Fact Check: ವಿಶ್ವದ ಅತಿ ಎತ್ತರದ ರೈಲು ಸೇತುವೆಯನ್ನು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಎಂದು AI ಪೋಟೋ ವೈರಲ್

ಚೆನಾಬ್ ನದಿ

ಜಗತ್ತಿನ ಅತೀ ಅಗಲವಾದ ಮತ್ತು ಎತ್ತರದ ಸೇತುವೆ ಭಾರತದಲ್ಲಿರುವ ಕಾಶ್ಮೀರದ ಚೆನಾಬ್ ರೈಲು ಸೇತುವೆಯಾಗಿದೆ ಎಂದು ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ನಂಬಿ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.

“ವಿಶ್ವದ ಅತಿ ಎತ್ತರದ ರೈಲು ಸೇತುವೆ ಜಮ್ಮು ಮತ್ತು #Kashmir ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಇದೆ. ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಕಮಾನು ಸೇತುವೆಯು ನೀರಿನಿಂದ 1,178 ಅಡಿ ಎತ್ತರದಲ್ಲಿದೆ, ಇದು #Paris ರ ಐಫೆಲ್ ಟವರ್ ಗಿಂತ ಎತ್ತರವಾಗಿದೆ. ದಶಕಗಳ ನಿರ್ಮಾಣದ ನಂತರ, ಸೇತುವೆಯನ್ನು 2024 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಗುವುದು. ನೀವು ಎತ್ತರಕ್ಕೆ ಹೆದರುತ್ತಿದ್ದರೆ, ನೀವು ಚೆನಾಬ್ #Bridge ತಪ್ಪಿಸಬೇಕು. ಇಂತಹ ಸೇತುವೆಗಳನ್ನು ನಿರ್ಮಿಸುವ ಮೂಲಕ ಭಾರತವು ತನ್ನ #superpower ಮತ್ತು #engineering ಜೀವಂತ ಪುರಾವೆಗಳನ್ನು ನೀಡಿದೆ.” ಎಂಬ ಶೀರ್ಷಿಕೆಯೊಂದಿಗೆ ಈ ಪೋಟೋವನ್ನು ಹಂಚಿಕೊಳ್ಳಲಾಗಿದೆ.

ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. (ಆರ್ಕೈವ್ ಲಿಂಕ್)

ಫ್ಯಾಕ್ಟ್ ಚೆಕ್

ನಮ್ಮ ತಂಡ ಫ್ಯಾಕ್ಟ್ ಚೆಕ್ ಮಾಡಿದಾಗ ಅದು ಸುಳ್ಳು ಎಂದು ಕಂಡುಬಂದಿದೆ.

“ಚೆನಾಬ್ ರೈಲು ಸೇತುವೆ” ನಂತಹ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಜೂನ್ 21, 2024 ರ ದಿ ಹಿಂದೂ ಪತ್ರಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ಕಮಾನು ರೈಲು ಸೇತುವೆಯ ಚಿತ್ರವನ್ನು ಒಳಗೊಂಡ ಮಾಧ್ಯಮ ವರದಿಯನ್ನು ನಾವು ಕಂಡುಕೊಂಡಿದ್ದೇವೆ.

ವರದಿಯ ಪ್ರಕಾರ, ಭಾರತೀಯ ರೈಲ್ವೆ ಜೂನ್ 20, 2024 ರಂದು ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆಯಲ್ಲಿ ಎಂಟು ಬೋಗಿಗಳ ಮೆಮು ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿತು. ಈ ಪ್ರಾಯೋಗಿಕ ಓಟವು ರಿಯಾಸಿಯಿಂದ ಕಾಶ್ಮೀರದ ಬಾರಾಮುಲ್ಲಾಗೆ ರೈಲು ಸೇವೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

(ದಿ ಹಿಂದೂ)

ವಿಶ್ಲೇಷಣೆಯ ನಂತರ, ಎಐ-ರಚಿಸಿದ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲವಾರು ವ್ಯತ್ಯಾಸಗಳನ್ನು ನಾವು ವೈರಲ್ ಪೋಟೋದಲ್ಲಿ ಗುರುತಿಸಿದ್ದೇವೆ. ಚಿತ್ರವು ಸಾಮಾನ್ಯವಾಗಿ ಅಸ್ಪಷ್ಟ ವಿವರಗಳನ್ನು ಪ್ರದರ್ಶಿಸುತ್ತದೆ. ಹೈವ್ ಮೊಡರೇಶನ್ ಮತ್ತು ಹಗ್ಗಿಂಗ್ ಫೇಸ್ ನಂತಹ ಎಐ ಪತ್ತೆ ಸಾಧನಗಳನ್ನು ಬಳಸಿಕೊಂಡು, ಚಿತ್ರವು ಎಐ-ಸೃಷ್ಟಿಸಿದೆ ಎಂದು ದೃಢೀಕರಿಸಲಾಗಿದೆ.

(ಮೂಲ: ದಿ ಹಿಂದೂ)

ಆದ್ದರಿಂದ, ವೈರಲ್ ಚಿತ್ರವು ಎಐ-ಸೃಷ್ಟಿಯಾಗಿದೆ ಎಂದು ನಾವು ನಿರ್ಣಾಯಕವಾಗಿ ಹೇಳಬಹುದು.


ಇದನ್ನು ಓದಿ: ‘ತೌಬಾ ಹಾಡಿಗೆ ನೃತ್ಯ ಮಾಡಿದ್ದು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ


ವೀಡಿಯೋ ನೋಡಿ: ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ ಎಂದು ನಕಲಿ ವಿಡಿಯೋ ಹಂಚಿಕೆ.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *