Fact Check: ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ಮನೀಶ್ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ ಎಂಬುದು ಸುಳ್ಳು

ಅರವಿಂದ್ ಕೇಜ್ರಿವಾಲ್

ನೆನ್ನೆಯಷ್ಟೇ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು 3 ದಿನಗಳ ಸಿಬಿಐ ವಶಕ್ಕೆ ನೀಡಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕಾರಣ ಎಂದು ದೂಷಿಸಿದ್ದಾರೆ ಎಂದು ಪ್ರತಿಪಾದಿಸಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನ್ಯೂಸ್ 18, ಲೋಕಮತ್ ಮತ್ತು ಫ್ರೀ ಪ್ರೆಸ್‌ ಜರ್ನಲ್‌ ಸೇರಿದಂತೆ ಅನೇಕ ಸುದ್ದಿ ಮಾಧ್ಯಮಗಳು ಮತ್ತು ಸಿಬಿಐ ಮೂಲಗಳು ಸಹ ಇದನ್ನೇ ಪ್ರತಿಪಾದಿಸಿ ವರದಿಗಳನ್ನು ಪ್ರಕಟಿಸಿವೆ.

ಫ್ಯಾಕ್ಟ್‌ಚೆಕ್: ಬುಧವಾರ, ಜೂನ್ 26 ರಂದು ನಗರದ ರೂಸ್ ಅವೆನ್ಯೂ ನ್ಯಾಯಾಲಯವನ್ನು ಉದ್ದೇಶಿಸಿ ಕೇಜ್ರಿವಾಲ್ ಅವರು ಸಿಸೋಡಿಯಾ ಅವರನ್ನು ಹಗರಣಕ್ಕೆ ಕಾರಣವೆಂದು ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ.

ನಾವು Google ನಲ್ಲಿ ‘ಅರವಿಂದ್ ಕೇಜ್ರಿವಾಲ್ ಹಗರಣಕ್ಕೆ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ’ ಎಂಬ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ 26 ಜೂನ್ 2024 ರಂದು ಪ್ರಕಟವಾದ ಲೈವ್ ಲಾ ವರದಿಯೊಂದು ನಮಗೆ ಲಭ್ಯವಾಗಿದ್ದು. ಕೇಜ್ರಿವಾಲ್ ಅವರು ಬುಧವಾರ ನಗರದ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ ಎಂದು ಮಾಧ್ಯಮಗಳು ಮಾಡಿರುವ ವರದಿಗಳೇ ನಿಜವಾದ “ಹಗರಣ” ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ವರದಿಯ ಪ್ರಕಾರ, ಕೇಜ್ರಿವಾಲ್ ಅವರು, “ಮದ್ಯ ನೀತಿ ಹಗರಣದ ಆರೋಪವನ್ನು ನಾನು ಮನೀಶ್ ಸಿಸೋಡಿಯಾ ಮೇಲೆ ಹಾಕಿದ್ದೇನೆ ಎಂದು ಸಿಬಿಐ ಮೂಲಗಳಿಂದ ಮಾಧ್ಯಮಗಳಲ್ಲಿ ಸುಳ್ಳು ನಿರೂಪಣೆಯನ್ನು ಹರಡಲಾಗುತ್ತಿದೆ, ನಾನು ಮನೀಶ್ ಸಿಸೋಡಿಯಾ ಅಥವಾ ಇತರ ವ್ಯಕ್ತಿಯನ್ನು ದೂಷಿಸುವ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆಮ್ ಆದ್ಮಿ ಪಕ್ಷ ನಿರಪರಾಧಿ, ಆದರೆ ಸಿಬಿಐ ಮೂಲಗಳು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿವೆ ಎಂದು ಹೇಳಿದ್ದರು.

ಬಾರ್ ಅಂಡ್ ಬೆಂಚ್ ಸಹ ವಿಚಾರಣೆಯ ನೇರ ವರದಿಯನ್ನು ಹಂಚಿಕೊಳ್ಳುತ್ತಿದೆ ಮತ್ತು ಕೇಜ್ರಿವಾಲ್ ಈ ವೈರಲ್ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಸಿಬಿಐ ಅನ್ನು ಪ್ರತಿನಿಧಿಸುವ ವಿಶೇಷ ಪ್ರಾಸಿಕ್ಯೂಟರ್ ವಕೀಲ ಡಿಪಿ ಸಿಂಗ್ ಅವರು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದರು, “ಯಾವುದೇ ಮೂಲವು ಏನನ್ನೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು ಮತ್ತು ಎಕ್ಸ್‌ನಲ್ಲಿನ ಲೈವ್ ಲಾ ಪೋಸ್ಟ್‌ಗಳ ಥ್ರೆಡ್‌ನ ಪ್ರಕಾರ ಸಿಬಿಐ “ಮೂಲಗಳಲ್ಲ” ಎಂದು ಸ್ಪಷ್ಟಪಡಿಸಿದರು.

ಆಮ್ ಆದ್ಮಿ ಪಕ್ಷ (ಎಎಪಿ) ಕೂಡ X ನಲ್ಲಿ ಈ ವೈರಲ್ ಹಕ್ಕು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಸಿಸೋಡಿಯಾ ಅವರನ್ನು ದೂಷಿಸುವ ಬಗ್ಗೆ ಕೇಜ್ರಿವಾಲ್ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಸಿಬಿಐ ಈಗ “ಬಿಜೆಪಿ ನಡೆಸುತ್ತಿದೆ” ಎಂದು ಪೋಸ್ಟ್ ಹೇಳಿದೆ. ಸಿಬಿಐ ಹೇಳಿರುವಂತಹ ಯಾವುದೇ ಹೇಳಿಕೆಯನ್ನು ಕೇಜ್ರಿವಾಲ್ ನೀಡಿಲ್ಲ ಎಂದು ನ್ಯಾಯಾಲಯದ ನ್ಯಾಯಾಧೀಶರು ಸಹ ಒಪ್ಪಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಆದ್ದರಿಂದ, ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ಮನೀಶ್ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ ಎಂಬುದು ಸುಳ್ಳು. ಈ ಕುರಿತು ಮಾಡಿರುವ ಮಾಧ್ಯಮ ವರದಿಗಳು ಸಹ ತಪ್ಪಾಗಿವೆ.


ಇದನ್ನು ಓದಿ:  ಮಲ್ಲಿಕಾರ್ಜುನ್ ಖರ್ಗೆಯವರು 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ


ವೀಡಿಯೋ ನೋಡಿ: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *