Fact Check: ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಹೊಂದಿರುವ ಭಾರತೀಯರ ಯಾವುದೇ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ

ಸ್ವಿಸ್ ಬ್ಯಾಂಕ್

ವಿಕಿಲೀಕ್ಸ್ ‘ಯುಕೆಯ ರಹಸ್ಯ ಬ್ಯಾಂಕುಗಳಲ್ಲಿ ಭಾರತೀಯ ಕಪ್ಪು ಹಣ ಹೊಂದಿರುವವರ ಮೊದಲ ಪಟ್ಟಿಯನ್ನು’ ಪ್ರಕಟಿಸಿದೆ ಎಂಬ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ (ಇಲ್ಲಿಇಲ್ಲಿ ಮತ್ತು ಇಲ್ಲಿ) ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ 24 ಬಿಜೆಪಿ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದೇ ಸಂದೇಶವು ಹಲವಾರು ಐ.ಎನ್.ಡಿ.ಐ.ಎ(ಇಂಡಿಯಾ ಒಕ್ಕೂಟ) ಬಣದ ನಾಯಕರ ಹೆಸರುಗಳೊಂದಿಗೆ ವೈರಲ್ ಆಗುತ್ತಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಕಪ್ಪು ಹಣ 1.3 ಟ್ರಿಲಿಯನ್ ಡಾಲರ್ ಎಂದು ಈ ಪೋಸ್ಟ್‌ಗಳು ಆರೋಪಿಸಿವೆ.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ಚೆಕ್: ವೈರಲ್ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದಾಗ್ಯೂ, ಈ ಹುಡುಕಾಟವು ವಿಕಿಲೀಕ್ಸ್ ಭಾರತೀಯ ಕಪ್ಪು ಹಣ ಹೊಂದಿರುವವರ ಪಟ್ಟಿಯನ್ನು ಪ್ರಕಟಿಸಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಈ ಹುಡುಕಾಟದ ಸಮಯದಲ್ಲಿ, ವಿವಿಧ ಭಾರತೀಯ ರಾಜಕೀಯ ನಾಯಕರ ಹೆಸರುಗಳೊಂದಿಗೆ ಇದೇ ರೀತಿಯ ಸಂದೇಶಗಳು 2011 ರಿಂದ ವಿಕಿಲೀಕ್ಸ್ ಸ್ವಿಸ್ ಬ್ಯಾಂಕುಗಳಲ್ಲಿ (ಇಲ್ಲಿಇಲ್ಲಿ ಮತ್ತು ಇಲ್ಲಿ) ಭಾರತೀಯ ಕಪ್ಪು ಹಣ ಹೊಂದಿರುವವರ ಮೊದಲ ಪಟ್ಟಿಯನ್ನು ಪ್ರಕಟಿಸಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ, 

ವರದಿಗಳ ಪ್ರಕಾರ, 2011 ರಲ್ಲಿ, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರು ಭಾರತೀಯರು ಠೇವಣಿ ಇಟ್ಟಿರುವ ಹೆಚ್ಚಿನ ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿ ಹೊಂದಿದ್ದಾರೆ ಎಂದು ಹೇಳಿದ್ದರು. ಆದಾಗ್ಯೂ, ಸ್ವಿಸ್ ಬ್ಯಾಂಕುಗಳಲ್ಲಿ (ಇಲ್ಲಿಇಲ್ಲಿ) ಭಾರತೀಯ ಕಪ್ಪು ಹಣ ಹೊಂದಿರುವವರ ಹೆಸರುಗಳೊಂದಿಗೆ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ನಂತರ ನಾವು ವೈರಲ್ ಪ್ರತಿಪಾದನೆಗೆ ಸಂಬಂಧಿಸಿದಂತೆ ವಿಕಿಲೀಕ್ಸ್ ವೆಬ್ಸೈಟ್ನಲ್ಲಿ ಹುಡುಕಿದೆವು ಆದರೆ ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣ ಹೊಂದಿರುವವರ ಬಗ್ಗೆ ಅಂತಹ ಯಾವುದೇ ಪಟ್ಟಿ ಅಥವಾ ವರದಿ ಕಂಡುಬಂದಿಲ್ಲ. ವಿಕಿಲೀಕ್ಸ್ ತನ್ನ ಕೊನೆಯ ವರದಿಯನ್ನು 05 ಆಗಸ್ಟ್ 2021 ರಂದು ಪ್ರಕಟಿಸಿದೆ.

ಈ ಹುಡುಕಾಟದ ಸಮಯದಲ್ಲಿ, 2011 ರಲ್ಲಿ ವಿಕಿಲೀಕ್ಸ್ ಹಂಚಿಕೊಂಡ ಟ್ವೀಟ್ ಒಂದು ನಮಗೆ ಲಭ್ಯವಾಗಿದ್ದು, ಅದೇ ಸಂದೇಶದ ವಿಭಿನ್ನ ಸಂದೇಶವನ್ನು ನಕಲಿ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದೇ ರೀತಿಯ ಸ್ಪಷ್ಟೀಕರಣ ಪೋಸ್ಟ್ ಅನ್ನು ಅವರ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಸಹ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಹೊಂದಿರುವ ಭಾರತೀಯರ ಯಾವುದೇ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ.


ಇದನ್ನು ಓದಿ: ಪಪ್ಪಾಯಿ ಎಲೆಯ ರಸವು ಡೆಂಗ್ಯು ಖಾಯಿಲೆ ಗುಣ ಪಡಿಸುತ್ತದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *