ಸಾಮಾಜಿಕ ಜಾಲತಾಣದಲ್ಲಿ “ಜಸ್ಟಿನ್ ಬೈಬ್‌ರ್ ಅವರು ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇದರಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಉಡುಪು ಧರಿಸಿ ಹರ್ಮೋನಿಯಂ ಕೂಡ ನುಡಿಸಿದ್ದಾರೆ. ಜಸ್ಟಿನ್ ಬೈಬರ್ ಅವರ ಭಾರತೀಯ ಶೈಲಿಯ ಕಾರ್ಯಕ್ರಮದ ಈ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ” ಎಂದು ಜಸ್ಟಿನ್ ಬೈಬರ್ ಅವರು ಹರ್ಮೋನಿಯಂ ನುಡಿಸುವ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋವನ್ನು ನೋಡಿದಾಗ ಹಲವು ಅನುಮಾನಗಳು ಸಹಜವಾಗಿ ಮೂಡುತ್ತವೆ. ಆದರೂ ಕೆಲವರು ಜಸ್ಟಿನ್ ಬೈಬರ್ ನಿಜವಾಗಿಯೂ ಭಾರತೀಯ ಉಡುಪು ಧರಿಸಿ ಹರ್ಮೋನಿಯಂ ನುಡಿಸಿದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಕೆಲವರು ಈ ಫೋಟೋವನ್ನು ವಿವಿಧ ಬರಹಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಕೆಲವೊಂದು ಲೋಪಗಳು ಕಂಡು ಬಂದಿದ್ದು, ಈ ಫ್ಯಾಕ್ಟ್‌ಚೆಕ್‌ನಲ್ಲಿ ಫೋಟೋ ಕುರಿತು ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವಿನ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 5 ಜುಲೈ 2024 ರಂದು ಬೋಲ್ಡಿಸ್ಕಿ ಎಂಬ ಫೇಸ್‌ಬುಕ್ ಪುಟದಲ್ಲಿ Anant Radhika Ambani Sangeet Ceremony: Justin Bieber Indian Look Viral, Fans Reaction ಎಂಬ ಶಿರ್ಷಿಕೆಯ ಅಡಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ.
ಈ ಫೇಸ್‌ಬುಕ್ ಪುಟವು ಜೀವನ ಮತ್ತು ಮನೋರಂಜನೆಗೆ ಸಂಬಂಧಿಸಿದ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತದೆ. ಇದರ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು “AI-ಉತ್ಪಾದಿತ” ಎಂದು ಹೇಳುವ ವಾಯ್ಸ್‌ಓವರ್‌ನೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋವನ್ನು ತೋರಿಸಿದೆ. ಇದೇ ವಿಡಿಯೋದಲ್ಲಿ ಜಸ್ಟಿನ್ ಬೈಬರ್ ಮುಂಬೈಗೆ ಆಗಮಿಸಿದ ಚಿತ್ರಗಳನ್ನು ವೀಡಿಯೊದಲ್ಲಿ ತೋರಿಸಲಾಗಿದ್ದ ಕಾರಣ ಇದರಲ್ಲಿ ನಿಜವಾದ ಫೋಟೋ ಮತ್ತು ನಕಲಿ ಫೋಟೊದ ನಡುವೆ ಸಾಕಷ್ಟು ಗೊಂದಲಗಳನ್ನು ಕೂಡ ಮೂಡಿಸಿದ್ದವು.
ಇನ್ನು ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಕುರಿತು ಇನ್ನಷ್ಟು ಪರಿಶೀಲನೆ ನಡೆಸಲು, AI ಫೋಟೋಗಳನ್ನು ಕಂಡು ಹಿಡಿಯುವ ಹಲವು ವೆಬ್‌ಸೈಟ್‌ಗಳಲ್ಲಿ ಕೂಡ ಈ ವೈರಲ್ ಫೋಟೋವನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಹಗ್ಗಿಂಗ್‌ಫೇಸ್ ವೆಬ್‌ಸೈಟ್ ಈ ಚಿತ್ರವು ಶೇಕಡಾ 93 ರಷ್ಟು AI ಬಳಸಿ ರಚಿಸಲಾಗಿದೆ ಎಂದು ಪತ್ತೆ ಹಚ್ಚಿದೆ. ಇದರ ಜೊತೆಗೆ TrueMedia ಫಲಿತಾಂಶ ಕೂಡ ಈ ವೈರಲ್ ಫೋಟೊವನ್ನು AI ನಿಂದ ನಿರ್ಮಿಸಲಾಗಿದೆ ಎಂಬುದನ್ನು ದೃಢಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀತಿ ಜಸ್ಟಿನ್ ಬೈಬರ್ ಅವರು ಭಾರತೀಯ ಶೈಲಿಯ ಉಡುಪು ಧರಿಸಿ ಹಾರ್ಮೋನಿಯಂ ನುಡಿಸಿದ್ದಾರೆ ಎಂಬುದು ಸುಳ್ಳು. ಇದಕ್ಕೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಫೋಟೋ ಕೂಡ AI ನಿಂದ ರಚಿತವಾಗಿದೆ ಎಂಬುದು ವಿವಿಧ ವೆಬ್‌ಸೈಟ್‌ಗಳಿಂದ ಕೂಡ ಸಾಭೀತಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check: 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿಯುತ್ತಾರೆ ಎಂಬ ಹೇಳಿಕೆ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ