Fact Check: ಭಾರತದಲ್ಲಿ ಗೋಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ 5 ಹಿಂದುಗಳ ಒಡೆತನದವುಗಳಾಗಿವೆ

ಗೋಮಾಂಸ

ಗೋ ಮಾಂಸದ ರಪ್ತಿನಲ್ಲಿ ಭಾರತವು ಜಗತ್ತಿನ ಎರಡನೇ ಸ್ಥಾನಕ್ಕೇರುತ್ತಿದ್ದಂತೆ ಈಗ ದೇಶದಾದ್ಯಂತ ಗೋಮಾಂಸ ರಪ್ತಿನ ಕುರಿತು ಮತ್ತು ಗೋಮಾಂಸ ರಪ್ತು ಮಾಡುತ್ತಿರುವ ಕಂಪನಿಗಳು ಮತ್ತು ಅವುಗಳ ಒಡೆತನಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಗೋಮಾಂಸ ರಪ್ತಿನಲ್ಲಿ ಹಿಂದುಗಳ ಪಾತ್ರವು ಇದೆ. ಪ್ರಭಲ ಜಾತಿಗಳಿಗೆ(ಸಸ್ಯಹಾರಿಗಳಾದ ಬ್ರಾಹ್ಮಣ, ಬನಿಯಾ ಮತ್ತು ಜೈನ) ಸೇರಿದ ಅನೇಕರು ಮತ್ತು ಬಿಜೆಪಿ ಪಕ್ಷದ ಮುಖಂಡರೂ ಸಹ ಗೋಮಾಂಸ ರಪ್ತಿನ ವ್ಯಾಪಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಲೇಖನದ ಮೂಲಕ ವಿಸ್ತಾರವಾಗಿ ಈ  ಆರೋಪ ಮತ್ತು ವಾಸ್ತವ ಸಂಗತಿಗಳನ್ನು ಆಧಾರ ಸಮೇತ ನಿರೂಪಿಸಲಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಒಂದು ಹರಿದಾಡುತ್ತಿದ್ದು ಅದರಲ್ಲಿ “ಗೋ ಹತ್ಯೆ ನಿಷೇಧ ಮಸೂದೆ ಮಂಡಿಸಿದ ಬಿಜೆಪಿ ಸರಕಾರಕ್ಕೆ ಧನ್ಯವಾದಗಳು, ಆದ್ದರಿಂದ ಸರಕಾರ ಈ ಕಂಪನಿಗಳ ವಿರುದ್ಧ ನಿಷ್ಟುರವಾದ ಕ್ರಮ ಕೈಗೊಳ್ಳಬೇಕಾಗಿದೆ. ಗೊ ಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳು:1.BJP MLA& ಸಂಘಪರಿವಾರ ಮುಖಂಡ ಸಂಗೀತ್ ಸೋಮ್ ಅಲ್ ದುವ exports ಕಂಪನಿ, 2. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನದ ಹಿಂದು ಆಗ್ರೋ ಇಂಡಸ್ಟ್ರೀಸ್,  3. ಸುನಿಲ್ ಸೊದ್ ಒಡೆತನದ ಅಲ್ ನೂರ್ exports. 4. ಸತೀಶ್ & ಅತುರ್ ಸಬಲ್ ವಾಲ್ ಒಡೆತನದ ಅಲ್ ಕಬೀರ್ exports.  5. ಇಂದ್ರಾಣಿ ನೂಹಿ ಕೇರಳ ಬ್ರಾಹ್ಮಣೆ ಒಡೆತನದ ನೂಹಿ exports ಕಂಪನಿ. 6. ಸುನಿಲ್ ಕಪೂರ್ ಒಡೆತನದ ಅರೆಬಿಯನ್ exports ಕಂಪನಿ. 7. ಮದನ್ ಅಬ್ಲೊಟ್ ರವರ MKR exports. 8. A.S.ಬಿಂದ್ರಾ ರವರ PML Exports” ಎಂದು ಆರೋಪಿಸಲಾಗುತ್ತಿದೆ. ಇದನ್ನು ಅನೇಕರು ತಮ್ಮ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್: ಈ ಕುರಿತು ನಾವು ಭಾರತದ ಪ್ರಮುಖ ಗೋಮಾಂಸ ರಪ್ತು ಕಂಪನಿಗಳು ಮತ್ತು ಅವುಗಳ ಮಾಲಿಕತ್ವದ ಕುರಿತು ಹುಡುಕಿದಾಗ, ಭಾರತವು ಗೋಮಾಂಸದ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ ಮತ್ತು  2022 ರಲ್ಲಿಯೇ, ಬ್ರೆಜಿಲ್ ನಂತರ ಭಾರತವು ವಿಶ್ವದ 2 ನೇ ಅತಿದೊಡ್ಡ ಗೋಮಾಂಸ ರಫ್ತುದಾರ ದೇಶವಾಗಿದ್ದು, $ 5.9 ಬಿಲಿಯನ್ ಮೌಲ್ಯದ ರಫ್ತುಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಸುಮಾರು 150 ಗೋಮಾಂಸ ರಫ್ತುದಾರರಿದ್ದಾರೆ. ಭಾರತವು ಪ್ರಾಥಮಿಕವಾಗಿ ಎಮ್ಮೆ ಮಾಂಸವನ್ನು ರಫ್ತು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ವಾರ್ಷಿಕವಾಗಿ ಸುಮಾರು 1.3 ರಿಂದ 1.4 ಮಿಲಿಯನ್ ಮೆಟ್ರಿಕ್ ಟನ್ ಗೋಮಾಂಸವನ್ನು ರಫ್ತು ಮಾಡಿದೆ. ಭಾರತ ಸೇರಿದಂತೆ ಸುಮಾರು 50 ದೇಶಗಳಿಗೆ ಗೋಮಾಂಸ ರಫ್ತು ಮಾಡುತ್ತದೆ ಪ್ರಮುಖವಾಗಿ ವಿಯೆಟ್ನಾಂ, ಮಲೇಷಿಯಾ, ಈಜಿಪ್ಟ್, ಇಂಡೋನೇಷಿಯಾ, ಇರಾಕ್, ಸೌದಿ ಅರೇಬಿಯಾ, ಫಿಲಿಪೈನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ ಸೇರಿವೆ.

ಇನ್ನೂ ಗೋಮಾಂಸ ರಪ್ತು ಕಂಪನಿಗಳು ಮತ್ತು ಮಾಲಿಕರ ಕುರಿತು ಹುಡುಕಿದಾಗ ಭಾರತದ ಪ್ರಮುಖ 10 ಕಂಪನಿಗಳ ಹೆಸರುಗಳು ಮತ್ತು ಅವುಗಳ ಮಾಲಿಕತ್ವದ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ.

  1. ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್ಅಲಾನಾ ಕುಟುಂಬದ ಒಡೆತನದಲ್ಲಿದೆ.
  2. ಅಲ್-ಕಬೀರ್ ಎಕ್ಸ್‌ಪೋರ್ಟ್ಸ್ ಪ್ರೈ. Ltd. – ಸತೀಶ್ ಮತ್ತು ಅತುಲ್ ಸಬರ್ವಾಲ್ ಒಡೆತನದಲ್ಲಿದೆ.
  3. ಅಲ್-ಹಮ್ದ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ಅಲ್-ಹಮ್ದ್ ಕುಟುಂಬದ ಒಡೆತನದಲ್ಲಿದೆ.
  4. ಮಿರ್ಹಾ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ಮಿರ್ಹಾ ಕುಟುಂಬದ ಒಡೆತನದಲ್ಲಿದೆ.
  5. MK ಓವರ್‌ಸೀಸ್ ಪ್ರೈವೇಟ್ ಲಿಮಿಟೆಡ್ಮದನ್ ಅಬಾಟ್ ಮಾಲೀಕತ್ವದಲ್ಲಿದೆ.
  6. HMA ಅಗ್ರೋ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್HMA ಕುಟುಂಬದ ಒಡೆತನದಲ್ಲಿದೆ.
  7. ಅಲ್-ದುವಾ ಫುಡ್ ಪ್ರೊಸೆಸಿಂಗ್ ಪ್ರೈ. ಲಿಮಿಟೆಡ್ಅಲ್-ದುವಾ ಕುಟುಂಬದ ಒಡೆತನದಲ್ಲಿದೆ.
  8. ಅಮ್ರೂನ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ಅಮ್ರೂನ್ ಕುಟುಂಬದ ಒಡೆತನದಲ್ಲಿದೆ.
  9. ಅರೇಬಿಯನ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್ಸುನಿಲ್ ಕಪೂರ್ ಮಾಲೀಕತ್ವ.
  10. P.M.L Industries Pvt. Ltd.A.S ಬಿಂದ್ರಾ ಒಡೆತನದಲ್ಲಿದೆ.

ಈ ಹೆಸರುಗಳ ಮೂಲಕ ಗೋ ಮಾಂಸ ರಪ್ತು ಕಂಪನಿಗಳ ಮಾಲಿಕರು ಮತ್ತು ಅವರ ಧರ್ಮದ ಮೂಲಗಳ ಬಗ್ಗೆಯೂ ತಿಳಿಯಬಹುದು. ಈ ಹತ್ತು ಪ್ರಮುಖ ಕಂಪನಿಗಳಲ್ಲಿ 1. ಸತೀಶ್ ಮತ್ತು ಅತುಲ್ ಸಬರ್ವಾಲ್ ಒಡೆತನದ ಅಲ್-ಕಬೀರ್ ಎಕ್ಸ್‌ಪೋರ್ಟ್ಸ್ ಪ್ರೈ. Ltd, 2. ಮದನ್ ಅಬಾಟ್ ಮಾಲೀಕತ್ವದ MK ಓವರ್‌ಸೀಸ್ ಪ್ರೈವೇಟ್ ಲಿಮಿಟೆಡ್ , 3. ಸುನಿಲ್ ಕಪೂರ್ ಮಾಲೀಕತ್ವ ಅರೇಬಿಯನ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್ ಮತ್ತು 4.  A.S ಬಿಂದ್ರಾ ಒಡೆತನದ P.M.L Industries Pvt. Ltd. ಹಿಂದುಗಳಿಗೆ ಸೇರಿದ್ದಾಗಿದೆ. 

ಇದಲ್ಲದೆ ಗೋಮಾಂಸ-ವಿರೋಧಿ ಪ್ರತಿಭಟನೆಗಳ ಮುಂಚೂಣಿಯಲ್ಲಿರುವ ಬಿಜೆಪಿ ಶಾಸಕ ಸಂಗೀತ್ ಸಿಂಗ್ ಸೋಮ್ ಕೂಡ ಅಲ್-ದುವಾ ಫುಡ್ ಪ್ರೊಸೆಸಿಂಗ್ ಪ್ರೈ.ಲಿಮಿಟೆಡ್ ಕಂಪನಿಯನ್ನು ಮೊಯಿನುದ್ದೀನ್ ಖುರೇಷಿ ಮತ್ತು ಮೂರನೇ ಪಾಲುದಾರರೊಂದಿಗೆ 2005 ರಲ್ಲಿ ಭಾರತದ ಪ್ರಮುಖ ಹಲಾಲ್ ಮಾಂಸ ರಫ್ತು ಕಂಪನಿಗಳಲ್ಲಿ ಒಂದನ್ನು ಸ್ಥಾಪಿಸಿದ್ದಾರೆ. ಎಂದು ದ ಹಿಂದು ದಾಖಲೆ ಸಮೇತ ವರದಿ ಮಾಡಿದೆ.

ನ್ಯಾಷನಲ್ ಹೆರಾಲ್ಡ್‌ ಅವರು ವರದಿಯೊಂದನ್ನು ಪ್ರಕಟಿಸಿ “ಕೇರಳದಂತಹ ಗೋಮಾಂಸ ಸೇವಿಸುವ ರಾಜ್ಯಗಳು ಮತ್ತು ಕ್ರಿಶ್ಚಿಯನ್ನರು ಇರುವ ಬಹುಸಂಖ್ಯಾತ ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ವಿಷಯದಲ್ಲಿ ಬಿಜೆಪಿ ಯಾವಾಗಲೂ ದ್ವಿಗುಣವನ್ನು ಕಾಯ್ದುಕೊಂಡಿದೆ.” ಎಂದು ಆರೋಪಿಸಿದೆ. ಮತ್ತು ಈ ರಾಜ್ಯಗಳಲ್ಲಿ ಬಿಜೆಪಿ ಮತ್ತು RSS ಮುಖಂಡರು ಗೋಮಾಂಸ ಸೇವನೆ ಮತ್ತು ರಪ್ತಿನಲ್ಲಿ ಭಾಗಿಯಾಗಿರುವುದನ್ನು ವರದಿ ಮಾಡಿದೆ. ಕೇರಳದಲ್ಲಿ ಗೋಮಾಂಸ ಮಾರಾಟ ಮಾಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಹಕಾರ ಸಂಘವನ್ನು ಆರಂಭಿಸಿರುವ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಗೋಮಾಂಸ ರಪ್ತು ಮಾಡುವ ಒಟ್ಟು 5 ಕಂಪನಿಗಳು ಹಿಂದುಗಳ ಒಡೆತನದಲ್ಲಿದ್ದರೆ, ಇನ್ನೂ ಉಳಿದಂತೆ ಐದು ಮುಸ್ಲಿಂ ಒಡೆತನಕ್ಕೆ ಸೇರಿದ್ದಾಗಿದೆ.  ಇಷ್ಟೇ ಅಲ್ಲದೇ ಇತರೆ ಕಂಪನಿಗಳಲ್ಲಿಯೂ ಸಹ ಹಿಂದು ಮತ್ತು ಜೈನ ಸಮುದಾಯವರು ಶೇರುದಾರರಾಗಿದ್ದಾರೆ. ಈ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿದ್ದು ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಓದಬಹುದು.

ಭಾರತದ ಅತಿ ದೊಡ್ಡ ಗೋಮಾಂಸ ರಫ್ತುದಾರ ಕಂಪನಿಗಳ ವಿಶ್ಲೇಷಣೆ:

ಭಾರತವು ಪ್ರಪಂಚದಾದ್ಯಂತ 891.9 USD ಮಿಲಿಯನ್ ಮೌಲ್ಯದೊಂದಿಗೆ ಎಮ್ಮೆ ಮಾಂಸವನ್ನು ರಫ್ತು ಮಾಡುತ್ತಿದೆ. ಗೋಮಾಂಸ ವ್ಯಾಪಾರದಲ್ಲಿ ಹೆಚ್ಚಳವು ವಿವಿಧ ಅಂಶಗಳಿಂದಾಗಿರುತ್ತದೆ. ಪ್ರಮುಖ ಕಾರಣಗಳಲ್ಲಿ ಒಂದು ರಂಜಾನ್ ಮಾಸ(ಸೀಸನ್), ಇದು ಬೇಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಅಲನಾಸನ್ಸ್ ಪ್ರೈ. ಲಿಮಿಟೆಡ್ ಭಾರತದ ಅತಿ ದೊಡ್ಡ ಗೋಮಾಂಸ ರಫ್ತುದಾರನಾಗಿದ್ದು, ನಂತರ ಅಲ್-ಹಮ್ದ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಿರ್ಹಾ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್. ಆದಾಗ್ಯೂ, ಮಾರ್ಚ್ 2017 ರಲ್ಲಿ, ಗೋಮಾಂಸ ರಫ್ತು ವರದಿಯ ಪ್ರಕಾರ, ಮಿರ್ಹಾ ಎಕ್ಸ್‌ಪೋರ್ಟ್ಸ್ ಅಲ್-ಹಮ್ದ್ ಅನ್ನು ಸೋಲಿಸಿದೆ. ಇಲ್ಲಿ, ಕೆಳಗಿನ ಚಾರ್ಟ್‌ನಲ್ಲಿ (ಜನವರಿಯಿಂದ ಮಾರ್ಚ್ 2017) ವರದಿಯಿಂದ ಭಾರತದ ಅತಿದೊಡ್ಡ ಗೋಮಾಂಸ ರಫ್ತುದಾರರ ವಿವರಗಳನ್ನು ನೋಡಬಹುದು. ಈ ಏಳು ವರ್ಷದಲ್ಲಿ (2017 ರಿಂದ 2024ರವರೆಗೆ) ಈ ರಪ್ತಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಓದುಗರು ಗಮನಿಸಬೇಕು. 

ಭಾರತದ ಪ್ರಮುಖ ಗೋಮಾಂಸ ರಫ್ತುದಾರ ನಗರಗಳ ವಿಶ್ಞೇಷಣೆ:

ಮುಂಬೈ ಭಾರತದಲ್ಲಿ ಗೋಮಾಂಸ ರಫ್ತು ಮಾಡುವ ನಗರಗಳಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ನಂತರದ ಸ್ಥಾನವು ನವದೆಹಲಿಯಾಗಿದೆ. ಮುಂಬೈ ನಗರದಿಂದ ಒಟ್ಟು 398.2 ಮಿಲಿಯನ್ USD (39.94%) ಮೌಲ್ಯವನ್ನು ಉತ್ಪಾದಿಸಲಾಗುತ್ತಿದೆ. ಈ ಎರಡು ನಗರಗಳು ಗೋಮಾಂಸ ರಫ್ತುದಾರರಿಗೆ ಮುಖ್ಯ ಮಾರುಕಟ್ಟೆಗಳಾಗಿವೆ ಏಕೆಂದರೆ ಅವರು ಗೋಮಾಂಸ ಉದ್ಯಮದ ಆದಾಯದ ಸರಿಸುಮಾರು 66% ಅನ್ನು ಉತ್ಪಾದಿಸುತ್ತಿದ್ದಾರೆ.

ಎಮ್ಮೆ ಮಾಂಸವು ಮುಖ್ಯವಾಗಿ ಈ ನಗರಗಳಿಂದ ಕ್ರಮವಾಗಿ 38.75% (ಮುಂಬೈ) ಮತ್ತು 24.36% (ನವದೆಹಲಿ) ರಫ್ತು ಮಾಡುತ್ತಿದೆ. ದೇಶಾದ್ಯಂತ 29 ನಗರಗಳ ಸಹಾಯದಿಂದ ಭಾರತವು ತಮ್ಮ ಗೋಮಾಂಸ ರಫ್ತು ವ್ಯವಹಾರವನ್ನು ನಡೆಸುತ್ತಿದೆ. ಅಲಿಗಢ್, ಗಾಜಿಯಾಬಾದ್, ಆಗ್ರಾ ಮತ್ತು ಮೀರತ್ ನಗರಗಳು ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ. ಭಾರತದಲ್ಲಿನ ನಗರವಾರು ಅಗ್ರ ಗೋಮಾಂಸ ರಫ್ತುದಾರರನ್ನು ತಿಳಿಯಲು ಕೆಳಗಿನ ಕೋಷ್ಟಕವನ್ನು ಪರಿಶೀಲಿಸಿ. (2024ರ ನಿರ್ಧಿಷ್ಟ ಮಾಹಿತಿ ಲಭ್ಯವಿರದ ಕಾರಣ 2017ರ ವರದಿಗಳನ್ನು ಈ ಕೆಳಗೆ ನೀಡಲಾಗಿದೆ.)

ಗೋಮಾಂಸ ರಪ್ತು ಮಾಡುತ್ತಿರುವ ನಗರಗಳಲ್ಲಿ ಸಸ್ಯಹಾರಿಗಳ ಪ್ರಮಾಣ ಹೆಚ್ಚಿರುವ ಉತ್ತರ ಭಾರತದ ನಗರಗಳಲ್ಲಿಯೇ ಹೆಚ್ಚು ಗೋ ಮಾಂಸ ರಪ್ತಾಗುತ್ತಿದ್ದು, ದಕ್ಷಿಣದ ರಾಜ್ಯಗಳು ಅತಿ ಕಡಿಮೆ ಗೋಮಾಂಸ ರಪ್ತು ಮಾಡುತ್ತಿವೆ ಎಂದು ಈ ಮೂಲಕ ತಿಳಿದು ಬರುತ್ತದೆ. 

ಆದ್ದರಿಂದ, ಆಹಾರಕ್ಕಾಗಿ ದನದ ಮಾಂಸವನ್ನು ಅವಲಂಬಿಸಿರುವ, ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮೇಲೆ ಹಿಂದುಪರ ಸಂಘಟನೆಗಳ ಸ್ವಯಂ ಘೋಷಿತ ಗೋರಕ್ಷಕರು ನಡೆಸುತ್ತಿರುವ ನೈತಿಕ ಪೋಲಿಸ್ ಗಿರಿ ಅನ್ಯಾಯವೂ ಹಾಸ್ಯಾಸ್ಪದವೂ ಆಗಿದೆ. ಏಕೆಂದರೆ ಜಗತ್ತಿನಲ್ಲಿ ಹೆಚ್ಚು ದನದ ಮಾಂಸವನ್ನು ಸೇವಿಸುತ್ತಿರುವವರಲ್ಲಿ ಕ್ರೈಸ್ತರು ಮತ್ತು ಯಹೂದಿಗಳೂ ಇದ್ದಾರೆ. ಆದರೆ ಭಾರತದಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯಗಳನ್ನು ಮಾತ್ರ ಕೇಂದ್ರವಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಕನ್ನಡದ ರಾಜ್ ನ್ಯೂಸ್‌ ನವರು ಗೋ ಮಾಂಸ ರಪ್ತಿನ ಕುರಿತು ಚರ್ಚೆಯೊಂದನ್ನು ಹಮ್ಮಿಕೊಂಡಿದ್ದು ಅದರಲ್ಲಿ ವಿಶ್ವ ಹಿಂದು ಪರಿಷತ್‌ನ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಖ್ಯಾತ ವಕೀಲ ಡಾ. ಸಿ.ಎಸ್‌ ದ್ವಾರಕನಾಥ್ ಸಹ ಭಾಗವಹಿಸಿ ಭಾರತದ ಗೋ ಮಾಂಸ ರಪ್ತಿನ ರಾಜಕಾರಣದ ಕುರಿತು ಮಾತನಾಡಿದ್ದಾರೆ. ಆ ಚರ್ಚೆಯ ತುಣುಕನ್ನು ನೀವು ಈ ಕೆಳಗೆ ನೋಡಬಹುದು.


ಇದನ್ನು ಓದಿ: ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಯಾವುದೇ ಪೂಜಾ ಸ್ಥಳಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಿಲ್ಲ


ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *