ವಯನಾಡ್‌

Fact Check: ಕೇರಳದ ಇಡುಕ್ಕಿಯ ಭೂಕುಸಿತದ 2020ರ ಹಳೆಯ ಫೋಟೋವನ್ನು ವಯನಾಡ್‌ನ ಇತ್ತೀಚಿನ ಫೋಟೋ ಎಂದು ತಪ್ಪಾಗಿ ಹಂಚಿಕೆ

ಹಲವಾರು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಭೂಕುಸಿತದ ನಂತರ ನೆಲದ ಮೇಲೆ ಬಿದ್ದಿರುವ ಅವಶೇಷಗಳನ್ನು ತೋರಿಸುವ ಚಿತ್ರವನ್ನು ಕೇರಳದ ವಯನಾಡ್ ಎಂದು ಹಂಚಿಕೊಂಡಿದ್ದಾರೆ. ಜುಲೈ 30 ರಂದು ಭಾರಿ ಮಳೆಯ ನಡುವೆ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 186 ಜನರು ಗಾಯಗೊಂಡಿದ್ದಾರೆ. ಈ ಪೋಟೋವನ್ನು ಔಟ್ಲುಕ್, ನಾರ್ತ್ ಈಸ್ಟ್ ಲೈವ್, ಹಿಂದೂಸ್ತಾನ್ ಟೈಮ್ಸ್, ದಿ ಎಕನಾಮಿಕ್ ಟೈಮ್ಸ್, ಆಲ್ ಇಂಡಿಯಾ ರೇಡಿಯೋ ನ್ಯೂಸ್, ಡಿಡಿ ನ್ಯೂಸ್, ಎನ್ಡಿಟಿವಿ, ಟೈಮ್ಸ್ ನೌ ತಮಿಳು, ಅಮರ್ ಉಜಾಲಾ, ಜೀ ನ್ಯೂಸ್ ಹಿಂದಿ, ಮಾತೃಭೂಮಿ, ಇಂಗ್ಲಿಷ್ ಜಾಗರಣ್, ಎಬಿಪಿ ಲೈವ್, ಓಂಮನೋರಮಾ, ಸ್ವರ್ಗ್ಯ, ಡೆಕ್ಕನ್ ಹೆರಾಲ್ಡ್ ಮತ್ತು…

Read More
ಶಿವಸೇನೆ

Fact Check: ಬಿಜೆಪಿಯ ಮೇಧಾ ಕುಲಕರ್ಣಿ ಮರಾಠಿಯಲ್ಲಿ ಮಾತನಾಡುವುದಕ್ಕೆ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಆಕ್ಷೇಪ ವ್ಯಕ್ತಪಡಿಸಿಲ್ಲ

ರಾಜ್ಯಸಭಾ ಕಲಾಪದ ಸಂದರ್ಭದಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮೇಧಾ ಕುಲಕರ್ಣಿ ನಡುವಿನ ಸಂಭಾಷಣೆಯನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಅಧಿವೇಶನದಲ್ಲಿ, ಪ್ರಿಯಾಂಕಾ ಚತುರ್ವೇದಿ ರಾಜ್ಯಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ವೈರಲ್ ವೀಡಿಯೋದಲ್ಲಿ, ಯುವಕರಿಗೆ ತರಬೇತಿ ಮತ್ತು ಉತ್ಕೃಷ್ಟತೆ ಮತ್ತು ಅನುಭವದ ಪ್ರಮಾಣಪತ್ರವನ್ನು ನೀಡುವ ಯೋಜನೆಯನ್ನು ಕೈಗೊಂಡಿದ್ದಕ್ಕಾಗಿ ಮೇಧಾ ಕುಲಕರ್ಣಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಮಹಾರಾಷ್ಟ್ರದ ಮಹಾನಗರಕ್ಕೆ ಬಜೆಟ್ ಹಂಚಿಕೆಯ ಬಗ್ಗೆ ಅವರು ಮಾತನಾಡುತ್ತಾರೆ….

Read More

Fact Check | ಬಾಂಗ್ಲಾದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾರತದ ವಿರುದ್ಧ ಘೋಷಣೆ ಕೂಗಿಲ್ಲ

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಕೋಟ ವ್ಯವಸ್ಥೆಯನ್ನು ವಿರೋಧಿಸಿ ವ್ಯಾಪಕವಾಗಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾರತದ ವಿರುದ್ಧ ಘೋಷಣೆಯನ್ನು ಕೂಗಲಾಗಿದೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಮೂಲಕ ಬಾಂಗ್ಲಾದೇಶದಲ್ಲಿ ಯಾವುದೇ ಪ್ರತಿಭಟನೆ ನಡೆದರೂ ಅಲ್ಲಿ ಭಾರತ ವಿರೋಧಿ ನಿಲುವು ಇರುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ. Video is from #Bangladesh Jamaat-e-Islami students are protesting against Quota, but chanting Anti-India and Anti- Modi slogans!?#bangladeshstudentprotests #bangladesh_quotha_movement pic.twitter.com/mpt3F1PnJx — Debashish Sarkar…

Read More

Fact Check | ಪ್ಯಾರಿಸ್ ಒಲಿಂಪಿಕ್ಸ್‌ನ ವಿವಾದಾತ್ಮಕ ಉದ್ಘಾಟನಾ ಸಮಾರಂಭವನ್ನು ಕಮಲಾ ಹ್ಯಾರಿಸ್ ಹೊಗಳಿಲ್ಲ

“ಲಿಯೊನಾರ್ಡೊ ಡಾ ವಿನ್ಸಿ ಅವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್ ಅನ್ನು ವಿಡಂಬನೆ ಮಾಡಿದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಕುರಿತು ಕಮಲಾ ಹ್ಯಾರಿಸ್‌ ಅವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕ್ರೈಸ್ತರಿಗೆ ಅವಮಾನವಾದ ಈ ಕಾರ್ಯಕ್ರಮವನ್ನು ಕಮಲಾ ಹ್ಯಾರಿಸ್‌ ಅವರು ಹೇಗೆ ಒಪ್ಪಿಕೊಂಡಿದ್ದಾರೆ. ಈ ಬಾರಿ ಅಮೆರಿಕದ ಚುನಾವಣೆಯಲ್ಲಿ ಯೋಚಿಸಿ ಮತ ಚಲಾಯಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. Kamala enjoyed the perverse…

Read More
ಲವ್‌ ಜಿಹಾದ್‌

Fact Check: ಸೂಟ್ಕೇಸ್‌ನಲ್ಲಿ ಪತ್ತೆಯಾದ ಶವದ ಹಳೆಯ ವಿಡಿಯೋವನ್ನು ಲವ್‌ ಜಿಹಾದ್‌ ಪ್ರಕರಣ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೆ

ಮುಸ್ಲಿಂ ಗೆಳೆಯನಿಂದ ಹತ್ಯೆಗೀಡಾದ ಹಿಂದೂ ಮಹಿಳೆ ಎಂಬ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಮಹಿಳೆಯ ಶವವನ್ನು ಸೂಟ್ಕೇಸ್‌ನಲ್ಲಿ ತುಂಬಿದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ‘ಲವ್ ಜಿಹಾದ್’ ಪ್ರಕರಣ ಎಂದು ನಿರೂಪಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ, “ಎಲ್ಲಾ ಅಬ್ದುಲ್‌ಗಳು ಒಂದೇ…. ಮತ್ತೊಂದು ಸೂಟ್ ಕೇಸ್… ಇನ್ನೊಂದು ಕಥೆ.” ಮದುವೆಯ ನೆಪದಲ್ಲಿ ಮುಸ್ಲಿಮರು ಹಿಂದೂ ಮಹಿಳೆಯರನ್ನು ಬಲವಂತವಾಗಿ ಅಥವಾ ಮೋಸದಿಂದ ಮತಾಂತರಿಸುತ್ತಿದ್ದಾರೆ ಎಂಬ ಪಿತೂರಿ ಸಿದ್ಧಾಂತವನ್ನು ಪ್ರಚಾರ ಮಾಡಲು ಹಿಂದೂ ಬಲಪಂಥೀಯ ಗುಂಪುಗಳು ‘ಲವ್ ಜಿಹಾದ್’ ಪ್ರಕರಣ ಇದು…

Read More
ವಯನಾಡ್

ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿದ್ದು ಹವಾಮಾನ ಕಾರಣಗಳಿಂದ ಹೊರತು ಅನಿವಾರ್ಯ ಕಾರಣಗಳಿಂದಲ್ಲ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಸರಣಿ ಭೂ ಕುಸಿತಗಳ ಪರಿಣಾಮ ನೂರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದರು. ಕೆಲವರು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಇಡೀ ದೇಶವೇ ಈ ದುರ್ಘಟನೆಗೆ ಸಂತಾಪ ಸೂಚಿಸಿದೆ. ಸದ್ಯ ವಯನಾಡ್‌ನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ಘಟನೆಗೆ ಸಂತಾಪ ವ್ಯಕ್ತಪಡಿಸಿ, ತನ್ನ ಸಹೋದರಿ ಪ್ರಿಯಾಂಕ ಗಾಂಧಿಯೊಂದಿಗೆ ಇಂದು ಬುಧವಾರ ವಯನಾಡ್‌ಗೆ ತೆರಳಿ ಸಂತ್ರಸ್ತರ ಅಳಲು ಕೇಳುವುದಾಗಿ ತಿಳಿಸಿದ್ದರು. ಆದರೆ ನಂತರ ತಮ್ಮ ಭೇಟಿಯನ್ನು…

Read More

Fact Check: 2011ರ ಜಾಹೀರಾತಿನ ಚಿತ್ರವನ್ನು ಕೇರಳದ ಕಾಲೇಜು ಭಾರತೀಯ ಸಂಸ್ಕೃತಿಯನ್ನು ಅಣಕಿಸುತ್ತಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ

ಕೇರಳದ ಕಾಲೇಜೊಂದರಲ್ಲಿ ಭಾರತೀಯ ಮತ್ತು ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಘಾಗ್ರಾ ಚೋಲಿ ಎಂಬುದು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಉದ್ದನೆಯ ಸ್ಕರ್ಟ್ ಮತ್ತು ರವಿಕೆಯಾಗಿದೆ. ಫೋಟೋವು ಘಾಗ್ರಾ ಚೋಲಿಯ ರಾಜಸ್ಥಾನಿ ಶೈಲಿಯನ್ನು ಚಿತ್ರಿಸುತ್ತದೆ ಆದರೆ ಅದನ್ನು ಕತ್ತರಿಸಿ ಮಿನಿ ಸ್ಕರ್ಟ್ ಆಗಿ ತಯಾರಿಸಲಾಗಿದೆ ಎಂದು ತೋರಿಸುತ್ತದೆ. ಕೇರಳದಲ್ಲಿ ನಡೆದ ಕಾಲೇಜು ಸ್ಪರ್ಧೆಯಲ್ಲಿ ಈ ತಂಡವು ಮೂರನೇ ಸ್ಥಾನವನ್ನು ಗೆದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಎಕ್ಸ್ ಮತ್ತು…

Read More

Fact Check | ಆಂಧ್ರಪ್ರದೇಶದಲ್ಲಿ ಜಾವೇದ್‌ನಿಂದ ರೋಹಿತ್ ಕೊ*ಲೆ ಎಂಬುದು ಸುಳ್ಳು – ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಸಮುದಾಯದವರು

ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಜಾವೇದ್ ಎಂಬ ಮುಸ್ಲಿಂ ವ್ಯಕ್ತಿ ರೋಹಿತ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ” ಎಂದು ಹಂಚಿಕೊಳ್ಳಲಾಗುತ್ತಿದ್ದು,  ದೆಹಲಿಯ ಸರೈ ಕಾಲೇ ಖಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಹೀಗಾಗಿ ಈ ವಿಡಿಯೋ ವೈರಲ್‌ ಕೂಡ ಆಗಿದೆ. यह घटना दिल्ली सरायकाले खां की पता चल…

Read More

Fact Check | ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ಭಾರತೀಯ ಹೈಕಮಿಷನರ್ ಭಾಗವಹಿಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತರ ಎಂಟು ಜನರೊಂದಿಗೆ ಭದ್ರತಾ ಸಭೆಯಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ‘ಭಾರತೀಯ ಹೈಕಮಿಷನರ್’ ಕೂಡ ಭಾಗವಹಿಸಿದ್ದರು ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಬಾಂಗ್ಲಾದ ಭದ್ರತೆಯ ವಿಚಾರದಲ್ಲಿ ಭಾರತೀಯ ಹೈಕಮಿಷನ್‌ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬ ರೀತಿಯಲ್ಲಿ ಕೂಡ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದ ಕೇಂದ್ರ ಸರ್ಕಾರ ಯಾವುದೋ ಅಕ್ರಮದಲ್ಲಿ ತೊಡಗಿಸಿಕೊಂಡಿರಬಹುದು ಎಂದು ಕೂಡ ಹಲವರು ಈ ಫೋಟೋವನ್ನು…

Read More
ಜಿಹಾದ್

Fact Check: ಮುಂಬೈನಲ್ಲಿ ಬಾರ್ಬರ್ ಜಿಹಾದ್‌ ಎಂದು ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

ಮುಂಬೈನ ಬಾಂದ್ರಾದಲ್ಲಿ ಕ್ಷೌರಿಕ ಜಿಹಾದ್ ಅನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಬಂಧಿತ ಇಬ್ಬರು ವ್ಯಕ್ತಿಗಳ ಚಿತ್ರವನ್ನು ಹಂಚಿಕೊಂಡಿರುವ ಈ ಪೋಸ್ಟ್‌ಗಳಲ್ಲಿ, ಕ್ಷೌರಿಕ ಅಂಗಡಿಗಳಿಗೆ ಭೇಟಿ ನೀಡುವ ಹಿಂದೂ ಗ್ರಾಹಕರಿಗೆ ಎಚ್ಐವಿ / ಏಡ್ಸ್ ರೋಗವನ್ನು ಹರಡಲು ಮಸೀದಿಗಳು ಧನಸಹಾಯ ನೀಡುತ್ತಿವೆ ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ಈ ಕುರಿತು ಹುಡುಕಲು ನಾವು ಚೈರಲ್ ಪೋಟೋವನ್ನು ರಿವರ್ಸ್‌ ಇಮೆಜ್‌ ಸರ್ಚ್‌ನಲ್ಲಿ ಹುಡುಕಿದಾಗ, ಅದೇ ಫೋಟೋ…

Read More