Fact Check: ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಭಾಷಣವನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇಸ್ಲಾಮಿಕ್

ಪಶ್ಚಿಮ ಬಂಗಾಳದ ಫುರ್ಫುರಾ ಶರೀಫ್‌ನ ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಅವರ ಭಾಷಣದ ವೀಡಿಯೊ (ಇಲ್ಲಿಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅವರು ಮುಸ್ಲಿಮರಿಗೆ ತಮ್ಮ ಮಕ್ಕಳನ್ನು ‘ಹಿಂದೂಗಳ ವಿರುದ್ಧ ಯುದ್ಧ ಮಾಡಲು’ ಸಿದ್ಧಪಡಿಸಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವೀಡಿಯೊದಲ್ಲಿ, “ನಾನು ಇಂದು ಮತ್ತೆ ಹೇಳುತ್ತಿದ್ದೇನೆ, ಮುಸ್ಲಿಮರೇ, ಎಚ್ಚರಗೊಳ್ಳಿ. ಮುಸ್ಲಿಮರೇ, ನಿಮ್ಮ ಮಕ್ಕಳಿಗೆ ಹೇಗೆ ಹೋರಾಡಬೇಕೆಂದು ಕಲಿಸಿ. ಸಿದ್ಧರಾಗಿರಿ. ಸಿದ್ಧರಾಗಿರಿ. ತಂದೆ ಮತ್ತು ತಾಯಂದಿರೇ, ನಿಮ್ಮ ಮಕ್ಕಳನ್ನು ಸಿದ್ಧಪಡಿಸಿ. ನಾವು ಹಿಂದೂಗಳ ವಿರುದ್ಧ ಹೋರಾಡಬೇಕು” (ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ) ಎಂದು ತಾಹಾ ಸಿದ್ದಿಕಿ ಹೇಳುವುದನ್ನು ನಾವು ಕೇಳಬಹುದು.

ಈ ರೀತಿಯ ಪೋಸ್ಟ್ ಹಂಚಿಕೊಂಡಿರುವ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊವನ್ನು ಸೂಕ್ಮವಾಗಿ ಗಮನಿಸಿದಾಗ, ‘ಮೈ ಇಸ್ಲಾಮ್ 786’ ಎಂಬ ವಾಟರ್ ಮಾರ್ಕ್ ಇರುವುದನ್ನು ನಾವು ಗಮನಿಸಿದ್ದೇವೆ. ಇದರಿಂದ 2023ರ ಜನವರಿ 27ರಂದು ‘ಮೈ ಇಸ್ಲಾಂ 786′ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವೀಡಿಯೊದ ದೀರ್ಘ ಮತ್ತು ಮೂಲ ಆವೃತ್ತಿಯನ್ನು ನಾವು ಪತ್ತೆ ಹಚ್ಚಿದ್ದೇವೆ.

ಇಡೀ ವೀಡಿಯೊವನ್ನು ಪರಿಶೀಲಿಸಿದ ನಂತರ, ತ್ವಾಹಾ ಸಿದ್ದಿಕಿ ಅವರ ವೈರಲ್ ವೀಡಿಯೋ 07:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು 08:04 ಕ್ಕೆ ಕೊನೆಗೊಳ್ಳುತ್ತದೆ. ಟೈಮ್ ಸ್ಟಾಂಪ್ 07:20 ರಿಂದ, ಸಿದ್ದಿಕಿ ಅವರು ಹೀಗೆ ಹೇಳುವುದನ್ನು ಕೇಳಬಹುದು, “ಹೇ ಮುಸ್ಲಿಮರೇ, ಎದ್ದೇಳಿ! ಹೇ ಮುಸ್ಲಿಮರೇ, ನಿಮ್ಮ ಪುತ್ರರು ಮತ್ತು ಪುತ್ರಿಯರಿಗೆ ಹೋರಾಡಲು ಕಲಿಸಿ; ಅವರಿಗೆ ಯುದ್ಧ ಮಾಡಲು ಕಲಿಸಿ. ತಯಾರಾಗಿ! ಹಾಜರಿರಿ! ಮುಸ್ಲಿಮರ ಪುತ್ರರು ಮತ್ತು ಪುತ್ರಿಯರನ್ನು ಪ್ರಸ್ತುತಪಡಿಸಿ. ತಂದೆ ಮತ್ತು ತಾಯಂದಿರೇ, ನಿಮ್ಮ ಪುತ್ರರು ಮತ್ತು ಪುತ್ರಿಯರನ್ನು ಸಿದ್ಧಪಡಿಸಿ. ನಾವು ಹಿಂದೂಗಳ ವಿರುದ್ಧ ಯುದ್ಧ ಮಾಡಬೇಕು. ನಾವು ಹಿಂದೂಗಳ ವಿರುದ್ಧ ಹೋರಾಡಬೇಕು” (ಬಂಗಾಳಿಯಿಂದ ಕನ್ನಡಕ್ಕೆ ಗೆ ಅನುವಾದಿಸಲಾಗಿದೆ).

ಆದಾಗ್ಯೂ, ಟೈಮ್ ಸ್ಟಾಂಪ್ 08:04 ರ ನಂತರ, ಸಿದ್ದಿಕಿ ಯುದ್ಧವು ಶಿಕ್ಷಣದ ಬಗ್ಗೆ ಇರಬೇಕೇ ಹೊರತು ಶಸ್ತ್ರಾಸ್ತ್ರಗಳಿಂದಲ್ಲ ಎಂದು ವಿವರಿಸಿದ್ದಾರೆ. ಟೈಮ್ ಸ್ಟಾಂಪ್ 08:04 ರಿಂದ, ಸಿದ್ದಿಕಿ ಹೇಳುವುದನ್ನು ಕೇಳಬಹುದು, ಇದನ್ನು ಹೇಳಿದ ನಂತರ, ಎಲ್ಲಾ ಮಂತ್ರಿಗಳ ಮುಖದಲ್ಲಿ ಭಯವನ್ನು ನಾನು ನೋಡಬಲ್ಲೆ. ಕೋಮು ಬೆಂಕಿಯನ್ನು ಹೊತ್ತಿಸಲು ನಾನು ಇಲ್ಲಿದ್ದೇನೆ ಎಂದು ಅವರು ಭಾವಿಸುತ್ತಾರೆ. ಮುಸ್ಲಿಮರೇ, ನಿಮ್ಮ ಮಕ್ಕಳನ್ನು ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಹೋರಾಡಲು ಸಿದ್ಧಗೊಳಿಸಿ ಎಂದು ನಾನು ಪುನರುಚ್ಚರಿಸುತ್ತೇನೆ. ಆದರೆ ಯುದ್ಧವನ್ನು ಖಡ್ಗಗಳು, ಬಂದೂಕುಗಳು ಮತ್ತು ಲಾಠಿಗಳಿಂದ ಹೋರಾಡಬಾರದು. ಆ ಯುದ್ಧವು ಶಿಕ್ಷಣದ ಮೇಲೆ ನಡೆಯಲಿದೆ. ಮುಸ್ಲಿಂ ಹುಡುಗ ಶಿಕ್ಷಣಕ್ಕಾಗಿ ಹಿಂದೂ ಹುಡುಗನೊಂದಿಗೆ ಸ್ಪರ್ಧಿಸುತ್ತಾನೆ ಮತ್ತು ಮುಸ್ಲಿಂ ಹುಡುಗಿ ಶಿಕ್ಷಣಕ್ಕಾಗಿ ಹಿಂದೂ ಹುಡುಗಿಯೊಂದಿಗೆ ಸ್ಪರ್ಧಿಸುತ್ತಾಳೆ. ಅವರು ಮುಂದುವರೆದಂತೆ, ಬಂಗಾಳದ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗೂಡುತ್ತಾರೆ ಮತ್ತು ಶಿಕ್ಷಣವನ್ನು ತಮ್ಮ ಆಯುಧವಾಗಿಟ್ಟುಕೊಂಡು ಹೋರಾಡುತ್ತಾರೆ “. ತ್ವಾಹಾ ಸಿದ್ದಿಕಿ ಅವರ ಈ ಭಾಷಣವನ್ನು 2023 ರ ಜನವರಿ 27 ರಂದು ‘ವಾಜ್ ಮಹಫಿಲ್ 21’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು ಮತ್ತು ಅದನ್ನು ಇಲ್ಲಿ ನೋಡಬಹುದು.

ಇದರಿಂದ, ಮುಸ್ಲಿಂ ಮತ್ತು ಹಿಂದೂ ಮಕ್ಕಳು ಶಿಕ್ಷಣದ ವಿಷಯದಲ್ಲಿ ಸ್ಪರ್ಧಿಸುವ ಬಗ್ಗೆ ಸಿದ್ದಿಕಿ ಅವರ ಭಾಷಣದ ಒಂದು ಭಾಗವನ್ನು ತಿರುಚಲಾಗಿದೆ ಮತ್ತು ತಪ್ಪು ಮಾಹಿತಿಯನ್ನು ಹರಡಲು ಸಂದರ್ಭಕ್ಕೆ ಅನುಗುಣವಾಗಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಜೂನ್ 2022 ರಲ್ಲಿ ‘ಟೈಮ್ಸ್ ನೌ’ ಪ್ರಕಟಿಸಿದ ವರದಿಯ ಪ್ರಕಾರ, ಫುರ್ಫುರಾ ಧರ್ಮಗುರು ತ್ವಾಹಾ ಸಿದ್ದಿಕಿ ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಈ ಆಧಾರದ ಮೇಲೆ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಮುಸ್ಲಿಮರಿಗೆ ತಮ್ಮ ಮಕ್ಕಳನ್ನು ‘ಹಿಂದೂಗಳ ವಿರುದ್ಧ ಯುದ್ಧ ಮಾಡಲು’ ಸಿದ್ಧಪಡಿಸಲು ಪ್ರಚೋದಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ನಾವು ಹಿಂದುಗಳಿಗಿಂತ ಹೆಚ್ಚು ಮುಂದುವರೆಯಬೇಕು ಎಂಬ ಅರ್ಥದಲ್ಲಿ ಹೇಳಿರುವ ತುಣುಕನ್ನು ತಪ್ಪು ಅರ್ಥದಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಅಂಜಲಿ ಬಿರ್ಲಾ UPSC ಪರೀಕ್ಷೆಗೆ ಹಾಜಾರಾಗದೇ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಎಂಬುದು ಸುಳ್ಳು


ವೀಡಿಯೋ ನೋಡಿ: ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *