Fact Check: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು 2012 ರಲ್ಲಿ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂಬುದು ಸುಳ್ಳು

ಸುಪ್ರಿಯಾ ಶ್ರಿನಾಟೆ

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು 2012 ರಲ್ಲಿ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳಲಾದ ಟ್ವಿಟ್‌ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ಟ್ವಿಟ್‌ನ ಸ್ಕ್ರೀನ್ ಶಾಟ್ ಏಪ್ರಿಲ್ 24, 2012 ರ ದಿನಾಂಕದ್ದಾಗಿದ್ದು, ಶ್ರಿನಾಟೆ ಸೋನಿಯಾ ಗಾಂಧಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. “ಇಟಲಿಯ ಎಲ್ಲಾ ಡ್ಯಾನ್ಸ್ ಬಾರ್ ಗಳು ಮುಚ್ಚಲ್ಪಟ್ಟಿವೆಯೇ?” ಎಂದು ಅವರು ಶೀರ್ಷಿಕೆ ನೀಡಿದ್ದರು ಎಂದು ಹಂಚಿಕೊಳ್ಳಾಗುತ್ತಿದೆ.

“ಸೋನಿಯಾ ಗಾಂಧಿ ಇಟಲಿಯಲ್ಲಿ ನೃತ್ಯಗಾರ್ತಿಯಾಗಿದ್ದರು, ನಾನು ಇದನ್ನು ಹೇಳುತ್ತಿಲ್ಲ, ಸುಪ್ರಿಯಾ ಶ್ರೀನೆಟ್ ಇದನ್ನು ಹೇಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಸ್ಕ್ರೀನ್ ಶಾಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.ಫ್ಯಾಕ್ಟ್ ಚೆಕ್: ಈ ಕುರಿತು ನಾವು ಸಾಕಷ್ಟು ಹುಡುಕಿದಾಗ ಈ ರೀತಿ ಸೋನಿಯಾ ಗಾಂಧಿಯವರನ್ನು ಉದ್ದೇಶಿಸಿ ಸುಪ್ರಿಯಾ ಶ್ರಿನಾಟೆಯವರು ಯಾವುದೇ ಅವಹೇಳನಕಾರಿ ಪೋಸ್ಟ್‌ ಮಾಡಿರುವುದು ಕಂಡುಬಂದಿಲ್ಲ. ನಾವು ಗೂಗಲ್ ರಿವರ್ಸ್‌ ಇಮೇಜ್ ಮತ್ತು ಕೀವರ್ಡ್‌ ಹುಡುಕಾಟವನ್ನು ನಡೆಸಿದರು ಸಹ ಇಂತಹ ಪೋಸ್ಟ್‌ ಕಂಡು ಬಂದಿಲ್ಲ.


ಎಕ್ಸ್‌ನಲ್ಲಿ ಪೋಸ್ಟ್‌ ಡಿಲಿಟ್‌ ಮಾಡಿದರೂ ಸಹ ಅದಕ್ಕೆ ನೀಡಿದ ಪ್ರತಿಕ್ರಯೆಗಳು(ಕಮೆಂಟ್‌)ಗಳು ನೋಡಲು ಸಿಗುತ್ತವೆ. ಆದರೂ ಸಹ ನಮಗೆ ಇಂತಹ ಪೋಸ್ಟ್‌ ನಾಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ವರ್ಷದ ಮಾರ್ಚ್‌ನಿಂದ ಎಕ್ಸ್ ಮತ್ತು ಫೇಸ್ಬುಕ್‌ನಲ್ಲಿ ಈ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಪೋಸ್ಟ್‌ಗಳು ದೊರೆಯುತ್ತವೆ, ಇದರಿಂದ ಈ ನಕಲಿ ಪೋಸ್ಟ್‌ ಅನ್ನು ಮಾರ್ಚ್‌ನಲ್ಲಿ ಸೃಷ್ಟಿಸಿ ಹರಿಬಿಡಲಾಗಿದೆ ಎಂದು ತಿಳಿದು ಬಂದಿದೆ. ಮಾರ್ಚ್ ಮತ್ತು ಜೂನ್ 2024 ರ ನಡುವೆ ಹಳೆಯ 2012 ಪೋಸ್ಟ್ ಅನ್ನು ಅಳಿಸಿರಬಹುದು ಎಂದು ನಾವು ಬೇರೋಂದು ಹುಡುಕಾಟವನ್ನು ನಡೆಸಿದರು ಸಹ ಸುಪ್ರಿಯಾ ಅವರ ಇಂತಹ ಯಾವ ಪೋಸ್ಟ್‌ ಲಭ್ಯವಾಗಿಲ್ಲ.

ವೈರಲ್ ಹೇಳಿಕೆಗಳನ್ನು ನಿರಾಕರಿಸಿದ ಶ್ರಿನಾಟೆ ಅವರು, “ಅಂತಹ ಯಾವುದೇ ಟ್ವೀಟ್ ಅನ್ನು ನನ್ನ ಖಾತೆಯಿಂದ ಎಂದಿಗೂ ಹಂಚಿಕೊಳ್ಳಲಾಗಿಲ್ಲ, 2012 ರಲ್ಲಿ (ನಕಲಿ ಚಿತ್ರದಲ್ಲಿ ತೋರಿಸಿರುವಂತೆ) ಸಹ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಕಾಂಗ್ರೆಸ್ ಕುಟುಂಬದಿಂದ ಬಂದಿದ್ದೇನೆ, ನನ್ನ ತಂದೆ 2009 ರಿಂದ 2014 ರವರೆಗೆ ಕಾಂಗ್ರೆಸ್ ಸಂಸದರಾಗಿದ್ದರು ಮತ್ತು ನಾನು ಯಾವಾಗಲೂ ಸೋನಿಯಾ ಗಾಂಧಿಜಿ ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ ಎಂದು ಬಿಜೆಪಿ ಬೆಂಬಲಿಗರು ಮತ್ತು ಟ್ರೋಲ್‌ಗಳಿಗೆ ಚೆನ್ನಾಗಿ ತಿಳಿದಿರಬೇಕು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅಗ್ಗದ ಸಾಹಸಗಳು ಮತ್ತು ನನ್ನ ವಿರುದ್ಧದ ಸುಳ್ಳು ದುರುದ್ದೇಶಪೂರಿತ ಆರೋಪಗಳು ಈ ನಕಲಿ ಸುದ್ದಿ ಮಾರಾಟಗಾರರ ವಿರುದ್ಧ ಹೋರಾಡುವ ನನ್ನ ಸಂಕಲ್ಪವನ್ನು ಇನ್ನಷ್ಟು ಆಳಗೊಳಿಸುತ್ತವೆ” ಎಂದು ಹೇಳಿದ್ದಾರೆ.


ಇದನ್ನು ಓದಿ: ಗೂಗಲ್‌ ಮ್ಯಾಪ್‌ ತನ್ನ ಅಪ್ಲಿಕೇಶನ್‌ನಿಂದ ಪ್ಯಾಲೆಸ್ಟೈನ್ ಹೆಸರನ್ನು ತೆಗೆದಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *