Fact Check | ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ ಇಲ್ಲೋಬ್ಬ ವ್ಯಕ್ತಿ ಹಲಾಲ್‌ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾನೆ. ಈತ ಮೊದಲು ಪಾನಿಪುರಿಗೆ ತಯಾರಿಸಲಾದ ಮಾಸಾಲೆ ನೀರನ್ನು ಸ್ಪೂನ್‌ನಲ್ಲಿ ಕುಡಿಯುತ್ತಾನೆ. ಬಳಿಕ ಅದು ಸ್ವಾದ ಆತನಿಗೆ ಹಿಡಿಸುವುದಿಲ್ಲ ಮತ್ತೆ ಆತ ಕುಡಿದ ಚಮಚವನ್ನು ಮಸಾಲೆ ನೀರಿಗೆ ಹಾಕುತ್ತಾನೆ. ಬಳಿಕ ಕೈಯಲ್ಲಿಯೇ ಆ ಮಸಾಲೆ ನೀರನ್ನು ತಿರುಗಿಸಿ, ಸ್ವಲ್ಪ ಸಮಯದ ಬಳಿಕ ತನ್ನ ಬೆವರನ್ನೂ ಆ ನೀರಿಗೆ ಬೆರಸುತ್ತಾನೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್‌ ವಿಡಿಯೋವನ್ನು ನೋಡಿದ ಹಲವರು ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ವೈರಲ್‌ ವಿಡಿಯೋದೊಂದಿಗಿನ ಬರಹದಲ್ಲಿ “ಹಲಾಲ್‌ ಪಾನಿಪುರಿ” ಎಂದು ಬರೆದಿರುವುದನ್ನು ನೋಡಿ ಈತ ಮುಸ್ಲಿಂ ಎಂದು ಹಲವರು ಭಾವಿಸಿದ್ದಾರೆ. ಹೀಗಾಗಿ ಈ ವಿಡಿಯೋಗೆ ಕೋಮು ಬಣ್ಣವನ್ನು ಕೂಡ ಬಳಿಯಲಾಗಿದೆ. ಹೀಗೆ ವೈರಲ್‌ ಆಗುತ್ತಿರುವ ವಿಡಿಯೋವಿನ ಅಸಲಿ ಸಂಗತಿ ಏನು ಎಂಬುದನ್ನು ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಟಿ ಸಂಜನಾ ಗಲ್ರಾನಿ ಅವರ ಪರಿಶೀಲಿಸಿದ ಫೇಸ್‌ಬುಕ್ ಪುಟದಲ್ಲಿ ಇದೇ ವೈರಲ್‌ ವಿಡಿಯೋವಿನ ವಿಸ್ತೃತ ಆವೃತಿಯ ವಿಡಿಯೋವನ್ನು 8 ಮೇ 2024ರಂದು ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ.

ಇನ್ನು ಈ ಪೋಸ್ಟ್‌ನಲ್ಲಿ ಶೀರ್ಷಕೆಯ ಜೊತೆಗೆ ” ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ! ಈ ವೀಡಿಯೊದಲ್ಲಿನ ಪಾತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಾಗಿವೆ.” ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ವೈರಲ್‌ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಮತ್ತು ಇದೊಂದು ಹಲಾಲ್‌ ಪಾನಿಪುರಿ ಎಂಬುದು ಸುಳ್ಳಾಗಿದೆ. ವೈರಲ್‌ ವಿಡಿಯೋ ಸ್ಕ್ರಿಪ್ಟ್‌ ಮಾಡಿದ ವಿಡಿಯೋವಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬಿ ಶೇರ್‌ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಈದ್‌ ದಿನ ಪ್ರಾಣಿ ಬಲಿ – ಬಾಂಗ್ಲಾದೇಶದ ವಿಡಿಯೋವನ್ನು ಪ.ಬಂಗಾಳದ್ದು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *