Fact Check | ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸಿದ ಫೋಟೋ ಎಡಿಟೆಡ್‌ ಆಗಿದೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುತ್ತಿರುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ ಫೋಟೋಗೆ ತಲೆಬಾಗಿ ನಮಸ್ಕರಿಸುವುದು ಮತ್ತು ಹಲವು ಗಣ್ಯರನ್ನು ಟಿಪ್ಪು ಸುಲ್ತಾನ್‌ ಭಾವಚಿತ್ರ ಇರುವ ಜಾಗದಲ್ಲಿ ಭೆಟಿಯಾಗುವುದನ್ನು ನೋಡಬಹುದಾಗಿದೆ. ಹಾಗಾಗಿ ಈ ಫೋಟೋ ವೈರಲ್‌ ಕೂಡ ಆಗುತ್ತಿದೆ. 

ಇನ್ನು ಹೀಗೆ ಹಂಚಿಕೊಳ್ಳಲಾಗುತ್ತಿರುವ ಬಹುತೇ ಫೊಟೋಗಳು ನೋಡಲು ನಿಜವಾದ ಫೋಟೋದಂತೆ ಕಂಡು ಬಂದಿರುವುದರಿಂದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಆದರೆ ವೈರಲ್‌ ಫೋಟೋದಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುವಂತಹ ಹಲವು ಫೋಟೋಗಳು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಇದರಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ಕೆಲವೊಂದು ಪ್ರಮುಖ ಫೋಟೋಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಅವುಗಳನ್ನು ಫೋಟೋಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಫ್ಯಾಕ್ಟ್‌ಚೆಕ್‌ ನಡೆಸಲಾಗಿದೆ.

ಪೋಟೋ-1

ಪ್ರಧಾನಿ ನರೇಂದ್ರ ಮೋದಿ ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುತ್ತಿರುವುದನ್ನು ತೋರಿಸುವ ವೈರಲ್ ಚಿತ್ರವನ್ನು ಗೂಗಲ್‌ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, 14 ಏಪ್ರಿಲ್ 2022 ರಂದು ಮೋದಿ ಅವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡ ಚಿತ್ರವು ಕಾಣಿಸಿಕೊಂಡಿದೆ. ಈ ಚಿತ್ರದ ಶೀರ್ಷಿಕೆಯಲ್ಲಿ, “ಇಂದು, ಅಂಬೇಡ್ಕರ್ ಜಯಂತಿಯಂದು, ದೆಹಲಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪ್ರಧಾನಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.” ಎಂದು ಬರೆದುಕೊಳ್ಳಲಾಗಿದೆ. ಇದರ ಜೊತೆಗೆ ಹಲವು ಮಾಧ್ಯಮ ವರದಿಗಳು ಕೂಡ ಇದೇ ಫೋಟೋದೊಂದಿಗೆ ಕಂಡು ಬಂದಿರುವುದರಿಂದ ವೈರಲ್‌ ಫೋಟೋ ಎಡಿಟೆಡ್‌ ಆಗಿದೆ.

                                                                                  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಫೋಟೋ

ಪ್ರಧಾನಿ ಮೋದಿ 14 ಏಪ್ರಿಲ್ 2022 ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿರುವ ಫೋಟೋ

 

ಫೋಟೋ-2 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಮತ್ತೊಂದು ಫೋಟೋದಲ್ಲಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿನ ಸರ್ಕಾರಿ ನಿವಾಸದಲ್ಲಿ ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಬೀರ್ ಬಿಕ್ರಮ್ ಶಾ ಅವರಿಗೆ ಟಿಪ್ಪು ಸುಲ್ತಾನ್‌ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ ಈ ಕುರಿತು ಪರಿಶೀಲನೆ ನಡೆಸಲು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಲೇಖನವೊಂದು ಪತ್ತೆಯಾಗಿದ್ದು ಅದರಲ್ಲಿ ಯೋಗಿ ಆದಿತ್ಯನಾಥ್ ಅವರು  ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಬೀರ್ ಬಿಕ್ರಮ್ ಶಾ ಅವರಿಗೆ ಕುಂಭಮೇಳದ ಲಾಂಛನದ ಚಿತ್ರವನ್ನು ನೀಡುತ್ತಿರುವುದನ್ನು ನೋಡಬಹುದಾಗಿದೆ. ಮತ್ತು ಇದನ್ನೆ ಯೋಗಿ ಆದಿತ್ಯನಾಥ್‌ ಅವರು 8 ಜನವರಿ 2018ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದನ್ನು ನೋಡಬಹುದಾಗಿದೆ..

                                                                                ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಫೋಟೋ

ಯೋಗಿ ಆದಿತ್ಯನಾಥ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌

ಫೋಟೋ-3

ಇನ್ನು ಮತ್ತೊಂದು ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟಿಪ್ಪು ಸುಲ್ತಾನ್‌ ಅವರ ಫೋಟೋಗೆ ತಲೆಬಾಗಿ ನಮಸ್ಕರಿಸುತ್ತಿರುವುದನ್ನು ನೋಡಬಹುದಾಗಿದೆ. ಈ ಫೋಟೋ ಕುರಿತು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ 23 ಜನವರಿ 2023 ರಂದು ಮೋದಿ ಅವರು ತಮ್ಮ ಅಧಿಕೃತ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದೆ. ಅದರಲ್ಲಿ ” ಪ್ರಧಾನಿ ಮೋದಿ ಅವರು ಸಂಸತ್ ಭವನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಇದನ್ನು ಪಿಐಬಿ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವುದನ್ನು ನೋಡಬಹುದಾಗಿದೆ.

 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋ

ಪ್ರಧಾನಿ ಮೋದಿ ಅವರು 23 ಜನವರಿ 2023 ರಂದು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌

ಒಟ್ಟಾರೆಯಾಗಿ ಹೇಳುವುದಾದರೆ, ಈ ರೀತಿಯ ಇನ್ನೂ ಹಲವು ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರ ಎಡಿಟ್ ಮಾಡಿದ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಅದರಲ್ಲೂ ಪ್ರಮುಖವಾಗಿ ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ತಪ್ಪು ಮಾಹಿತಿಯನ್ನು ವೈರಲ್‌ ಮಾಡಲಾಗುತ್ತಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ಶೇರ್‌ ಮಾಡುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಬಿಜೆಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬನಿಗೆ ಮನಸೋಇಚ್ಛೆ ತಳಿಸಿರುವುದು ಬಿಜೆಪಿ ಶಾಸಕ ವಿಪುಲ್ ದುಬೆ ಅಲ್ಲ ಬಿಜೆಪಿ ಕಾರ್ಯಕರ್ತ ಪ್ರತೀಕ್ ತಿವಾರಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *