Fact Check: ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ವಿರಾಟ್‌ ಕೊಹ್ಲಿ ₹50 ಕೋಟಿ ದೇಣಿಗೆ ನೀಡಿಲ್ಲ

ವಿರಾಟ್ ಕೊಹ್ಲಿ

ಕೋಲ್ಕತ್ತಾದ ಆರ್‌ಜಿಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶದ ನಡುವೆ, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ಸಂತ್ರಸ್ತೆಯ ತಾಯಿಗೆ 50 ಕೋಟಿ ದೇಣಿಗೆ ನೀಡಿದ್ದಾರೆಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದಿ ಭಾಷೆಯಲ್ಲಿ “प्यार उससे करो जो खराब टाइम में मदद करे कोलकाता रैंप में विराट कोहली ने 50 करोड़ डोनेट किये उसकी मां की खुशी के लिए” ಹೀಗೆ ಹಂಚಿಕೊಳ್ಳಲಾಗುತ್ತಿದೆ. ಇಂಗ್ಲೀಷ್‌ನಲ್ಲಿಯೂ ಕೂಡ “Love the one who helps in bad times. Virat Kohli donated 50 crore to the Kolkata rape (victim) for the happiness of her mother.” ಈ ರೀತಿಯಾಗಿ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಈ ರೀತಿಯ ಪೋಸ್ಟ್‌ ಗಳನ್ನು ನೀವು ಇಲ್ಲಿ ನೋಡಬಹುದು ( ಆರ್ಕೈವ್ ). ಅಂತಹ ಹೆಚ್ಚಿನ ಪೋಸ್ಟ್‌ಗಳನ್ನು ನೀವು ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು .

ಫ್ಯಾಕ್ಟ್ ಚೆಕ್

ಈ ಮಾಹಿತಿ ನಿಜವೆ ಎಂದು ಪರಿಶೀಲಿಸಲು ಸಂಬಂಧಿಸಿದಂತೆ ಕೀವರ್ಡ್‌ಗಳನ್ನು ಬಳಸಿ  ಹುಡುಕಾಟ ನಡೆಸಿದಾಗ ಕೊಹ್ಲಿಯವರು ಅತ್ಯಾಚಾರ ಸಂತ್ರಸ್ತೆಯ ತಾಯಿಗೆ 50 ಕೋಟಿ ದೇಣಿಗೆ ನೀಡಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ಕೊಹ್ಲಿ ಅಷ್ಟು ಹಣ ದೇಣಿಗೆ ನೀಡಿದ್ದರೆ ಖಂಡಿತ ಹಲವು ಮಾಧ್ಯಮಗಳು ಅದನ್ನು ದೊಡ್ಡದಾಗಿ ಸುದ್ದಿ ಮಾಡುತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳು ಲಭ್ಯವಿಲ್ಲ.

ಕೊಹ್ಲಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ಇದೆಯೇ ಎಂದು ( ಇನ್‌ಸ್ಟಾಗ್ರಾಮ್  ಮತ್ತು  ಎಕ್ಸ್ ) ನೋಡಿದ ನಂತರ ನಮಗೆ  ಕೊಹ್ಲಿಯವರು ನೀಡಿದ ದೇಣಿಗೆಯ ಬಗ್ಗೆ ಯಾವುದೇ ರೀತಿಯ ಪೋಸ್ಟ್‌ಗಳು ಕಂಡುಬಂದಿಲ್ಲ. ಹಾಗಾಗಿ ಕೊಹ್ಲಿ 50 ಕೋಟಿ ರೂ ನೀಡಿದ್ದಾರೆ ಎಂಬುದು ಸುಳ್ಳು ಮಾಹಿತಿಯಾಗಿದೆ.

ಇನ್ನೊಂದೆಡೆ ಕೊಲ್ಕತ್ತಾ ಅತ್ಯಾಚಾರ ಘಟನೆಯಲ್ಲಿ ಕೊಹ್ಲಿ ಟೀಕಿಸಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ನಾವು ಮತ್ತಷ್ಟು ಹುಡುಕಿದಾಗ, ನ್ಯೂಸ್‌ಮೊಬೈಲ್ ಫ್ಯಾಕ್ಟ್ ಚೆಕ್ ಜನವರಿ 06, 2017 ರಂದು ವೀಡಿಯೊದಲ್ಲಿ ಹೊಸ ವರ್ಷದ ಮುನ್ನಾದಿನದಂದು ಬೆಂಗಳೂರಿನ ಬೀದಿಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೌನವಾಗಿ ನೋಡುವವರನ್ನು ಕೊಹ್ಲಿ ಖಂಡಿಸಿದ್ದಾರೆ ಎಂದು ಕಂಡುಹಿಡಿದಿದೆ. ಅಂತಹ ವ್ಯಕ್ತಿಗಳು “ತಮ್ಮನ್ನು ತಾವು ಪುರುಷರು ಎಂದು ಕರೆದುಕೊಳ್ಳುವ ಹಕ್ಕು ಅವರಿಗಿಲ್ಲ” ಮತ್ತು ಅಂತಹ ಸಮಾಜದಲ್ಲಿ ನಾನು ವಾಸಿಸುವುದಕ್ಕೆ ನಾಚಿಕೆಪಡುತ್ತೇನೆ ಎಂದು ಕೊಹ್ಲಿಯವರು ಹೇಳಿದ್ದಾರೆ. ಅಂದರೆ ಇದು 2017ರಲ್ಲಿ ಹೇಳಿರುವುದೇ ಹೊರತು ಪ್ರಸ್ತುತ ಅಲ್ಲ ಎಂಬುದು ಸಾಬೀತಾಗಿದೆ.

ನಮ್ಮ ಎಲ್ಲಾ ರೀತಿಯ ಸಂಶೋಧನೆಗಳ ಆಧಾರದ ಮೇಲೆ ಕೋಲ್ಕತ್ತಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಗೆ ಕೊಹ್ಲಿಯವರು ₹ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬ ಹೇಳಿಕೆ ಸುಳ್ಳಾಗಿದೆ.


ಇದನ್ನೂ ಓದಿದ್ದೀರಾ? Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ.


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯವನ್ನು ತಿಳಿಸುತ್ತೇವೆ.

Leave a Reply

Your email address will not be published. Required fields are marked *