Fact Check| ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂಬುದು ಸುಳ್ಳು

ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ‌.

ಫ್ಯಾಕ್ಟ್‌ಚೆಕ್:

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಸ್ವಯಂ ಪ್ರೇರಿತವಾಗಿ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳ ಸರ್ಕಾರದ ಪರ ಕಪಿಲ್ ಸಿಬಲ್‌ರವರು ವಾದ ಮಂಡಿಸುತ್ತಿದ್ದಾರೆ. ಹಾಗಾಗಿ ಕಪಿಲ್ ಸಿಬಲ್‌ರವರು ಆರೋಪಿ ಸಂಜಯ್ ರಾಯ್ ಪರ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು.

ಆರೋಪಿಯ ಪರ ವಾದ ಮಂಡಿಸಲು ವಕೀಲರೇ ಇಲ್ಲ!

ಆರೋಪಿ ಸಂಜಯ್ ರಾಯ್ ಪರ ವಾದ ಮಾಡಲು ಯಾವುದೇ ವಕೀಲರು ಒಪ್ಪಿಕೊಳ್ಳುತ್ತಿಲ್ಲ ಎಂದು ನ್ಯೂಸ್18 ವರದಿ ಮಾಡಿದೆ.

ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಪ್ರಾಥಮಿಕ ಅನುಮತಿ ಪಡೆದಿದೆ. ಆದಾಗ್ಯೂ, ಕಾನೂನು ಪ್ರಾತಿನಿಧ್ಯದ ಕೊರತೆಯಿಂದಾಗಿ ಪ್ರಕ್ರಿಯೆಯು ವಿಳಂಬವನ್ನು ಎದುರಿಸುತ್ತಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.


ಆರ್‌ಜಿ ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ FIR ದಾಖಲು ಮತ್ತು ಇತರ ಪ್ರಕ್ರಿಯೆ ನಡೆಸುವಲ್ಲಿ ಪೊಲೀಸ್ ಇಲಾಖೆ, ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೂ ವಿದ್ಯಾರ್ಥಿನಿಯ ಹತ್ಯೆ, ಅತ್ಯಾಚಾರ ಮತ್ತು ಆರ್‌ಜಿ ಕರ್ ಆಸ್ಪತ್ರೆ ಮೇಲಿನ ಗುಂಪು ದಾಳಿ ತನಿಖೆಯ ಪ್ರಗತಿಯ ಕುರಿತು ಆ.22ರೊಳಗೆ ತನಿಖೆಯ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ಈ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇವತ್ತು ನಡೆಸಿದ (ಆ.22) ವಿಚಾರಣೆ ಈ ಕೆಳಗಿನ‌ ಲಿಂಕ್ ಬಳಸಿ ವಿಕ್ಷೀಸಬಹುದು.

ಪಶ್ಚಿಮ ಬಂಗಾಳ ಸರ್ಕಾರದ ಪರ ವಕಾಲತ್ತು ವಹಿಸಿದ ಕಪಿಲ್ ಸಿಬಲ್‌ರವರು ವಾದ ಮಂಡಿಸಿದ್ದು, ಅವರು ಆರೋಪಿಯ ಪರ ವಾದ ಮಂಡಿಸುತ್ತಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.


ಇದನ್ನು ಓದಿದ್ದೀರಾ?: Fact Check| ಈ ಹಿಂದೂ ಮಹಿಳೆಗೆ 24 ಮಕ್ಕಳಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *