Fact Check | ಐಟಿ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬುದು ಸುಳ್ಳು

ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನ ಜೊತೆಗೆ ಆದೇಶ ಪತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದನ್ನು ಗಮನಿಸಿದ ಹಲವರು ವ್ಯಾಪಕವಾಗಿ ಇದು ನಿಜವಾದ ಸರ್ಕಾರಿ ಆದೇಶವೆಂದು ಭಾವಿಸಿ ಹಲವರಿಗೆ ಶೇರ್‌ ಮಾಡುತ್ತಿದ್ದಾರೆ. ಹೀಗಾಗಿ ಈ ಸುದ್ದಿ ವೈರಲ್‌ ಕೂಡ ಆಗುತ್ತಿದೆ.

ಇನ್ನಷ್ಟು ಮಂದಿ ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆಯೇ ಹೊಸದಾದ ನಿಯಮವನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಪ್ರತೀ ವರ್ಷ ಆಗಸ್ಟ್ 31ರಂದು ಐಟಿಆರ್ ಅಂದರೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾಗಿ ಬದಲಾಯಿಸಲಾಗಿದೆ, ಈ ಮೂಲಕ ಕೇಂದ್ರ ಮಹತ್ತರವಾದ ಬದಲಾವಣೆಯನ್ನು ತರಲು ಹೊರಟಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು  ಈ ಕುರಿತು ಯಾವುದಾದರೂ ಸುದ್ದಿ ಮಾಧ್ಯಮಗಳು ವರದಿಯನ್ನು ಪ್ರಕಟ ಮಾಡಿವೆಯೇ ಎಂದು ಪರಿಶೀಲನೆಯನ್ನು ನಡೆಸಿದೆವು. ಆದರೆ ನಂಬಿಕೆಗೆ ಅರ್ಹವಾದ ಯಾವುದೇ ಸುದ್ದಿ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಎಲ್ಲಾ ಮಾಧ್ಯಮಗಳು ವರದಿ ಮಾಡಬೇಕಿತ್ತು, ಆದರೆ ಅಂತಹ ಯಾವ ಬೆಳವಣಿಗೆಗಳು ಇಲ್ಲಿ ಕಂಡು ಬಂದಿಲ್ಲ.

ಇನ್ನು, ಇನ್ಕಮ್ ಟ್ಯಾಕ್ಸ್ ಇಂಡಿಯಾ ಎಕ್ಸ್ ಖಾತೆಯನ್ನು ನಾವು ಪರಿಶೀಲನೆ ನಡೆಸಿದವು. ಈ ವೇಳೆ ನಮಗೆ 22 ಜುಲೈ 2018 ರಂದು ಗುಜರಾತ್ ಸುದ್ದಿವಾಹಿನಿ ಸಂದೇಶ್‌ ನ್ಯೂಸ್‌ ಕ್ಲಿಪಿಂಗ್‌ವೊಂದನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ. ಇದರ ಜೊತೆಗೆ “ಸಾಮಾಜಿಕ ಜಾಲತಾಣದಲ್ಲಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಲ್ಪಟ್ಟಿದೆ ಎಂದು ಸಂದೇಶ ನ್ಯೂಸ್ ಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡಿದೆ. ಇದು ನಮ್ಮ ಗಮನಕ್ಕೂ ಬಂದಿದೆ ಆದರೆ ಈ ಸುದ್ದಿ ಸುಳ್ಳು ಯಾವುದೇ ಅಧಿಕೃತ ಮಾಹಿತಿಗಾಗಿ ನಮ್ಮ ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲಿಸಿ” ಎಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ  ಹೀಗಾಗಿ ವೈರಲ್ ಸುದ್ದಿ ಸುಳ್ಳು ಎಂಬುದು ಈ ಎಕ್ಸ್‌ ಖಾತೆಯ ಪೋಸ್ಟ್‌ನಿಂದ ತಿಳಿದು ಬಂದಿದೆ.

ಇದರ ಜೊತೆಗೆ 30 ಜುಲೈ 2024ರಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಕೂಡ ಈ ಕುರಿತು ಸತ್ಯಶೋಧನೆಯನ್ನು ನಡೆಸಿದ್ದು ಇನ್ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸಲ್ಲಿಸುವ ದಿನಾಂಕದ ವಿಸ್ತರಣೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಇಂತಹ ಸುಳ್ಲೂ ಸುದ್ದಿಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಪೋತನ್ನ ಎಕ್ಸ್‌ ಖಾತೆಯಲ್ಲಿನ ಪೋಸ್ಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತೆ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 31 ಎಂಬುದು ಸುಳ್ಳು. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತಮ.


ಇದನ್ನೂ ಓದಿ : Fact Check: ರಾಹುಲ್ ಗಾಂಧಿ ವೀಡಿಯೋವನ್ನು ಎಡಿಟ್‌ ಮಾಡಿ ಹಿಂದುಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *