Fact Check: 2001ರಲ್ಲಿ ಎಲ್ ಸಾಲ್ವಡಾರ್ ಭೂಕಂಪದ ಚಿತ್ರವನ್ನು ವಯನಾಡ್ ಭೂಕುಸಿತದ ದೃಶ್ಯ ಎಂದು ಹಂಚಿಕೊಳ್ಳಲಾಗುತ್ತಿದೆ

ವಯನಾಡ್

ಕೇರಳದ ವಯನಾಡ್‌ನ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ (ಜುಲೈ 30) ಸಂಭವಿಸಿದ ಭಾರಿ ಭೂಕುಸಿತದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಮುಂಡಕ್ಕೈ ಗ್ರಾಮದ ಫೋಟೋ ಎಂದು ಭೂಕುಸಿತಗೊಂಡ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ವಯನಾಡಿಗೆ ಸಂಬಂಧಿಸಿದ ಪೋಟೋ ಎಂದು ಸಂಬಂಧವಿರದ ಅನೇಕ ಪೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದು ನಮ್ಮನ್ನು ಈ ವಿಕಿಮೀಡಿಯಾ ಕಾಮನ್ಸ್ ಚಿತ್ರಕ್ಕೆ ಕರೆದೊಯ್ಯಿತು, ಇದು 2001 ರ ಎಲ್ ಸಾಲ್ವಡಾರ್ ಭೂಕಂಪದ ಸಮಯದಲ್ಲಿ ಸಂಭವಿಸಿದ ಭೂಕುಸಿತವನ್ನು ತೋರಿಸುತ್ತದೆ ಎಂದು ಹೇಳಿದೆ.

ಮತ್ತಷ್ಟು ಹುಡುಕಾಟ ನಡೆಸಿದಾಗ ಫೆಬ್ರವರಿ 2006 ರ ವಿಶ್ವದ ನೈಸರ್ಗಿಕ ವಿಪತ್ತು ಹಾಟ್ಸ್ಪಾಟ್‌ಗಳ ಬಗ್ಗೆ ನಾಸಾ ಬರೆದ ಅದೇ ಫೋಟೋ ನಮಗೆ ಲಭ್ಯವಾಗಿದೆ. “ಎಲ್ ಸಾಲ್ವಡಾರ್‌ನ ಸಾಂಟಾ ಟೆಕ್ಲಾ ಬಳಿಯ ನೆರೆಹೊರೆಯಲ್ಲಿರುವ 2001 ರ ಎಲ್ ಸಾಲ್ವಡಾರ್ ಭೂಕಂಪ-ಪ್ರೇರಿತ ಭೂಕುಸಿತವು ಹಲವಾರು ಮನೆಗಳನ್ನು ಟನ್‌ಗಟ್ಟಲೆ ಮಣ್ಣಿನ ಅಡಿಯಲ್ಲಿ ಹೂತುಹಾಕಿತು. ಹಾಟ್ಸ್ಪಾಟ್ಸ್ ವರದಿಯು ಎಲ್ ಸಾಲ್ವಡಾರ್ ಭೂಕುಸಿತ, ಭೂಕಂಪಗಳು, ಪ್ರವಾಹಗಳು ಮತ್ತು ಚಂಡಮಾರುತಗಳಿಗೆ ಹೆಚ್ಚಿನ ಅಪಾಯದಲ್ಲಿದೆ ಎಂದು ಗುರುತಿಸಿದೆ” ಎಂದು ಫೋಟೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದೇ ರೀತಿಯ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು, ವೈರಲ್ ಚಿತ್ರವು ಕೇರಳದ ವಯನಾಡ್‌ನಲ್ಲಿ ಜುಲೈ 2024 ರ ಭೂಕುಸಿತಕ್ಕೆ ಸಂಬಂಧಿಸಿಲ್ಲ ಎಂದು ದೃಢಪಡಿಸುತ್ತದೆ.

“ಉದಾಹರಣೆಗೆ, ಎಲ್ ಸಾಲ್ವಡಾರ್ನಲ್ಲಿ ಜನವರಿ 13, 2001 ರ ಭೂಕಂಪದ ಸಮಯದಲ್ಲಿ, ಲಾಸ್ ಕೊಲಿನಾಸ್ ಭೂಕುಸಿತವು 500 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು, ಭೂಕಂಪಕ್ಕೆ ಸಂಬಂಧಿಸಿದ ಬಲಿಪಶುಗಳಲ್ಲಿ ಸುಮಾರು ಮೂರನೇ ಎರಡರಷ್ಟು” ಎಂದು ಜನವರಿ 15, 2021 ರ ಎನ್ಸೈಕ್ಲೋಪೀಡಿಯಾ ಆಫ್ ದಿ ಎನ್ವಿರಾನ್ಮೆಂಟ್‌ನಲ್ಲಿನ ನಮೂದು ವೈರಲ್ ಫೋಟೋವನ್ನೇ ತೋರಿಸುತ್ತದೆ.


ಇದನ್ನು ಓದಿ: ವಯನಾಡಿನ ಸಂತ್ರಸ್ತರಿಗೆ RSS ಸಹಾಯ ಮಾಡುತ್ತಿದೆ ಎಂದು ಹಳೆಯ ಮತ್ತು ಸಂಬಂಧವಿರದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ


ವೀಡಿಯೋ ನೋಡಿ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *