Fact Check| ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರಿಂದ ಬೆಂಕಿ ಹಚ್ಚಲಾದ ಧಾರ್ಮಿಕ ಕಟ್ಟಡ ಮಂದಿರವಲ್ಲ; ಸೂಫೀ ದರ್ಗಾ!

ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ಆಗಸ್ಟ್ 5ರಂದು ಸೋಮವಾರ ಜಸ್ಸೋರ್‌ನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯ ವೇಳೆ ಅವಾಮಿ ಲೀಗ್ ನಾಯಕರು ಮತ್ತು ವಿವಿಧ ಕಾರ್ಮಿಕರ ರಚನೆಗಳು, ಅವರಿಗೆ ಸೇರಿದ ಮನೆಗಳು ಮತ್ತು ವ್ಯವಹಾರಿಕ ಕಟ್ಟಡಗಳ ಮೇಲೆ ದೇಶಾದ್ಯಂತ ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.

ಈ ವಿಧ್ವಂಸಕ ಕೃತ್ಯಗಳು, ಲೂಟಿ ಮತ್ತು ಬೆಂಕಿ ಹಚ್ಚುವಿಕೆಯಿಂದಾಗಿ ಬಾಂಗ್ಲಾದೇಶದ ಜಸ್ಸೋರ್‌ ಜಿಲ್ಲೆಯೊಂದರಲ್ಲಿಯೇ 24 ಮಂದಿ ಹತರಾಗಿದ್ದಾರೆ.

ಈ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳು, ಅವಾಮಿ ಲೀಗ್ ನಾಯಕರ ಮೇಲಿನ ದಾಳಿಯನ್ನು ಹಿಂದೂಗಳ ಮೇಲಿನ ದಾಳಿ ಎಂದು ಬಿಂಬಿಸುವ ಪ್ರಕ್ರಿಯೆಗಳು ಮುಂದುವರೆದಿವೆ.

ಏನೀ ಸುಳ್ಳು ಸುದ್ದಿ?

ಆಗಸ್ಟ್ 10ರಂದು Xನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ
“ಬಾಂಗ್ಲಾದೇಶದ ಠಾಕೂರಗಾಂವ್ ಜಿಲ್ಲೆಯಲ್ಲಿ ಇಸ್ಲಾಮಿಸ್ಟ‌ರು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಸುಳ್ಳು ಸುದ್ದಿಯನ್ನು ಹರಡಿದ್ದು, ಈ ವಿಡಿಯೋವನ್ನು ಸುಮಾರು ಮೂರು ಲಕ್ಷ ಜನರು ವೀಕ್ಷಿಸಿದ್ದಾರೆ.


ಇದಲ್ಲದೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ನಲ್ಲಿಯೂ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಮುಸ್ಲಿಮರು ದೇವಾಯಕ್ಕೆ ಬೆಂಕಿ ಹಚ್ಚಿದ್ದು ನಿಜವೇ?

ಬಾಂಗ್ಲಾದೇಶದ ಜಸ್ಸೋರ್ ಜಿಲ್ಲೆಯಲ್ಲಿ ಆಗಸ್ಟ್ 5ರ ರಾತ್ರಿಯಂದು ಸೂಫೀ ದರ್ಗಾ, ಹಜರತ್ ಗರೀಬ್ ಶಾಹ್ ಮಝಾರ್ ಶರೀಫ್ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ಸಂಪೂರ್ಣ ಹಾನಿಗೊಳಿಸಿ ಬೆಂಕಿ ಹಚ್ಚಿದ್ದರು. ಇದು ಠಾಕೂರಗಾಂವ್ ಜಿಲ್ಲೆಯಲ್ಲಿ ನಡೆದ ಕೃತ್ಯವಲ್ಲ ಬದಲಾಗಿ ಜಸ್ಸೋರ್ ಜಿಲ್ಲೆಯಲ್ಲಿ ನಡೆದಿದೆ.

 

ವಿಡಿಯೋದಲ್ಲಿ ಕಾಣುವ ಬೆಂಗಾಲಿ ಪದಗಳನ್ನು ಗೂಗಲ್ ಟ್ರಾನ್ಸಲೇಟರ್ ಬಳಸಿ ಭಾಷಾಂತರಿಸಿದಾಲೂ “ಹಝರತ್ ಗರೀಬ್ ಶಾಹ್ ಮಝಾರ್” ಎಂದೇ ಅನುವಾದ ದೊರೆಯುತ್ತದೆ‌.

ಈ ವಿಡಿಯೋದ ಕುರಿತು ಗೂಗಲ್ ರಿವರ್ಸ್ ಸರ್ಚ್‌ನಲ್ಲಿ ಹುಡುಕಿದಾಗ ಆಗಸ್ಟ್ 7ರಂದು ಟಿವಿ ವಾಹಿನಿಯೊಂದು ವಿಡಿಯೋವನ್ನು ಪ್ರಕಟಿಸಿದ್ದು ಇದರಲ್ಲಿ “ಹಝರತ್ ಗರೀಬ್ ಶಾಹ್ ದರ್ಗಾದ ಮೇಲೆ ದಾಳಿ” ಎಂದೇ ವರದಿಯನ್ನು ಪ್ರಕಟಿಸಿವೆ.

ಇದಲ್ಲದೇ ಢಾಕಾ ಮೂಲದ ಸತ್ಯಶೋಧಕ ವರದಿಗಾರ ತನ್ವೀರ್‌ ಕೂಡ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ಇದು ಸೂಫೀ ದರ್ಗಾದ ಮೇಲಿನ ದಾಳಿಯೇ ಹೊರತು ಹಿಂದೂ ದೇವಾಲಯದ ಮೇಲಾದ ದಾಳಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆಯಾಗಿ ಸೂಫೀ ದರ್ಗಾದ ಮೇಲೆ ಪ್ರತಿಭಟನಾಕಾರರು ನಡೆಸಿದ ದಾಳಿಯನ್ನು ದೇವಾಯಲದ ಮೇಲೆ ದಾಳಿ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.


ಇದನ್ನು ಓದಿ: Fact Check | ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಎಂದು ಹೋಟೆಲ್‌ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *