Fact Check: ಬಾಂಗ್ಲಾದೇಶದ ಮುಸ್ಲಿಮರು ಕಿಕ್ಕಿರಿದ ರೈಲಿನಲ್ಲಿ ಅಸ್ಸಾಂ ಮತ್ತು ಕೋಲ್ಕತ್ತಾಗೆ ಬಂದಿಳಿದಿದ್ದಾರೆ ಎಂಬುದು ಸುಳ್ಳು

ಮುಸ್ಲಿಮರು

ಇತ್ತೀಚೆಗೆ ರೈಲಿನ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ರೈಲು ಬಾಂಗ್ಲಾದೇಶದಿಂದ ಭಾರತದ ಕಡೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರೈಲಿನ ತುಂಬಾ ಮುಸ್ಲಿಂ ಸಮುದಾಯದ ಜನ ಕಿಕ್ಕಿರಿದು ಕುಳಿತಿರುವುದನ್ನು ಈ ವೀಡಿಯೋ ತೋರಿಸುತ್ತದೆ.

ಈ ವೀಡಿಯೋವಿಗೆ “ಇದು ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ, ಈ ಗುಂಪಿನ ಮುಂದೆ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ ಅಸ್ಸಾಂ ಮತ್ತು ಕೋಲ್ಕತ್ತಾ ಮೂಲಕ ಬಾಂಗ್ಲಾದೇಶ ಈ ಮುಸ್ಲಿಮರನ್ನು ವಿರೋಧಿಸಲು ಇನ್ನೂ ಸಮಯವಿದೆ. ಇಲ್ಲದಿದ್ದರೆ ನಿಮಗೆ ಅಳಲು ಕಣ್ಣೀರು ಕೂಡ ಇರುವುದಿಲ್ಲ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ವೈರಲ್ ವೀಡಿಯೋ ಕೀಫ್ರೆಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಈ ವೀಡಿಯೋ ಮೂಲತಃ ಬಾಂಗ್ಲಾದೇಶದ್ದಾಗಿದೆ ಎಂದು ತಿಳಿದು ಬಂದಿದೆ.

ಗೆಟ್ಟಿ ಇಮೇಜಸ್‌ನಲ್ಲಿ ವೈರಲ್ ಪೋಟೋ ದೊರೆತಿದ್ದು, “ಅಂತಿಮ ಪ್ರಾರ್ಥನೆಯೊಂದಿಗೆ ಬಿಶ್ವಾ ಇಜ್ತೆಮಾದ ಮೊದಲ ಹಂತ ಮುಕ್ತಾಯ. ಬಿಸ್ವಾ ಇಜ್ತೆಮಾ ಎಂದು ಕರೆಯಲ್ಪಡುವ ವಾರ್ಷಿಕ ಮುಸ್ಲಿಮರ ಸಭೆ 2020 ರ ಜನವರಿ 12 ರಂದು ಬಾಂಗ್ಲಾದೇಶದ ಢಾಕಾ ಬಳಿಯ ಟೋಂಗಿಯಲ್ಲಿ ಕೊನೆಗೊಳ್ಳುವುದರಿಂದ ಬಾಂಗ್ಲಾದೇಶದ ಮುಸ್ಲಿಂ ಭಕ್ತರು ಅಖೇರಿ ಮುನಾಜತ್ ಅಥವಾ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಕಿಕ್ಕಿರಿದ ರೈಲಿನಲ್ಲಿ ಹೊರಡುತ್ತಾರೆ. ಟೋಂಗಿಯ ತುರಾಗ್ ನದಿಯ ದಡದಲ್ಲಿ ಅಖೇರಿ ಮುನಾಜತ್ ನೊಂದಿಗೆ ವಾರ್ಷಿಕ ಮುಸ್ಲಿಮರ ಸಭೆ ಕೊನೆಗೊಳ್ಳುತ್ತಿದ್ದಂತೆ ಸಾವಿರಾರು ಮುಸ್ಲಿಮರು ಮಾನವಕುಲದ ಆಶೀರ್ವಾದಕ್ಕಾಗಿ ಕೈ ಎತ್ತಿದರು.” ಎಂಬ ಶೀರ್ಷಿಕೆ ನೀಡಲಾಗಿದೆ.

(ಚಿತ್ರ: ಮಾಮುನೂರ್ ರಶೀದ್/ ನೂರ್ ಫೋಟೋ ಮೂಲಕ ಗೆಟ್ಟಿ ಇಮೇಜಸ್)

ಶಟರ್‌ ಸ್ಟಾಕ್ ಎಂಬ ಇನ್ನೊಂದು ಪೋಟೋ ವೆಬ್ಸೈಟ್‌  ನಲ್ಲಿ ವೈರಲ್ ಚಿತ್ರಗಳು ದೊರೆತಿದ್ದು, “ಫೆಬ್ರವರಿ 11, 2024 ರಂದು ಬಾಂಗ್ಲಾದೇಶದ ಢಾಕಾದಲ್ಲಿರುವ ಟೋಂಗಿಯಲ್ಲಿರುವ ಬಿಸ್ವಾ ಇಜ್ತೆಮಾದಲ್ಲಿ ಅಖೇರಿ ಮುನಾಜತ್ ಅಥವಾ ಎರಡನೇ ಹಂತದ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಮುಸ್ಲಿಂ ಭಕ್ತರು ಕಿಕ್ಕಿರಿದ ರೈಲಿನಲ್ಲಿ ಹೊರಡುತ್ತಾರೆ” ಎಂದು ಶೀರ್ಷಿಕೆ ನೀಡಲಾಗಿದೆ.

ಇಲ್ಲಿ ಎಲ್ಲಿಯೂ ಬಾಂಗ್ಲಾದೇಶದಿಂದ ಕಲ್ಕತ್ತಾ ಅಥವಾ ಭಾರತಕ್ಕೆ ಬರುತ್ತಿರುವ ರೈಲು ಎಂದು ಉಲ್ಲೇಖಿಸಿಲ್ಲ. ಈ ಚಿತ್ರಗಳ ಮೂಲಕ ಪ್ರತೀ ವರ್ಷ ಬಾಂಗ್ಲಾದೇಶದಲ್ಲಿ ಬಿಸ್ವಾ ಇಜ್ತೆಮಾದಲ್ಲಿ ಅಖೇರಿ ಮುನಾಜತ್ ಎಂಬಲ್ಲಿ ವಾರ್ಷಿಕ ಪ್ರಾರ್ಥನೆ ನಡೆಯುತ್ತದೆ ಮತ್ತು ಅಲ್ಲಿಗೆ ಸಾವಿರಾರು ಜನ ಮುಸ್ಲಿಂ ಭಕ್ತಾದಿಗಳು ಕಿಕ್ಕಿರಿದ ರೈಲಿನಲ್ಲಿ ಆಗಮಿಸುತ್ತಾರೆ ಎಂದು ತಿಳಿಬಹುದು.

ಆದ್ದರಿಂದ ವೈರಲ್ ಹೇಳಿಕೆ ಸುಳ್ಳಾಗಿದ್ದು, ಜನರಲ್ಲಿ ಆತಂಕ ಹುಟ್ಟಿಸಲು ಇಂತಹ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಆಂಧ್ರಪ್ರದೇಶದ ಸ್ಪೀಕರ್ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು 


ವೀಡಿಯೋ ನೋಡಿ: ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *