Fact Check: ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ “ಕಳೆದ ಹತ್ತು ವರ್ಷಗಳಲ್ಲಿ ನಾವು ಸಾಧಿಸಿದ ವೇಗ ನಮಗೆ ಅವಮಾನ ತಂದಿದೆ” ಎಂದು ಹೇಳಿಲ್ಲ

ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತದ ಅಭಿವೃದ್ಧಿಯ ವೇಗದ ಬಗ್ಗೆ ಚರ್ಚಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ನಮಗೆ ಅವಮಾನ ತಂದಿದೆ’ ಎಂದು ಹೇಳಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಕಳೆದ ಹತ್ತು ವರ್ಷಗಳಲ್ಲಿ ನಾವು ಸಾಧಿಸಿದ ವೇಗ ನಮಗೆ ಅವಮಾನ ತಂದಿದೆ!!!????(हमने पिछले दस साल में जो स्पीड पकड़ी है, हमारा ‘मुँह काला’!!!???? नरेंद्र मोदी”) ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

ವೈರಲ್ ವೀಡಿಯೋವನ್ನು ಇಲ್ಲಿ ಮತ್ತು ಇಲ್ಲಿಯೂ ಕಾಣಬಹುದು. (ಆರ್ಕೈವ್ ಲಿಂಕ್).

ಫ್ಯಾಕ್ಟ್ ಚೆಕ್:

ನರೇಂದ್ರ ಮೋದಿಯವರ ಹೇಳಿಕೆಯನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ರಿವರ್ಸ್ ಇಮೇಜ್ ಸರ್ಚ್ ಮೂಲಕ ವೈರಲ್ ವೀಡಿಯೊ ಕೀಫ್ರೇಮ್‌ಗಳನ್ನು ಹುಡುಕಿದಾಗ ಜುಲೈ 2, 2024 ರಂದು ಸಂಸದ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿಯವರ ಭಾಷಣದ ವಿಸ್ತೃತ ಆವೃತ್ತಿ ನಮಗೆ ಲಭ್ಯವಾಗಿದೆ. “ಲೋಕಸಭಾ ಲೈವ್: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿಯವರ ಉತ್ತರ” ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗಳು 45:30 ನಿಮಿಷದಿಂದ ಪ್ರಾರಂಭವಾಗುತ್ತವೆ. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹೀಗೆ ಹೇಳಿದರು:

“ಇಂದು, ಭಾರತದ ಮಹತ್ವಾಕಾಂಕ್ಷೆಗಳು ವಿಶಾಲವಾಗಿವೆ. ಕಳೆದ 10 ವರ್ಷಗಳಲ್ಲಿ, ಭಾರತವು ನಮ್ಮ ಹಿಂದಿನ ಸಾಧನೆಗಳನ್ನು ಮೀರಿಸುವ ಮೂಲಕ ನಾವು ನಮ್ಮೊಂದಿಗೆ ಸ್ಪರ್ಧಿಸಬೇಕಾದ ಹಂತವನ್ನು ತಲುಪಿದೆ. ನಮ್ಮ ಅಭಿವೃದ್ಧಿಯ ಪಯಣ ಮುಂದಿನ ಹಂತಕ್ಕೆ ಸಾಗಬೇಕು. ಕಳೆದ ದಶಕದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ಎತ್ತರವು ಒಂದು ಮಾನದಂಡವನ್ನು ನಿಗದಿಪಡಿಸಿದೆ. ಕಳೆದ 10 ವರ್ಷಗಳಲ್ಲಿ ನಾವು ಸಾಧಿಸಿದ ವೇಗವೆಂದರೆ ನಮ್ಮ ಸ್ಪರ್ಧೆ, (ಮತ್ತು ನಂತರ ಎಡವುವುದು) ನಮ್ಮ ಮುಕ್ಕಲಾ, ನಮ್ಮ ‘ಮುಕಾಬ್ಲಾ’ (ಸ್ಪರ್ಧೆ) ಈಗ ಆ ವೇಗವನ್ನು ಇನ್ನಷ್ಟು ಹೆಚ್ಚಿಸುವುದು. ನಾವು ಅದೇ ಹುರುಪಿನಿಂದ ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸುತ್ತೇವೆ ಎಂದು ನಾನು ನಂಬುತ್ತೇನೆ.” ಎಂದಿದ್ದಾರೆ.

ಪ್ರಧಾನಿ ಆರಂಭದಲ್ಲಿ ‘ಮುಕಾಬ್ಲಾ’ ಅನ್ನು ‘ಮುಕಾಲಾ’ ಎಂದು ತಪ್ಪಾಗಿ ಉಚ್ಚರಿಸಿದರು, ಆದರೆ ಬೇಗನೆ ತಮ್ಮನ್ನು ಸರಿಪಡಿಸಿಕೊಂಡರು ಎಂದು ಆಯ್ದ ಭಾಗವು ಸ್ಪಷ್ಟವಾಗಿ ತೋರಿಸುತ್ತದೆ. ವೈರಲ್ ವೀಡಿಯೊ ಎಡಿಟ್ ಮಾಡಲಾದ ಆವೃತ್ತಿಯಾಗಿದ್ದು, ಪಿಎಂ ಮೋದಿ ಮುಕಾಲ ಎಂದು ಹೇಳಿದ್ದಾರೆ ಎನ್ನುವಂತೆ ಬಿಂಬಿಸಲು ಉದ್ದೇಶಪೂರ್ವಕವಾಗಿ ವೀಡಿಯೋವನ್ನು ತಿರುಚಲಾಗಿದೆ.

ಆದ್ದರಿಂದ, ವೈರಲ್ ವೀಡಿಯೊವನ್ನು ತಿರುಚಲಾಗಿದೆ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನು ಓದಿ: T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶದ ಅಭಿಮಾನಿಗಳು ಬೇಸರಗೊಂಡರು ಎಂಬುದು ಹಳೆಯ ವಿಡಿಯೋ


ವೀಡಿಯೋ ನೋಡಿ: ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *