ಮಿಸ್ಟರ್ ಬೀನ್

Fact Check: ಮಿಸ್ಟರ್ ಬೀನ್ ನಟ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆ ಎಂದು ಎಡಿಟ್‌ ಮಾಡಿದ ಪೋಟೋ ಹಂಚಿಕೊಳ್ಳಲಾಗಿದೆ

ದೈಹಿಕವಾಗಿ ದುರ್ಬಲರಾಗಿರುವ ರೋವನ್ ಅಟ್ಕಿನ್ಸನ್ ಅವರನ್ನು ಹಾಸಿಗೆ ಹಿಡಿದಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬ್ರಿಟಿಷ್ ನಟ ಮತ್ತು ಹಾಸ್ಯನಟ ಅಟ್ಕಿನ್ಸನ್, ಪ್ರಸಿದ್ಧ ಕಾಮಿಕ್ ಸಿಟ್ಕಾಮ್ ಮಿಸ್ಟರ್ ಬೀನ್‌ನಲ್ಲಿ ನಾಮಮಾತ್ರದ ಪಾತ್ರವನ್ನು ನಿರ್ವಹಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ, ಒಂದು ಅಟ್ಕಿನ್ಸನ್ ಅವರ ಮಿಸ್ಟರ್ ಬೀನ್ ಪಾತ್ರವನ್ನು ತೋರಿಸುತ್ತದೆ, ಇನ್ನೊಂದು 2024 ರಲ್ಲಿ ಹಾಸಿಗೆ ಹಿಡಿದಿರುವುದನ್ನು ತೋರಿಸುತ್ತದೆ. ಯೂಟ್ಯೂಬ್ ವೀಡಿಯೊದಿಂದ ಸ್ಕ್ರೀನ್ ಗ್ರಾಫ್ @the_suresh_ja1…

Read More
ಶೇಖ್ ಹಸೀನಾ

Fact Check: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಿಂದ ಅಜ್ಞಾತ ಸ್ಥಳಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ ಎಂಬುದು ಸುಳ್ಳು

ಪ್ರಸ್ತುತ ಬಾಂಗ್ಲಾದೇಶ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾಗರಿಕ ಸೇವಾ ಉದ್ಯೋಗ ಕೋಟಾಗಳ ವಿರುದ್ಧ ವ್ಯಾಪಕ ವಿರೋಧಿ ಹೋರಾಟದ ರಾಷ್ಟ್ರವ್ಯಾಪಿ ಬಿಕ್ಕಟ್ಟಿನ ನಡುವೆ 100 ಕ್ಕೂ ಹೆಚ್ಚು ಜನರು  ಜೀವ ಕಳೆದುಕೊಂಡಿದ್ದಾರೆ. ಆದರೆ ಈಶಾನ್ಯವನ್ನು ಒಳಗೊಳ್ಳುವ ಇಂಡಿಯಾ ಟುಡೆ ಗ್ರೂಪ್ ವರ್ಟಿಕಲ್, ಭಾನುವಾರ, ಜುಲೈ 21 ರಂದು ಒಂದು ವರದಿ ಪ್ರಕಟಿಸಿದ್ದು, “ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಿಂದ ಅಜ್ಞಾತ ಸ್ಥಳಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ” ಎಂದು ತಿಳಿಸಿದೆ. ಪತ್ರಕರ್ತ ಮೆಹತಾಬ್ ಉದ್ದೀನ್ ಅಹ್ಮದ್ ಬರೆದ ವರದಿಯನ್ನು ಇಂಡಿಯಾ ಟುಡೇ…

Read More

Fact Check | ಕಳೆದ 7 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲವೆಂದು ಸುಳ್ಳು ಹೇಳಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಳೆದ ಏಳು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದು ಲೋಕಸಭೆಯ ಕಲಾಪಗಳನ್ನು ವೀಕ್ಷಿಸಿದವರಿಗೆ ಆಘಾತವನ್ನು ಉಂಟುಮಾಡಿದೆ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಕೂಡ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಅದರಲ್ಲೂ ಕೇಂದ್ರ ಶಿಕ್ಷಣ ಸಚಿವರೇ ಈ ರೀತಿಯಾಗಿ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದರೆ ಹೇಗೆ ಎಂಬ ಪ್ರಶ್ನೆಗಳು ಕೂಡ ಕಾಡೋದಕ್ಕೆ ಆರಂಭವಾಗಿದೆ. ಶಿಕ್ಷಣ ಸಚಿವರು ಹೇಳಿದ್ದು ಏನು?…

Read More
ಕುತುಬ್ ಮಿನಾರ್

ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ತಪ್ಪಾಗಿ ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊ ಹಂಚಿಕೆ

ಕುತುಬ್ ಮಿನಾರ್ ಅನ್ನು ಮೊಘಲರು ನಿರ್ಮಿಸಿದ್ದು ಎಂದು ಇತಿಹಾಸ ತಜ್ಞರು ಸುಳ್ಳು ಹೇಳುತ್ತಿದ್ದಾರೆ. ಆದರೆ ಅದರ ಮೇಲೆ ಹಿಂದೂಗಳ ಹೆಸರು ಬರೆದಿದೆ ನೋಡಿ ಎಂದು ಸ್ತಂಭದ ಫೋಟೊವೊಂದನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರೊಟ್ಟಿಗೆ “ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಹೇಳ್ತಾರೆ ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರು ಇದೆ ಸ್ವಲ್ಪ ಜೂಮ್ ಮಾಡಿ ನೋಡಿ… ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ. ನಮ್ಮ ದೇಶದ ಇತಿಹಾಸವನ್ನು ಬರೆದ…

Read More

Fact Check | ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಆಂಧ್ರಪ್ರದೇಶದ ಗುಡೂರಿನಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಈಗ ಪೊಲೀಸರಿಗೂ ರಕ್ಷಣೆ ಇಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಇನ್ನೂ ಕೆಲವರು  ಜಗನ್‌ ಮೋಹನ್‌ ರೆಡ್ಡಿ ಅವರ ವಿರುದ್ಧ ಕೂಡ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ವಿಡಿಯೋ ನೋಡಿದ ಹಲವರು ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ನಿಜವಾಗಿಯೂ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರೇ ದಾಳಿ…

Read More

Fact Check | ಉಯ್ಘರ್‌ ಮುಸ್ಲಿಂ ವ್ಯಕ್ತಿಯ ಮೇಲೆ ಚೀನಾ ಸೈನಿಕನ ದರ್ಪ‌ ಎಂದು ಇಂಡೋನೇಷ್ಯಾ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ.. ಇದು ಚೀನಾದಲ್ಲಿನ ಉಯ್ಘರ್‌ಮುಸ್ಲಿಂ ಜನರ ಇಂದಿನ ಪರಿಸ್ಥಿತಿ. ಇಂದು ಚೀನಾದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಕುರಾನ್ ಹೊಂದಿದ್ದ ಕಾರಣಕ್ಕೆ ಅಲ್ಲಿನ ಸೈನಿಕರು ಆ ವ್ಯಕ್ತಿಯನ್ನು ಥಳಿಸಿದ್ದಾರೆ. ಒಬ್ಬ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ತಡೆದು ಅಲ್ಲಿನ ಮೂಲ ಧರ್ಮವನ್ನು ಮಾತ್ರ ಅನುಸರಿಸುವಂತೆ ಚೀನಾ ನೋಡಿಕೊಳ್ಳುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಈ ಘಟನೆ ಚೀನಾದಲ್ಲೇ ನಡೆದಿದೆ ಎಂದು ಭಾವಿಸಿದ್ದಾರೆ, ಹೀಗಾಗಿ ಸಾಕಷ್ಟು ಮಂದಿ  ತಮ್ಮ ವೈಯಕ್ತಿಕ ಸಾಮಾಜಿಕ‌‌…

Read More