ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ತಪ್ಪಾಗಿ ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊ ಹಂಚಿಕೆ

ಕುತುಬ್ ಮಿನಾರ್

ಕುತುಬ್ ಮಿನಾರ್ ಅನ್ನು ಮೊಘಲರು ನಿರ್ಮಿಸಿದ್ದು ಎಂದು ಇತಿಹಾಸ ತಜ್ಞರು ಸುಳ್ಳು ಹೇಳುತ್ತಿದ್ದಾರೆ. ಆದರೆ ಅದರ ಮೇಲೆ ಹಿಂದೂಗಳ ಹೆಸರು ಬರೆದಿದೆ ನೋಡಿ ಎಂದು ಸ್ತಂಭದ ಫೋಟೊವೊಂದನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರೊಟ್ಟಿಗೆ “ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಹೇಳ್ತಾರೆ ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರು ಇದೆ ಸ್ವಲ್ಪ ಜೂಮ್ ಮಾಡಿ ನೋಡಿ… ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ. ನಮ್ಮ ದೇಶದ ಇತಿಹಾಸವನ್ನು ಬರೆದ ಇತಿಹಾಸ ತಜ್ಞರ ಕಣ್ಣುಗಳಿಗೆ ಇದು ಕಾಣಲಿಲ್ಲವೇಕೆ ? ಕಣ್ಣು ಕುರುಡಾಗುವಷ್ಟು ಮೊಘಲರು ಎಂಜಲು ತಿನ್ನಿಸಿದ್ದರೆ ಇತಿಹಾಸ ತಜ್ಞರಿಗೆ ?? ಛೇ, ನಾಚಿಕೆಗೇಡು” ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ವೈರಲ್ ಫೋಟೊವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಿದಾಗ ಚಿತ್ರಗಳನ್ನು ಸಂಗ್ರಹಿಸುವ ಹಲವಾರು ವೆಬ್‌ಸೈಟ್‌ಗಳಲ್ಲಿ ಈ ಚಿತ್ರ ಇರುವುದು ಕಂಡುಬಂದಿದೆ. Flickr ಎನ್ನುವ ವೆಬ್‌ಸೈಟ್‌ನಲ್ಲಿ ಡೇವಿಡ್ ರಾಸ್ ಎಂಬುವವರು “ಅಕ್ಟೋಬರ್ 19, 2009 ಈ ಚಿತ್ರವನ್ನು ತೆಗೆಯಲಾಯಿತು. ಕಬ್ಬಿಣದ ಕಂಬ, ಭರತ್‌ಪುರ ಕೋಟೆ, ಭರತ್‌ಪುರ, ಭಾರತ” ಎಂದು ಪೋಸ್ಟ್ ಮಾಡಿದ್ದಾರೆ. Getty Images ವೆಬ್‌ ಸೈಟ್‌ನಲ್ಲಿ ಇದೇ ಚಿತ್ರವನ್ನು ಅಪ್ಲೋಡ್ ಮಾಡಲಾಗಿದ್ದು, “ಭಾರತದ ರಾಜಸ್ಥಾನದ ಭರತ್‌ಪುರ ಕೋಟೆಯಲ್ಲಿರುವ Vanshavali Pillar  (ಫೋಟೋ: ಎಂ.ಡಿ. ಶರ್ಮಾ) ಎಂಬು ಬರೆಯಲಾಗಿದೆ. Alamy ವೆಬ್‌ಸೈಟ್‌ನಲ್ಲಿ ಈ ಚಿತ್ರವನ್ನು ಭರತ್ ಪುರ ಕೋಟೆಯಲ್ಲಿರುವ ಜವಾಹಾರ್ ಬುರ್ಜ್ ಎಂದು ಹೆಸರಿಸಲಾಗಿದೆ.

ಇದರ ಆಧಾರಲ್ಲಿ ಮತ್ತುಷ್ಟು ಹುಡುಕಿದಾಗ ಫೇಸ್‌ಬುಕ್‌ನಲ್ಲಿ ಈ ಕಬ್ಬಿಣದ ಕಂಬದ ಬಗ್ಗೆ ಮಾಹಿತಿ ದೊರಕಿದೆ. ನಮಸ್ತೆ ಎವರಿಒನ್ ಎಂಬ ಫೇಸ್‌ಬುಕ್ ಪುಟದಲ್ಲಿ ಜುಲೈ 10, 2020 ರಂದು ಪೋಟೋದೊಂದಿಗೆ “ಭರತ್‌ಪುರ ಕೋಟೆಯಿಂದ ಕಬ್ಬಿಣದ ಸ್ತಂಭ ಅಥವಾ ರಾಜಸ್ಥಾನದ ಲೋಹಗಢ ಕೋಟೆ (ಕಬ್ಬಿಣದ ಕೋಟೆ) ಅನ್ನು ಭರತ್‌ಪುರದ ಜಾಟ್ ಆಡಳಿತಗಾರರು ನಿರ್ಮಿಸಿದ್ದಾರೆ. ಮಹಾರಾಜ ಸೂರಜ್ ಮಾಲ್ (1707-1763) ಅವದಿಯಲ್ಲಿ ಜಾಟ್ ಸಾಮ್ರಾಜ್ಯ ಉತ್ತುಂಗಕ್ಕೇರಿದ್ದು, ಅವರು ಹಲವಾರು ಕೋಟೆಗಳು ಮತ್ತು ಅರಮನೆಗಳನ್ನು ನಿರ್ಮಿಸಿದರು. ಅದರಲ್ಲಿ ಲೋಹಗಢ್ ಕೋಟೆಯು ಪ್ರಬಲವಾಗಿದೆ” ಎಂದು ಬರೆಯಲಾಗಿದೆ.

ಇನ್ನು ದೆಹಲಿಯಲ್ಲಿರುವ ಕುತುಬ್ ಮಿನಾರ್ ಚಿತ್ರವನ್ನು ನೋಡಿದಾಗ ಅದರ ರಚನೆ ಭಿನ್ನವಾಗಿರುವುದು ಗೋಚರಿಸುತ್ತದೆ. ಕುತುಬ್ ಕಾಂಪ್ಲೆಕ್ಸ್‌ನಲ್ಲಿಯೂ ಕಬ್ಬಿಣದ ಕಂಬವಿದೆ. ಅದರ ಮೇಲಿನ ಬರಹ ಸಂಸ್ಕೃತದಲ್ಲಿದೆ. ಆ ಕಂಬದ ಫೋಟೊವನ್ನು ಈ ಕೆಳಗೆ ನೋಡಬಹುದು.

ಕುತುಬ್ ಮಿನಾರ್ ಅನ್ನು ಗುಲಾಮಿ ಸಂತತಿಯ ಕುತ್ಬುದ್ದೀನ್ ಐಬಕ್‌ ಪ್ರಾರಂಭಿಸಿದನು.ಆದರೆ ಗೋಪುರದ ರಚನೆಯನ್ನು ಇಲ್ತಾಮಿಷ್ ಪೂರ್ಣಗೊಳಿಸಿದನು ನಂತರ ಅಲ್ತ್‌ಮಷ್ ಮತ್ತು ಅಲ್ಲಾ ಉದ್ದೀನ್ ಖಿಲ್ಜಿ ಇತ್ಯಾದಿ ಸುಲ್ತಾನರು ಬೆಳೆಸಿಕೊಂಡು ಹೋದರು ಎಂದು ವಿಕಿಪೀಡಿಯಾ ಹೇಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ತಪ್ಪಾಗಿ ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊ ಹಂಚಿಕೊಳ್ಳಲಾಗುತ್ತಿದೆ. ಫೋಟೊದಲ್ಲಿರುವ ಕಂಬ ಕುತುಬ್ ಮಿನಾರ್ ಅಲ್ಲ ಬದಲಿಗೆ ರಾಜಸ್ಥಾನದ್ದಾಗಿದೆ.


ಇದನ್ನೂ ಓದಿ: Fact Check: ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲಟ್ ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *