Fact Check: ನರೇಂದ್ರ ಮೋದಿ ಅಮೆರಿಕ ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು

ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಪ್ರತೀ ದಿನವೂ ಒಂದಿಲ್ಲೊಂದು ಸುಳ್ಳುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಬಿಜೆಪಿ  ಐಟಿ ಸೆಲ್ ಕೂಡ ಇಂತಹ ಅನೇಕ ಉತ್ಪ್ರೇಕ್ಷೆಯ ಸುಳ್ಳು ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅದನ್ನು ನರೇಂದ್ರ ಮೋದಿಯವರ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ.

ಅದೇ ರೀತಿ ಈಗ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ” “ಅಪ್ಪಟ ದೇಶಪ್ರೇಮಿ” ಶ್ರೀ ನರೇಂದ್ರ ಮೋದಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೆಲವೇ ದಿನಗಳ ಹಿಂದೆಯಷ್ಟೇ, ಅಮೆರಿಕದಲ್ಲಿ ಬಿಡುಗಡೆಯಾಗಿರುವ 50 ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹಲವಾರು ಜನರು ಹಂಚಿಕೊಳ್ಳುತ್ತಿದ್ದರು.

ಫ್ಯಾಕ್ಟ್‌ ಚೆಕ್: ಪೋಸ್ಟರ್‌ನಲ್ಲಿರುವ ಮಾಹಿತಿಯು ಸುಳ್ಳಾಗಿದ್ದು, ಅಂತಹ ಯಾವುದೇ ಪಟ್ಟಿಯನ್ನು ಅಮೇರಿಕಾ ಇದುವರೆಗೆ ಬಿಡುಗಡೆ ಮಾಡಿಲ್ಲ.

‘ಏಕ್ ನಾಮ್ ನರೇಂದ್ರ ಮೋದಿ’ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಹಿಂದಿಯಲ್ಲಿ ‘ಅಮೆರಿಕ ಮೇ ಜಾರಿ 50 ಇಮಾಂದಾರ್ ನೇತಾವೊ ಕಿ ಸೂಚಿ ಮೇ ಭಾರತ್ ಕೆ ಮಾತ್ರಾ ಏಕ್ ವ್ಯಾಕ್ತಿ ಹೈ, ವೋ ಶ್ರೀ ನರೇಂದ್ರ ಭಾಯ್ ಮೋದಿ ಹೈ, ವೋ ಭಿ ಪ್ರಥಮ್ ಸ್ತಾನ್ ಪರ್. ಅದೂ ನಂಬರ್ ಒನ್ ಸ್ಥಾನದಲ್ಲಿದೆ.) ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಈ ಪೋಸ್ಟ್ ಅನ್ನು 9,000 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಈ ಪುಟಕ್ಕೆ 26 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಫೇಸ್‌ಬುಕ್ ಬಳಕೆದಾರರಾದ ‘ದೀಪಕ್ ಪ್ರಜಾಪತಿ’ ಮತ್ತು ‘ವಾಸುದೇವ್ ಸಿಂಗ್ ರೂಪ್‌ನಗರ್’ ಈ ಪೋಸ್ಟ್ ಅನ್ನು ಹಂಚಿಕೊಂಡವರಲ್ಲಿ ಸೇರಿದ್ದಾರೆ.

ವೈರಲ್ ಹೇಳಿಕೆಯ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ಅಂತಹ ಪಟ್ಟಿಗಾಗಿ ಅಂತರ್ಜಾಲದಲ್ಲಿ ಹುಡುಕಲು ನಡೆಸಿದ್ದೇವೆ. ಅಮೆರಿಕದ ಬಿಸಿನೆಸ್ ನಿಯತಕಾಲಿಕೆ ‘ಫೋರ್ಬ್ಸ್’ 2018 ರಲ್ಲಿ “ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ” ಪಟ್ಟಿಯಲ್ಲಿ ಪ್ರಧಾನಿ ಮೋದಿಯವರನ್ನು 9 ನೇ ಸ್ಥಾನದಲ್ಲಿರಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಅಮೆರಿಕದ ಬಹುರಾಷ್ಟ್ರೀಯ ವ್ಯಾಪಾರ ನಿಯತಕಾಲಿಕೆ ‘ಫಾರ್ಚೂನ್’ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ನಾಯಕರ 2015ರ ಪಟ್ಟಿಯಲ್ಲಿ ಪ್ರಧಾನಿ ಮೋದಿ 5ನೇ ಸ್ಥಾನ ಪಡೆದಿದ್ದಾರೆ.

ಯುರೋಪಿಯನ್ ಅಸೋಸಿಯೇಷನ್ ಆಫ್ ಪೋಲಿಂಗ್ ಆರ್ಗನೈಸೇಷನ್ಸ್, ‘ದಿ ಗ್ಯಾಲಪ್ ಇಂಟರ್ನ್ಯಾಷನಲ್ ಅಸೋಸಿಯೇಷನ್’ ತನ್ನ ವಾರ್ಷಿಕ ಸಮೀಕ್ಷೆ – 2018 ರ “ಜಾಗತಿಕ ನಾಯಕರ ಅಭಿಪ್ರಾಯ” ದಲ್ಲಿ ಮೋದಿಯವರನ್ನು ನಾಲ್ಕನೇ ಸ್ಥಾನದಲ್ಲಿರಿಸಿದೆ. ಆದಾಗ್ಯೂ, “ವಿಶ್ವದ ಅತ್ಯಂತ ಪ್ರಾಮಾಣಿಕ ನಾಯಕರು” ಎಂಬ ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಪಟ್ಟಿಯನ್ನು ನಾವು ಕಂಡುಹಿಡಿಯಲಿಲ್ಲ.

ಡಿಸೆಂಬರ್ 2015 ರಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೋದಿಯವರನ್ನು ಶ್ಲಾಘಿಸಿದರು ಮತ್ತು ಭಾರತದ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ “ಪ್ರಾಮಾಣಿಕ ಮತ್ತು ನೇರ” ರಾಜಕಾರಣಿ ಎಂದು ಕರೆದಿದ್ದಾರೆ. ಆದಾಗ್ಯೂ, ಇದು ವಿಶ್ವದ ಪ್ರಾಮಾಣಿಕ ರಾಜಕಾರಣಿಗಳು ಅಥವಾ ಭ್ರಷ್ಟಾಚಾರ ಮುಕ್ತ ನಾಯಕರ ಯಾವುದೇ ಸಮೀಕ್ಷೆಯ ಭಾಗವಾಗಿರಲಿಲ್ಲ. ಅನೇಕ ಪ್ರಮುಖ ಮಾಧ್ಯಮ ಸಂಸ್ಥೆಗಳು ಶ್ವೇತಭವನದ ಹೇಳಿಕೆಯನ್ನು ಪ್ರಕಟಿಸಿದ್ದವು.

ಕಳೆದ ವರ್ಷ ಸಾಮಾಜಿಕ ಮಾಧ್ಯಮಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರು ಕೂಡ ಇದೇ ರೀತಿ ವೈರಲ್ ಆಗಿತ್ತು. ಆದ್ದರಿಂದ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂಬುದು ಸುಳ್ಳು


ಇದನ್ನು ಓದಿ: ಕಮಲಾ ಹ್ಯಾರಿಸ್‌ ಪೋಷಕರು ಎಂದು ಬೇರೆಯವರ ಫೋಟೋ ಹಂಚಿಕೆ


ವೀಡಿಯೋ ನೋಡಿ: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *