Fact Check | ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಚೀನಿ ಅಥ್ಲೆಟ್‌ ಪ್ಯಾಲೆಸ್ತೀನ್‌ ಧ್ವಜದ ಬಟ್ಟೆ ಧರಿಸಿದ್ದಾರೆ ಎಂಬುದು ಸುಳ್ಳು

“ಪ್ಯಾಲಿಸ್ತೀನ್‌ ಧ್ವಜದಿಂದ ಪ್ರೇರಣೆ ಪಡೆದು ಚೀನಾದ ಅಥ್ಲೆಟ್‌ಗಳು ಪ್ಯಾಲಿಸ್ತೀನ್‌ ಧ್ವಜಕ್ಕೆ ಹೋಲಿಕೆ ಆಗುವಂತೆ ಹಸಿರು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ ರೀತಿ ಪ್ಯಾರಿಸ್‌ ಒಲಂಪಿಕ್‌ಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಚೀನ ಇಸ್ರೇಲ್‌ ವಿರುದ್ಧವಾಗಿ ಹಾಗೂ ಪ್ಯಾಲೆಸ್ತೀನ್‌ ಪರವಾಗಿ ನಿಂತುಕೊಂಡಿದೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ವೀಕ್ಷಿಸಿದ ಹಲವು ಮಂದಿ ಇದು ನಿಜವೆಂದು ಭಾವಿಸಿದ್ದಾರೆ.

ಸಾಕಷ್ಟು ಮಂದಿ ಇದೇ ಫೋಟೋವನ್ನು ಹಂಚಿಕೊಂಡು “ಚೀನಾ ಅಥ್ಲೆಟ್‌ಗಳು ಪ್ಯಾರಿಸ್ ಒಲಂಪಿಕ್‌ನಲ್ಲಿ ಈ ರೀತಿಯಾದ ದೃಢ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ರೀತಿ ಎಲ್ಲಾ ದೇಶಗಳು ಹೊಸ ಹೆಜ್ಜೆಯನ್ನಿಟ್ಟು ಪ್ಯಾಲಿಸ್ತೀನ್‌  ಬೆಂಬಲಿಸಬೇಕು” ಎಂದು  ಫೋಟೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋಗೆ ಸಂಬಂಧಿಸಿದಂತೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 20 ಆಗಸ್ಟ್ 2023 ರಂದು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಒಂದು ಕಂಡು ಬಂದಿದೆ. ಈ ಪೋಸ್ಟ್ ಮೂಲಕ ವೈರಲ್ ಆಗುತ್ತಿರುವ ಫೋಟೋ ಇತ್ತೀಚಿನ ಪ್ಯಾರಿಸ್ ಒಲಂಪಿಕ್ ಗೆ ಸಂಬಂಧಪಟ್ಟದ್ದಲ್ಲ ಎಂಬುದು ಸಾಬೀತಾಗಿದೆ.

ಈ ಪೋಸ್ಟ್‌ನಲ್ಲಿ ಕಂಡು ಬಂದ ಕೆಲವೊಂದು ಅಂಶಗಳನ್ನು ಬಳಸಿ ಅಂತರ್ಜಾಲದಲ್ಲಿ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ VOGUE ಚೀನಾ ತನ್ನ ಸೆಪ್ಟೆಂಬರ್ 2023 ರ ಆವೃತ್ತಿಯನ್ನು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ ಆಚರಣೆಯನ್ನು ಗೌರವಿಸಲು “ಅಥ್ಲೆಟಿಸಮ್‌ನ ಸ್ಪಿರಿಟ್” ಗೆ ಈ ಫೋಟೋ ಶೂಟ್‌ ಮೂಲಿಕ ಗೌರವ ಸಮರ್ಪಿಸಿದೆ ಎಂದು ತಿಳಿದು ಬಂದಿದೆ. VOGUE ಚೀನಾದ ವೆಬ್‌ಸೈಟ್‌ನಲ್ಲಿ ಕವರ್ ಸ್ಟೋರಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಇದು ವೈರಲ್ ಫೋಟೋ ಜೊತೆಗೆ ಹಾಂಗ್‌ನ ಹಲವಾರು ಇತರ ಚಿತ್ರಗಳನ್ನು ಒಳಗೊಂಡಿರುವುದು ಪತ್ತೆಯಾಗಿದೆ. ಇನ್ನು ಚೀನಾ ಅಥ್ಲೇಟ್‌ಗಳು ಪ್ಯಾರಿಸ್‌ ಒಲಂಪಿಕ್‌ನಲ್ಲಿ ಅಧಿಕೃತವಾಗಿ ಕೆಂಪು ಮತ್ತು ಬಿಳಿ ಬಣ್ಣಗಳ ಬಟ್ಟೆಯನ್ನು ಧರಿಸುತ್ತಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತೆ ಪ್ಯಾಲಿಸ್ತೀನ್‌ಗೆ ಬೆಂಬಲ ಸೂಚಿಸಲು ಅಥವಾ ಇಸ್ರೇಲ್‌ ವಿರುದ್ಧ ಪ್ರತಿಭಟಿಸಲು ಚೀನಿ ಅಥ್ಲೇಟ್‌ಗಳು ಕೆಂಪು,ಬಿಳಿ, ಹಸಿರು ಬಣ್ಣದಿಂದ ಆವೃತ್ತವಾದ ಫೋಟೋಶೂಟ್‌ ಮಾಡಿಸಿದ್ದಾರೆ ಎಂಬುದು ಸುಳ್ಳು. ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಅಪರಾಧವಾಗಿದೆ. ಹಾಗಾಗಿ ಎಚ್ಚರ ವಹಿಸಿ.


ಇದನ್ನೂ ಓದಿ ; Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *