Fact Check: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸುವ ಮುನ್ನ ಆನೆಗಳು ಸುರಕ್ಷಿತವಾಗಿರಲು ಓಡುತ್ತಿವೆ ಎಂದು ಹಳೆಯ ವೀಡಿಯೊ ಹಂಚಿಕೆ

ವಯನಾಡ್‌

ಜುಲೈ 30 ರಂದು ಮುಂಜಾನೆ ವಯನಾಡ್ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ 370 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಕಾಣೆಯಾದವರಿಗಾಗಿ ಶೋಧ ಪ್ರಸ್ತುತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಕಳೆದ ವಾರ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಒಂದು ಗಂಟೆ ಮೊದಲು ಆನೆಗಳ ಹಿಂಡು “ಸುರಕ್ಷಿತ ಸ್ಥಳಕ್ಕೆ ಓಡುತ್ತಿದೆ” ಎಂದು ಹೇಳುವ ವೀಡಿಯೊವನ್ನು ಪರಿಶೀಲಿಸಿದ ಹ್ಯಾಂಡಲ್‌ಗಳು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

27 ಸೆಕೆಂಡುಗಳ ಈ ವಿಡಿಯೋವನ್ನು ಫೇಸ್ಬುಕ್ ಮತ್ತು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, “ಕೇರಳದ ವಯನಾಡ್‌ನಲ್ಲಿ ಭೂಕುಸಿತಕ್ಕೆ 1 ಗಂಟೆ ಮೊದಲು ಆನೆಗಳು ಸುರಕ್ಷಿತವಾಗಿ ಓಡುತ್ತಿವೆ. ಪ್ರಾಣಿಗಳಿಗೆ ಸೂಕ್ಷ್ಮ ದೃಷ್ಟಿ ಇದೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಅಂತಹ ಪೋಸ್ಟ್ ಗಳನ್ನು ಇಲ್ಲಿಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್

ವೈರಲ್ ತುಣುಕಿನ ಕೀಫ್ರೇಮ್‌ಗಳಲ್ಲಿ ಗೂಗಲ್ ಲೆನ್ಸ್ ಹುಡುಕಾಟವನ್ನು ನಡೆಸಿದಾಗ ಏಪ್ರಿಲ್ 3, 2024 ರ @TravelwithAJ96 ರ ಯೂಟ್ಯೂಬ್ ವೀಡಿಯೊ ಒಂದು ನಮಗೆ ಲಭ್ಯವಾಗಿದ್ದು. ಆನೆಗಳ ಹಿಂಡು ರಸ್ತೆ ದಾಟುವ ಅದೇ ದೃಶ್ಯಗಳನ್ನು ಇದು ಒಳಗೊಂಡಿದೆ.

ವಯನಾಡ್ನಲ್ಲಿ ಭೂಕುಸಿತ ಸಂಭವಿಸುವ ಮೊದಲು ಆನೆಗಳು ಸುರಕ್ಷಿತವಾಗಿ ಓಡುತ್ತಿವೆಯೇ? ಇಲ್ಲ, ವೈರಲ್ ವೀಡಿಯೊ ಹಳೆಯದಾಗಿದೆ
ಯೂಟ್ಯೂಬ್ ವೀಡಿಯೊದಿಂದ ಸ್ಕ್ರೀನ್ ಗ್ರಾಫ್ @TravelwithAJ96

ಜನವರಿ 12, 2024 ರಂದು @yathrakarude_sradhakku ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೈರಲ್ ತುಣುಕಿನ ಸ್ವಲ್ಪ ವಿಭಿನ್ನ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. “ಕೇವಲ 900 ಕಂಡಿ ವಸ್ತುಗಳು…” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ಸ್ಕ್ರೀನ್ಗ್ರಾಫ್ @yathrakarude_sradhakku

ವೈರಲ್ ತುಣುಕಿನ ಕೀಫ್ರೇಮ್ಗಳು ಮತ್ತು ಇನ್ಸ್ಟಾಗ್ರಾಮ್ ವೀಡಿಯೊದ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.

(L-R) ವೈರಲ್ ವೀಡಿಯೊದಿಂದ ಸ್ಕ್ರೀನ್ ಗ್ರಾಫ್ ಗಳು ಮತ್ತು ಇನ್ಸ್ಟಾಗ್ರಾಮ್ ವೀಡಿಯೊದಿಂದ ಸ್ಕ್ರೀನ್ ಗ್ರಾಫ್ ಗಳು

ಇದಲ್ಲದೆ, ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ “@wayanadan” ನ ವಾಟರ್ ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ಸುಳಿವು ತೆಗೆದುಕೊಂಡು, ನಾವು @wayanadan ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹುಡುಕಾಟ ನಡೆಸಿದಾಗ, ಅದೇ ವೀಡಿಯೊವನ್ನು ಹೊಂದಿರುವ ಜನವರಿಯ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.

ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ಸ್ಕ್ರೀನ್ಗ್ರಾಫ್ @wayanadan

ವೀಡಿಯೊದ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ನಮಗೆ ಸ್ವತಂತ್ರವಾಗಿ ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಕನಿಷ್ಠ ಜನವರಿ 2024 ರ ಹಿಂದಿನದು ಮತ್ತು ವಯನಾಡ್ ಭೂಕುಸಿತಕ್ಕೆ 1 ಗಂಟೆ ಮೊದಲು ಆನೆಗಳು ಸುರಕ್ಷಿತ ಸ್ಥಳಕ್ಕೆ ಓಡುತ್ತಿರುವುದನ್ನು ತೋರಿಸುವುದಿಲ್ಲ.

ಆದ್ದರಿಂದ, ಆನೆಗಳ ಹಿಂಡು ಸುರಕ್ಷಿತವಾಗಿರಲು ಓಡುತ್ತಿರುವುದನ್ನು ತೋರಿಸುವ ಹಳೆಯ ವೀಡಿಯೊವನ್ನು ವಯನಾಡ್‌ನಲ್ಲಿ ಭೂಕುಸಿತ ಸಂಭವಿಸುವ ಒಂದು ಗಂಟೆ ಮೊದಲು ಅನೆಗಳ ಹಿಂಡು ಸುರಕ್ಷಿತ ಸ್ಥಳಕ್ಕೆ ಓಡುತ್ತಿವೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ಥಾಯ್ ವ್ಯಕ್ತಿಯೊಬ್ಬರು ಹಿಮ್ಮುಖವಾಗಿ ಗುಂಡು ಹಾರಿಸುತ್ತಿರುವ ಈ ಫೋಟೋ 2024 ರ ಪ್ಯಾರಿಸ್ ಒಲಿಂಪಿಕ್ಸ್ ನದ್ದಲ್ಲ!


ವೀಡಿಯೋ ನೋಡಿ: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *