Fact Check | ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

” ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ-20 ಟ್ರೋಫಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ನಂತರ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಅವರು ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ನ್ಯೂಸ್‌ ನೋಡಿ, ಇದು ಬಿಬಿಸಿಯ ಅಧಿಕೃತ ವರದಿಯಾಗಿದೆ. ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಮತಾಂತರಗೊಂಡ ವರದಿಯನ್ನು ಪ್ರಕಟಗೊಳಿಸಲಾಗಿದೆ.” ಎಂದು ಬಿಬಿಸಿ ಬಂಗಾಳದ ವರದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನು ನೋಡಿದ ಹಲವು ಬಿಬಿಸಿಯೇ ಈ ವರದಿ ಮಾಡಿದ್ದಾಗ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಿರುಚಿ ಅವರನ್ನು ಹಿಂದು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಗಾಂಧಿಯವರು ಎಲ್ಲಿಯೇ ಭಾಷಣ ಮಾಡಿದರೂ ಮತ್ತು ಹೇಳಿಕೆಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅಥವಾ ಎಡಿಟ್‌ ಮಾಡಿ ವೀಡಿಯೋ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗುತ್ತಿದೆ. ಈಗ ಅದೇ ರೀತಿಯ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ, “ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳು: ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರನ್ನು ಚುಡಾಯಿಸ್ತಾರೆ. ಹಿಂದೂಗಳು, ಹಿಂದುತ್ವ…

Read More

Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಕರ್ನಾಟಕದ ಸರ್ಕಾರಿ ಶಾಲೆಯೊಂದಕ್ಕೆ ಪ್ರಾಂಶುಪಾಲರಾಗಿ ಹಿಂದೂ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ, ಆದರೆ ಶಾಲೆಯ ಕ್ರಿಶ್ಚಿಯನ್ ಸಿಬ್ಬಂದಿ ಅವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ಬದಲಿಗೆ ಕ್ರೈಸ್ತ ಮಹಿಳೆಯನ್ನು ಆಕೆಯ ಜಾಗದಲ್ಲಿ ಕೂರಿಸಲಾಯಿತು. ವೀಡಿಯೋದಲ್ಲಿ, ಪಕ್ಕದಲ್ಲಿ ನಿಂತಿದ್ದ ಕೆಲವರು ಮಹಿಳೆಯನ್ನು ಬಲವಂತವಾಗಿ ಕುರ್ಚಿಯಿಂದ ಮೇಲಕ್ಕೆತ್ತುವುದನ್ನು ನಾವು ನೋಡಬಹುದು, ನಂತರ ಇನ್ನೊಬ್ಬ ಕ್ರಿಶ್ಚಿಯನ್‌ ಮಹಿಳೆಯನ್ನು ಪ್ರಾಂಶುಪಾಲೆಯ ಕುರ್ಚಿಯ ಮೇಲೆ ಕೂರಿಸಿ ಚಪ್ಪಾಳೆ ಹೊಡೆಯಲು ಇವರು ಪ್ರಾರಂಭಿಸಿದರು.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌…

Read More

Fact Check: ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳದೇ ಇದ್ದರೆ ಭಾರತದಲ್ಲಿ ಹಿಂದುಗಳು ಹಿಂದುಳಿದವರಾಗುತ್ತಾರೆ ಎಂಬುದು ಸುಳ್ಳು

ಕಳೆದೊಂದು ದಶಕಗಳಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹಿಂದುಗಳೇ ಹಿಂದುಳಿದವರಾಗುವ ಸಾಧ್ಯತೆ ಇದೆ ಮತ್ತು ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಬಿಂಬಿಸಲು ಅನೇಕ ವಾದಗಳನ್ನು, ಪ್ರತಿಪಾದನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ, ವೀಡಿಯೋ, ವರದಿಗಳನ್ನು ಹಂಚಿಕೊಳ್ಳುವ ಮೂಲಕ ಮುಸ್ಲಿಮರಿಂದ ಜನಸಂಖ್ಯಾ ಜಿಹಾದಿ ನಡೆಯುತ್ತಿದೆ ಎಂದು ನಿರೂಪಿಸಲು ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಮತ್ತು ಅವರ ನೇತೃತ್ವದ ಮಾಧ್ಯಮಗಳು ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಹಿಂದುಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ನಾವು ಅವರಿಗೆ ಗುಲಾಮರಂತೆ ಬದುಕಬೇಕಾಗುತ್ತದೆ ಎಂಬ ಆತಂಕವನ್ನು…

Read More

Fact Check | ಸಂವಿಧಾನದ ಕುರಿತು ಶಾಸಕಿ ಕಿರಣ್ ಚೌಧರಿ ಹೇಳಿಕೆ ಬಿಜೆಪಿ ಸೇರಿದ ನಂತರ ನೀಡಿದ್ದೆ ಹೊರತು ಕಾಂಗ್ರೆಸ್‌ನಲ್ಲಿದ್ದಾಗ ಅಲ್ಲ

“ಶಾಸಕಿ ಕಿರಣ್ ಚೌಧರಿ ಅವರು  “ಮೋದಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬ ಆರೋಪವು ತಮ್ಮ ಪಕ್ಷದಿಂದ ಪ್ರಾರಂಭಿಸಿದ ಚುನಾವಣ ಪ್ರಚಾರ” ಎಂದು ಒಪ್ಪಿಕೊಂಡಿದ್ದಾರೆ. ಇದು ಅವರು ಕಾಂಗ್ರೆಸ್‌ನಲ್ಲಿ ಇರುವಾಗಲೇ ಹೇಳಿದ್ದಾರೆ. ಕಾಂಗ್ರೆಸ್‌ನ ಅಸಲಿ ಮುಖವನ್ನು ಕಾಂಗ್ರೆಸ್‌ನ ಶಾಸಕಿಯೇ ಬಹಿರಂಗ ಪಡಿಸಿದ್ದರು.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಸಾಕಷ್ಟು ಮಂದಿ ಕಾಂಗ್ರೆಸ್‌ ವಿರೋದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದಲ್ಲಿ ಶಾಸಕಿ ಕಿರಣ್‌ ಚೌಧರಿ ಅವರೇ ಈ ಹೇಳಿಕೆಯನ್ನು…

Read More

Fact Check | ಕೇರಳದಲ್ಲಿ ಯುಪಿ ಪೇಂಟರ್‌ ಕೊಲೆ ಎಂಬ ವಿಡಿಯೋ ಭಾರತದ್ದದಲ್ಲ, ಬ್ರೆಜಿಲ್‌ನದ್ದು

“ಈ ವಿಡಿಯೋ ನೋಡಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ಮನೆ ಪೇಂಟರ್ ಒಬ್ಬರನ್ನು ಕೇರಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೇರಳದಲ್ಲಿಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಕೆಲವರು ಈ ಘಟನೆ ಉತ್ತರಖಂಡ್‌ನಲ್ಲಿ ನಡೆದಿದೆ ಎಂದರೆ, ಮತ್ತೆ ಕೆಲವರು ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ವೈರಲ್‌ ವೀಡಿಯೋದಲ್ಲಿ, ಮರದ ಆಸರೆಯ ಮೇಲೆ ನಿಂತುಕೊಂಡು ಗೋಡೆಗೆ ಪೇಂಟಿಂಗ್ ಮಾಡುತ್ತಿರುವಂತೆ ಕಾಣುವ ವ್ಯಕ್ತಿಯನ್ನು, 13…

Read More