(ನಾಟಕೀಯ)ವಾಗಿದ್ದು, ಇದೇ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಲವು ಮಂದಿ ಕಲಾವಿದರು ಇನ್ನಿತರ ವಿಡಿಯೋಗಲ್ಲಿಯೂ ಕೂಡ ಕಂಡುಬಂದಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಕೋಮು ಸೌಹಾರ್ದತೆಯನ್ನು ಸಾರುವ ಉದ್ದೇಶದಿಂದ ನಿರ್ಮಿಸಿರುವುದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯಾಗಿ ನಟಿಸಿದವರು ರಿತಿಕ್ ಕಟಾರಿಯ ಅವರೇ ಆಗಿದ್ದು, ಈ ರೀತಿಯ ಹಲವು ವಿಡಿಯೋಗಳಲ್ಲಿ ಅವರು ನಟಿಸಿರುವುದನ್ನು ನೋಡಬಹುದಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಸುಳ್ಳು ಆಪಾದನೆಯೊಂದಿಗೆ ತಿರುಚಿ ಹಂಚಿಕೊಳ್ಳಲಾಗಿದೆ ಎಂಬುದು ಈ ಎಲ್ಲಾ ಅಂಶಗಳಿಂದ ಸಾಬೀತಾಗಿದೆ.

ಒಟ್ಟಾಗಿ ಹೇಳುವುದಾದರೆ ಕೋಮು ಸಾಮರಸ್ಯದ ಜಾಗೃತಿಯನ್ನು ಮೂಡಿಸುವುದು ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಮಾಡಲಾದ ಸ್ಕ್ರಿಪ್ಟೆಡ್ ವಿಡಿಯೋವನ್ನು ನಿಜವಾದ ವಿಡಿಯೋವೆಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಹಲವರು ಇದೇ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಶೇರ್ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ವಿಡಿಯೋಗಳನ್ನು ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ


ಇದನ್ನೂ ಓದಿ : Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *