Fact Check: ಮುಂಬೈನಲ್ಲಿ ಬಾರ್ಬರ್ ಜಿಹಾದ್‌ ಎಂದು ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

ಜಿಹಾದ್

ಮುಂಬೈನ ಬಾಂದ್ರಾದಲ್ಲಿ ಕ್ಷೌರಿಕ ಜಿಹಾದ್ ಅನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಬಂಧಿತ ಇಬ್ಬರು ವ್ಯಕ್ತಿಗಳ ಚಿತ್ರವನ್ನು ಹಂಚಿಕೊಂಡಿರುವ ಈ ಪೋಸ್ಟ್‌ಗಳಲ್ಲಿ, ಕ್ಷೌರಿಕ ಅಂಗಡಿಗಳಿಗೆ ಭೇಟಿ ನೀಡುವ ಹಿಂದೂ ಗ್ರಾಹಕರಿಗೆ ಎಚ್ಐವಿ / ಏಡ್ಸ್ ರೋಗವನ್ನು ಹರಡಲು ಮಸೀದಿಗಳು ಧನಸಹಾಯ ನೀಡುತ್ತಿವೆ ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ಈ ಕುರಿತು ಹುಡುಕಲು ನಾವು ಚೈರಲ್ ಪೋಟೋವನ್ನು ರಿವರ್ಸ್‌ ಇಮೆಜ್‌ ಸರ್ಚ್‌ನಲ್ಲಿ ಹುಡುಕಿದಾಗ, ಅದೇ ಫೋಟೋ ಜುಲೈ 18, 2013 ರಂದು ‘ಇಂಡಿಯಾ ಟಿವಿ’ ಸುದ್ದಿ ವೆಬ್ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಕಂಡುಬಂದಿದೆ. ಇದು 2013 ರಲ್ಲಿ ಕ್ರೆಡಿಟ್ ಕಾರ್ಡ್ ಕಳ್ಳತನದ ಆರೋಪದ ಮೇಲೆ ಬಂಧಿಸಲ್ಪಟ್ಟಾಗ ಭೋಜ್ಪುರಿ ನಟ ಇರ್ಫಾನ್ ಖಾನ್ ಮತ್ತು ಅವರ ಸ್ನೇಹಿತ ಸಂಜಯ್ ಯಾದವ್ ಅವರ ಚಿತ್ರವಾಗಿದೆ ಎಂದು ‘ಇಂಡಿಯಾ ಟಿವಿ’ ವರದಿ ಮಾಡಿದೆ. “ಕ್ರೆಡಿಟ್ ಕಾರ್ಡ್‌ಗಳು, ಚೆಕ್ ಪುಸ್ತಕಗಳು ಮತ್ತು ಬಿಲ್ ಪುಸ್ತಕಗಳನ್ನು ಕದ್ದು ನಂತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದ ಆರೋಪದ ಮೇಲೆ ಪ್ರಸಿದ್ಧ ಭೋಜ್ಪುರಿ ನಟ ಇರ್ಫಾನ್ ಖಾನ್ ಮತ್ತು ಅವರ ಸ್ನೇಹಿತ ಸಂಜಯ್ ಯಾದವ್ ಅವರನ್ನು ಮುಂಬೈ ಪೊಲೀಸರು ಬಿಹಾರದ ಛಾಪ್ರಾ ಜಿಲ್ಲೆಯಿಂದ ಬಂಧಿಸಿದ್ದಾರೆ” ಎಂದು ಫೋಟೋದ ವಿವರಣೆಯಲ್ಲಿ ತಿಳಿಸಲಾಗಿದೆ.

‘ಇಂಡಿಯಾ ಟಿವಿ’, ‘ಎಬಿಪಿ ನ್ಯೂಸ್’ ಮತ್ತು ‘ಟಿವಿ 9 ಭಾರತ್ ವರ್ಷ್’ ಸುದ್ದಿ ವಾಹಿನಿಗಳು 2013 ರಲ್ಲಿ ಭೋಜ್ಪುರಿ ನಟ ಇರ್ಫಾನ್ ಖಾನ್ ಅವರ ಬಂಧನವನ್ನು ವರದಿ ಮಾಡುವ ವೀಡಿಯೊಗಳನ್ನು ಪ್ರಕಟಿಸಿದ್ದಾವೆ. ಇತ್ತೀಚೆಗೆ, ಮುಂಬೈ ಪೊಲೀಸರು ಬಾಂದ್ರಾ ಅಥವಾ ಮುಂಬೈನ ಯಾವುದೇ ಸ್ಥಳದಲ್ಲಿ ‘ಬಾರ್ಬರ್ ಜಿಹಾದ್’ ಅಪರಾಧವನ್ನು ಬಹಿರಂಗಪಡಿಸುವ ಬಗ್ಗೆ ಯಾವುದೇ ಸುದ್ದಿ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂಗಳಿಗೆ ಏಡ್ಸ್ ಹರಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಹಿಡಿದ ಮುಸ್ಲಿಂ ಕ್ಷೌರಿಕರು ಎಂದು ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ನಿತಿನ್ ಗಡ್ಕರಿಯವರು ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೆ ಟೋಲ್‌ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿಲ್ಲ


ವೀಡಿಯೋ ನೋಡಿ: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *