Fact Check | ದನದ ತಲೆ ಹೊಂದಿರುವ ಡಾಲ್ಫಿನ್‌ ಪತ್ತೆಯಾಗಿದೆ ಎಂಬುದು AI ರಚಿತವಾದ ಫೋಟೋ

ಸಾಮಾಜಿಕ ಜಾಲತಾಣದಲ್ಲಿ “ಇತ್ತೀಚೆಗೆ, ಸೀಲ್/ಡಾಲ್ಫಿನ್ ಮತ್ತು ಹಸುವಿನ ತಲೆಯೊಂದಿಗೆ ಹೊಸ ಜೀವಿಯಂತೆ ಕಾಣುವ ಪ್ರಾಣಿಯೊಂದು ಪತ್ತೆಯಾಗಿದೆ. ಸಮುದ್ರ ಮತ್ತು ಭೂ ಪ್ರಾಣಿಗಳ ಮಿಶ್ರಣದಂತೆ ಕಾಣುವ ಈ ರೀತಿಯ ಹಲವು ಉಭಯಚರ ಜೀವಿಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳು ಬಹಳ ಅಪರೂಪದ ಪ್ರಾಣಿಗಳಾಗಿವೆ ಹಾಗಾಗಿ ಈ ವಿಡಿಯೋವನ್ನು ಎಲ್ಲೆಡೆ ಶೇರ್‌ ಮಾಡಿ” ಎಂಬ ಬರಹದೊಂದಿಗೆ ಈ ವಿಚಿತ್ರ ಪ್ರಾಣಿ ಕಂಡು ಬಂದಿರುವ ವಿಡಿಯೋವನ್ನು ಎಲ್ಲೆಡೆಯಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿರುವ ಪ್ರಾಣಿಗಳು ಕೆಲವೊಂದು ಹಸುವಿನ ತಲೆ ಮತ್ತು ಅದರ ಬಣ್ಣವನ್ನೇ ಹೊಂದಿದ್ದರೆ. ಇನ್ನೂ ಕೆಲವೊಂದು ವಿಡಿಯೋಗಳಲ್ಲಿ ಹುಲಿಯ ತಲೆ ಮತ್ತು ಅದರ ಬಣ್ಣವನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳಲ್ಲಿರುವ ವಿಚಿತ್ರ ಪ್ರಾಣಿಗಳು ನಿಜವಾದ ಜೀವಗಳಂತೆ ಕಂಡು ಬರುತ್ತಿರುವುದರಿಂದ ಸಾಕಷ್ಟು ಮಂದಿ ಇದು ನಿಜವಾದ ಜೀವಿಗಳು ಇರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ರೀತಿಯ ಪ್ರಾಣಿಗಳು ನಿಜಕ್ಕೂ ಭೂಮಿಯ ಮೇಲೆ ಕಂಡು ಬಂದಿದೆಯೇ? ಇದರ ಹಿಂದಿನ ಸತ್ಯವೇನು ಎಂಬುದನ್ನು ನಾವು ಈ ಪ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೆವು. ಆದರೆ ಈ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಒಂದು ವೇಳೆ ಈ ವಿಡಿಯೋ ನಿಜವೇ ಆಗಿದ್ದರೆ ಈ ಕುರಿತು ಅಂತರಾಷ್ಟ್ರೀಯ ಮಾದ್ಯಮದಿಂದ ಹಿಡಿದು ಸ್ಥಳೀಯ ಪತ್ರಿಕೆಗಳು ಕೂಡ ವರದಿಯನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು VFX ಅಥವಾ AI ಬಳಸಿ ರಚಿಸಲಾಗಿದೆಯೇ ಎಂಬ ಅನುಮಾನದೊಂದಿಗೆ ವೈರಲ್‌ ವಿಡಿಯೋವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದೆವು. ಈ ವೇಳೆ ದನದ ತಲೆ ಹೊಂದಿರುವ ಪ್ರಾಣಿಯ ವಿಡಿಯೋವನ್ನು ಗಮನಿಸಿದಾಗ, ಆ ಪ್ರಾಣಿಯ ಹಿಂಬಂದಿಯಲ್ಲಿ ಹಸಿರು ಬೂಟು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬರು ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆಯುವುದನ್ನು ನೋಡಬಹುದಾಗಿದೆ. ಈ ವೇಳೆ ಅವರು ಮೂರು ಕಾಲುಗಳನ್ನು ಹೊಂದಿರುವಂತೆ ಕಾಣುತ್ತದೆ. ಈ ರೀತಿಯ ವಿಡಿಯೋಗಳು VFX ಅಥವಾ AI ತಪ್ಪಿನಿಂದ ನಡೆಯುವ ಸಾಧ್ಯತೆಗಳೆ ಹೆಚ್ಚಾಗಿರುತ್ತೆವೆ.

ಇನ್ನು ಹುಲಿಯ ತಲೆಯನ್ನು ಹೊಂದಿರುವ ಪ್ರಾಣಿಯ ವಿಡಿಯೋದ ಹಿಂಬದಿಯಲ್ಲೂ ಕೂಡ ಇದೇ ರೀತಿಯ ಲೋಪಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಅದರಲ್ಲಿ ಬಿಳಿ ಬಣ್ಣದ ಬೂಟು ಧರಿಸಿದ್ದವರ ಎರಡೂ ಕಾಲುಗಳು ಅಂಟಿಕೊಂಡಿದ್ದವು. ಇಲ್ಲಿ ವಿಚಿತ್ರವೆಂದರೆ ಅವರ ಬೂಟುಗಳು ಕೂಡ ಹಾಗೆಯೇ ಅಂಟಿಕೊಂಡಿರುವುದು ಕೂಡ ಸ್ಪಷ್ಟವಾಗಿ ಕಂಡು ಬಂದಿದ್ದರಿಂದ ಇದು ನಿಖರವಾಗಿ AI ನಿಂದ ನಿರ್ಮಾಣಗೊಂಡ ವಿಡಿಯೋ ಎಂಬುದು ನಮಗೆ ಖಚಿತವಾಗಿತ್ತು. ಹೀಗಾಗಿ ನಾವು ವೈರಲ್ ವೀಡಿಯೊದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ‘ಹಗ್ಗಿಂಗ್ ಫೇಸ್’  AI-ಕಂಟೆಂಟ್ ಡಿಟೆಕ್ಟರ್ ಮೂಲಕ ಪರಿಶೀಲನೆ ನಡೆಸಿದಾಗ ಈ ವೈರಲ್ ವಿಡಿಯೋ 93% ಕೃತಕವಾಗಿದೆ ಮತ್ತು AI ನಿಂದ ನಿರ್ಮಾಣವಾಗಿದೆ  ಎಂದು ಸ್ಪಷ್ಟ ಪಡಿಸಿದೆ..

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ದನದ ತಲೆ ಡಾಲ್ಫಿನ್‌ ರೀತಿಯ ಪ್ರಾಣಿ ಹಾಗೂ ಹುಲಿ ತಲೆಯ ಡಾಲ್ಫಿನ್‌ ರೀತಿಯ ಪ್ರಾಣಿಯ ವಿಡಿಯೋವನ್ನು AIನಿಂದ ನಿರ್ಮಿಸಲಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬುವ ಅಥವಾ ಶೇರ್‌ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ


ಇದನ್ನೂ ಓದಿ : ಡಿ ಮಾರ್ಟ್‌ನ 22ನೇ ವಾರ್ಷಿಕೋತ್ಸವಕ್ಕೆ 65,402.40 ರೂ ಗೆಲ್ಲಬಹುದು ಎಂಬುದು ಸುಳ್ಳು ಸುದ್ದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *