Fact Check | ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ತೀರ್ಥರ ಅಪರೂಪದ ಫೋಟೊ ಪತ್ತೆಯಾಗಿದೆ ಎಂಬುದು ಸುಳ್ಳು..!

ಸಾಮಾಜಿಕ ಜಾಲತಾಣದಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ತೀರ್ಥರ ಅಪರೂಪದ ಫೋಟೋವೊಂದು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್‌ ಮಾಡಿ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಲವು ಮಂದಿ ನಿಜವೆಂದು ನಂಬಿದ್ದಾರೆ.

ಈ ಫೋಟೋದಲ್ಲಿ ಇರುವ ಚಿತ್ರವು ಕೂಡ ಗುರು ರಾಘವೇಂದ್ರ ತೀರ್ಥರ ರೀತಿಯಲ್ಲಿಯೇ ಇರುವುದರಿಂದ ಹಲವು ಮಂದಿ ಇದು ನಿಜವಾಗಿಯೂ ಗುರು ರಾಘವೇಂದ್ರ ತೀರ್ಥರ ಫೋಟೋ ಎಂದು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡ ವಿಷಯ ನಿಜವೆನಿಸುವ ಹಾಗೆ ಯಾವ ಮಾಹಿತಿಯು ಲಭ್ಯವಾಗಿಲ್ಲ.

ಬಳಿಕ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆಯೂ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಬಳಿಕ ವೈರಲ್‌ ಫೋಟೋದಲ್ಲಿ ಗುರು ರಾಘವೇಂದ್ರ ತೀರ್ಥರ ನಿಜವಾದ ಪೋಟೊ ಎಂದು ಹಂಚಿಕೊಳ್ಳಲಾಗಿದೆ. ಇದರಿಂದ ಕ್ಯೂ ತೆಗೆದುಕೊಂಡು ನಾವು ಗುರು ರಾಘವೇಂದ್ರ ತೀರ್ಥರ ಕಾಲಮಾನವನ್ನು ಪರಿಶೀಲನೆ ನಡೆಸಿದೆವು. ವಿಕಿಪೀಡಿಯ ಸೇರಿದ ಹಾಗೆ ಹಲವು ವರದಿಗಳು ಗುರು ರಾಘವೇಂದ್ರ ತೀರ್ಥರು 1595 ರಿಂದ 1671ರವರೆಗೆ ಬದುಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದು ಕಡೆಯಲ್ಲಿ ಕ್ಯಾಮರವನ್ನು ಕಂಡು ಹಿಡಿಯಲಾದ ಕಾಲಮಾನದ ಬಗ್ಗೆ ಹುಡುಕಿದಾಗ ಅದು 1816ರಲ್ಲಿ ಕಂಡು ಹಿಡಿಯಲಾಯಿತು. ಮತ್ತು ಕ್ಯಾಮರದ ಅನ್ವೇ಼ಷಣೆಯನ್ನು ಮಾಡಿದವರು ಫ್ರೆಂಚ್‌ಮೆನ್‌ ಜೋಸೆಫ್‌ ನಿಸ್‌ಫೋರ್‌ ನೀಪಿಸ್‌ ಅವರು ಎಂಬುದು ತಿಳಿದು ಬಂದಿದೆ.

ಅಲ್ಲಿಗೆ ಗುರು ರಾಘವೇಂದ್ರ ತೀರ್ಥರ ಕಾಲಾವಧಿಯ ಸುಮಾರು 145 ವರ್ಷಗಳ ನಂತರ ಕ್ಯಾಮರವನ್ನು ಕಂಡು ಹಿಡಿಯಲಾಯಿತು ಮತ್ತು 1890ರ ಅಸುಪಾಸಿನಲ್ಲಿ ಕ್ಯಾಮರಗಳು ಸಿನಿಮಾ ಬಳಕೆಗೆ ಲಭ್ಯವಾಯಿತು ಎಂಬ ಮಾಹಿತಿ ತಿಳಿದು ಬಂದಿದೆ. ಇದರಿಂದ ವೈರಲ್‌ ಫೋಟೋ ಗುರು ರಾಘವೇಂದ್ರ ತೀರ್ಥರದ್ದು ಎಂಬುದು ಸಂಪೂರ್ಣವಾಗಿದೆ ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ತೀರ್ಥರ ಕಾಲಮಾನದ ನಂತರ ಅಂದರೆ ಸುಮಾರು 145 ವರ್ಷಗಳ ನಂತರ ಕ್ಯಾಮರವನ್ನು ಕಂಡು ಹಿಡಿಯಲಾಯಿತು ಹಾಗಾಗಿ ಶ್ರೀ ಗುರು ರಾಘವೇಂದ್ರ ತೀರ್ಥರ ಯಾವುದೇ ಫೋಟೋಗಳು ಲಭ್ಯವಾಗಿಲ್ಲ. ಮತ್ತು ಅಂತಹ ಯಾವುದೇ ಫೋಟೋಗಳು ಕಂಡು ಬಂದರೂ ಅವುಗಳು ನಕಲಿಯಾಗಿವೆ ಎಂಬುದು ಸಾಭೀತಾಗಿದೆ.


ಇದನ್ನೂ ಓದಿ : Fact Check: ಕೇರಳದಲ್ಲಿ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *