Fact Check: ಏಷ್ಯನ್ ದಾಖಲೆ ಮುರಿದ ಭಾರತೀಯ ಪುರುಷರ ರಿಲೇ ತಂಡದ 2023ರ ವಿಡಿಯೋ ಇತ್ತೀಚಿನದು ಎಂದು ವೈರಲ್

ಕಳೆದ ವರ್ಷದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ಭಾರತೀಯ ಪುರುಷರ ರಿಲೇ ತಂಡವು 2 ನಿಮಿಷ 59.05 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಏಷ್ಯನ್ ದಾಖಲೆಯನ್ನು ಮುರಿಯುವ ವೀಡಿಯೊ ಇತ್ತೀಚಿನದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

4 ನಿಮಿಷ 14 ಸೆಕೆಂಡುಗಳ ವೀಡಿಯೊದಲ್ಲಿ ಭಾರತದ ಪುರುಷರ 4×400 ಮೀಟರ್ ರಿಲೇ ತಂಡವು ಗ್ರೇಟ್ ಬ್ರಿಟನ್ ಮತ್ತು ಜಪಾನ್ ನಂತಹ ತಂಡಗಳನ್ನು ಹಿಂದಿಕ್ಕಿ, 2 ನಿಮಿಷ 59.05 ಸೆಕೆಂಡುಗಳಲ್ಲಿ ಗುರಿ ತಲುಪಿ ಯುನೈಟೆಡ್ ಸ್ಟೇಟ್ಸ್ ನಂತರ ಎರಡನೇ ಸ್ಥಾನವನ್ನು ಗಳಿಸಿತು ಮತ್ತು ಆ ಮೂಲಕ ವಿಶ್ವ ಚಾಂಪಿಯನ್ ಶಿಪ್ ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಿತು. “ಭಾರತದ 4 × 400 ಪುರುಷರ ರಿಲೇ ತಂಡವು ವಿಶ್ವ ಫೈನಲ್ಸ್‌ನಲ್ಲಿ ಮೊದಲ ಬಾರಿಗೆ ಅರ್ಹತೆ ಪಡೆದಿದೆ ಮತ್ತು ಏಷ್ಯನ್ ದಾಖಲೆಯನ್ನು ಮುರಿದಿದೆ. ಯಾರೂ ಅವರನ್ನು ನಿರೀಕ್ಷಿಸಿರಲಿಲ್ಲ!! ವಾಹ್ ಎಂತಹ ಅದ್ಭುತ ಪ್ರದರ್ಶನ!” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಪೋಸ್ಟ್ ವೀಕ್ಷಿಸಲು ಮತ್ತು ಆರ್ಕೈವ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಫ್ಯಾಕ್ಟ್ ಚೆಕ್: ಘಟನೆಯ ಬಗ್ಗೆ ಸುದ್ದಿ ವರದಿಗಳನ್ನು ಕಂಡುಹಿಡಿಯಲು ನಾವು ಮೊದಲು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಈ ಘಟನೆ ಆಗಸ್ಟ್ 2023 ರಲ್ಲಿ ಸಂಭವಿಸಿದೆ ಎಂದು ಉಲ್ಲೇಖಿಸುವ ಹಲವಾರು ಸುದ್ದಿ ವರದಿಗಳು ಲಭ್ಯವಾಗಿವೆ.

ಆಗಸ್ಟ್ 27, 2023 ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, “ಭಾರತೀಯ ಪುರುಷರ 4×400 ಮೀಟರ್ ರಿಲೇ ತಂಡವು ಅದ್ಭುತ ರೇಸ್‌ನಲ್ಲಿ ಏಷ್ಯನ್ ದಾಖಲೆಯನ್ನು ಮುರಿದಿದೆ, ಆಗಸ್ಟ್ 26 ರಂದು ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಮೊದಲ ಅಂತಿಮ ಸುತ್ತಿಗೆ ಅರ್ಹತೆ ಪಡೆಯಿತು. ಮುಹಮ್ಮದ್ ಅನಾಸ್ ಯಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ವರಿಯತೋಡಿ ಮತ್ತು ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತ ತಂಡ ಹೀಟ್ ನಂಬರ್ 1ರಲ್ಲಿ ಅಮೆರಿಕದ (2:58.47) ನಂತರ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದೆ.

ನಾವು ಎಕ್ಸ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಹಲವಾರು ಸಂಸತ್ ಸದಸ್ಯರು ಮತ್ತು ಮಂತ್ರಿಗಳು 2023 ರಲ್ಲಿ ಭಾರತೀಯ ತಂಡವನ್ನು ಅವರ ಸಾಧನೆಗಾಗಿ ಅಭಿನಂದಿಸಲು ಅದೇ ತುಣುಕನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಕೊಂಡಿದ್ದೇವೆ.

ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರೆಕ್ ಒ’ಬ್ರಿಯಾನ್ ಅವರು ಆಗಸ್ಟ್ 27, 2023 ರಿಂದ ಮಾಡಿದ ಪೋಸ್ಟ್ ಅದೇ ತುಣುಕನ್ನು ಹೊಂದಿದೆ.

ಪೋಸ್ಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ರಿಲೇ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಕಾರ್ಯಕ್ರಮದ ವೀಡಿಯೊವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, “ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ  ನಂಬಲಾಗದ ತಂಡದ ಕೆಲಸ! ಅನಾಸ್, ಅಮೋಜ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರು ಎಂ 4×400 ಮೀಟರ್ ರಿಲೇಯಲ್ಲಿ ಹೊಸ ಏಷ್ಯನ್ ದಾಖಲೆಯನ್ನು ನಿರ್ಮಿಸಿದರು. ಇದು ಭಾರತೀಯ ಅಥ್ಲೆಟಿಕ್ಸ್‌ಗೆ ನಿಜವಾಗಿಯೂ ಐತಿಹಾಸಿಕವಾದ ವಿಜಯದ ಪುನರಾಗಮನವಾಗಿ ನೆನಪಿನಲ್ಲಿ ಉಳಿಯುತ್ತದೆ. ಎಂಬ ಶೀರ್ಷಿಕೆ ನೀಡಿದ್ದಾರೆ.

ಪೋಸ್ಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಆದಾಗ್ಯೂ, ಫೈನಲ್‌ಗೆ ಅರ್ಹತೆ ಪಡೆಯಲು ಅದ್ಭುತ ಪ್ರದರ್ಶನದ ಹೊರತಾಗಿಯೂ, ಭಾರತೀಯ ತಂಡವು ಫೈನಲ್‌ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯಲು ವಿಫಲವಾಯಿತು ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಐದನೇ ಸ್ಥಾನದಲ್ಲಿ ಕೊನೆಗೊಂಡಿತು.


ಇದನ್ನು ಓದಿ: 2015 ರಲ್ಲಿ ಮುಂಬೈನ ಸ್ಥಳೀಯ ರೈಲು ಪ್ಲಾಟ್ಫಾರ್ಮ್‌ಗೆ ಡಿಕ್ಕಿ ಹೊಡೆದ ವೀಡಿಯೊವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ


ವೀಡಿಯೋ ನೋಡಿ: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು | Siddaramaiah


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *