ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಅಸ್ಸಾಮಿಗೆ ಭೇಟಿ ನೀಡಿದ ಹಳೆಯ ವೀಡಿಯೋವನ್ನು ಮಣಿಪುರದಲ್ಲಿ “ಗೋ ಬ್ಯಾಕ್” ಪ್ರತಿಭಟನೆ ನಡೆದಿದೆ ಎಂದು ಹಂಚಿಕೆ

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(8 ಜುಲೈ, 2024) ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ನಂತರ ಇದು ಈಶಾನ್ಯ ರಾಜ್ಯಕ್ಕೆ ಅವರ ಮೂರನೇ ಭೇಟಿಯಾಗಿದೆ. ರಾಹುಲ್ ಗಾಂಧಿಯವರು ಇಂಫಾಲ, ಜಿರಿಬಾಮ್ ಮತ್ತು ಚುರಚಂದಪುರಕ್ಕೆ ಭೇಟಿ ನೀಡಿದ್ದು ಅಲ್ಲಿನ ಸಾಮಾನ್ಯ ಜನರಿಂದ ಸ್ವಾಗತಿಸಲ್ಪಟ್ಟಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಎರಡೂ ಕಡೆಯ ಆಂತರಿಕವಾಗಿ ಸ್ಥಳಾಂತರಗೊಂಡ ಮೇಟಿ ಮತ್ತು ಕುಕಿ-ಜೋ ಬುಡಕಟ್ಟು ಸಮುದಾಯದ ಜನರೊಂದಿಗೆ…

Read More

Fact Check | ಇತ್ತೀಚೆಗೆ ಹರಿದ್ವಾರದ ಪ್ರವಾಹ ಎಂದು 2011ರ ಜಪಾನಿನ ವಿಡಿಯೋ ತಪ್ಪಾಗಿ ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಹರಿದ್ವಾರದಲ್ಲಿ ಉಂಟಾದ ಭೀಕರ ಪ್ರವಾಹದ ದೃಶ್ಯಗಳು. ಇತ್ತೀಚೆಗೆ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಈ ಅವಧಿಯಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಎಚ್ಚರ. ಇಲ್ಲಿದಿದ್ದರೆ ಇಂತಹ ಭಯಾನಕ ಪ್ರವಾಹಕ್ಕೆ ನೀವು ಕೂಡ ಸಿಕ್ಕಿ ಬೀಳುವ ಸಾಧ್ಯತೆ ಇದೆ.” ಎಂದು ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಭಾರತದಲ್ಲಿ ಕೂಡ ಮಳೆ ವೇಗವನ್ನು ಪಡೆದುಕೊಳ್ಳುವ ಕುರಿತು ಕೆಲವೊಂದು ವರದಿಗಳು ಕೂಡ ಕಂಡು ಬಂದಿದೆ. ಹೀಗಾಗಿ ಈ ವಿಡಿಯೋ…

Read More

Fact Check | ಕ್ಯಾರಿಪಿಲ್ ಮಾತ್ರೆ ಡೆಂಗ್ಯೂ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು

ರಾಜ್ಯದಲ್ಲಿ ಇತ್ತೀಚೆಗೆ ಮಳೆ ಹೆಚ್ಚಾಗುತ್ತಿದ್ದಂತೆ ಡೆಂಗ್ಯು ಸೋಂಕು ಕೂಡ ಎಲ್ಲಡೆ ಹಬ್ಬಲು ಪ್ರಾರಂಭವಾಗಿದೆ. ಇದರ ಮಧ್ಯೆ ” ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ, ಈಗಲೆ ಖರೀದಿಸಿ, ಪಪ್ಪಾಯ ಎಲೆಯ ಸಾರವನ್ನು ಒಳಗೊಂಡಿರುವ ‘ಕ್ಯಾರಿಪಿಲ್‌’ ಮಾತ್ರೆಯು ಡೆಂಗ್ಯುವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವ ಶಕ್ತಿ ಹೊಂದಿದೆ. ‘ಅಂತಃಕರಣ’ ಇದನ್ನು ಉಚಿತವಾಗಿ ನೀಡುತ್ತಿದೆ. ಈ ಸಂದೇಶವನ್ನು ಯಾವುದೇ ಕಾರಣಕ್ಕೂ ಅಳಿಸಬೇಡಿ ಎಲ್ಲರಿಗೂ ತಲುಪುವವರೆಗೂ ಶೇರ್‌ ಮಾಡಿ”ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. #Caripill ,…

Read More
ಪಾರ್ಶ್ವವಾಯು

Fact Check: ತಾಮ್ರದ ಕಡಗ ಅಥವಾ ರಕ್ಷಾಸೂತ್ರ ಕಟ್ಟಿಕೊಳ್ಳುವ ಮೂಲಕ ಪಾರ್ಶ್ವವಾಯು ತಡೆಯಬಹುದು ಎಂಬುದಕ್ಕೆ ಸಾಕ್ಷಿಗಳಿಲ್ಲ

ಮುಂಗೈಗೆ ರಕ್ಷಾಸೂತ್ರದಂತಹ ದಾರ ಮತ್ತು ಲೋಹದ ಬ್ರಾಸೈಟ್‌ ಧರಿಸುವುದರಿಂದ ಪಾರ್ಶ್ವವಾಯುವನ್ನು ತಡೆಯಬಹುದು ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ವ್ಯಕ್ತಿಯೊಬ್ಬರು ಹೇಳಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ನಡೆಸಿದ ಅಧ್ಯಯನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಈ ಸಂಶೋಧನೆಯನ್ನು ಹಿಂದೂ ಪುರಾಣಗಳಲ್ಲಿ ಮತ್ತು ನೂರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು, ಸಾಧು ಸಂತರು ಕಂಡುಕೊಂಡಿದ್ದರು, ಎಂದು ಅಂಗೈನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಧರಿಸಲು ಶಿಫಾರಸು ಮಾಡಲಾಗುತ್ತಿದೆ. ಯುಕೆ ಅಧ್ಯಯನವು…

Read More
ದೆಹಲಿ ವಿಮಾನ ನಿಲ್ದಾಣ

Fact Check: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 1 ಅನ್ನು ಜಿಎಂಆರ್ ನಿರ್ಮಿಸಿದೆ ಮತ್ತು ಜುಲೈ 3, 2010 ರಂದು ಅವರು ಉದ್ಘಾಟಿಸಿದರು…

Read More

Fact Check | ತಮಿಳುನಾಡು ಕ್ರೈಸ್ತರು ದೇವಾಲಯವನ್ನು ಚರ್ಚ್‌ ಆಗಿ ಪರಿವರ್ತಿಸಿದ್ದಾರೆ ಎಂಬುದು ಸುಳ್ಳು

“ತಮಿಳುನಾಡಿನ ರಾಮನಾಥಪುರಂನಲ್ಲಿರುವ ಅಧಿಯಮಾನ್ ಎಂಬಲ್ಲಿನ ಹಳೆಯ ದೇವಾಲಯವನ್ನು ಕ್ರಿಶ್ಚಿಯನ್ನರು ಆಕ್ರಮಿಸಿಕೊಂಡರು ಮತ್ತು ಅದನ್ನು ಚರ್ಚ್ ಆಗಿ ಪರಿವರ್ತಿಸಿದ್ದಾರೆ. ಈಗಲೂ ಹಿಂದೂಗಳು ಎಚ್ಚೆತ್ತುಕೊಳ್ಳದೆ ಹೋದರೆ ಇನ್ನೂ ಹಲವು ದೇವಾಲಯಗಳು ಚರ್ಚ್‌ಗಳಾಗಿ ಬದಲಾಗುತ್ತವೆ. ಮುಂದೆ ಭಾರತದಲ್ಲಿ ದೇವಾಲಯಗಳು ಇದ್ದವು ಎಂದು ನಾವು ಪಠ್ಯ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ.” ಎಂಬ ಬರಹದೊಂದಿಗೆ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Christians occupied old temple. Kalasam replaced by a Cross and converted into a Church at Adhiyaman,…

Read More