ಇನ್ನೊಬ್ಬರ ಪೂಜಾ ಸ್ಥಳದಲ್ಲಿ ಕುಣಿಯದೇ ಈದ್ ಆಚರಿಸಿದ ಮುಸ್ಲಿಮರು ಅದ್ಭುತ ಸಮುದಾಯ ಎಂದು ಧ್ರುವ್ ರಾಠೀ ಹೇಳಿಲ್ಲ

200 ಮಿಲಿಯನ್ ಮುಸ್ಲಿಮರು ನಿನ್ನೆ ಈದ್ ಆಚರಿಸಿದರು

ಬಡವರು ಮತ್ತು ನಿರ್ಗತಿಕರಿಗೆ ಮಾಂಸವನ್ನು ವಿತರಿಸಿದರು

ತಮ್ಮ ಸಂಬಂಧಿಕರನ್ನು ಭೇಟಿಯಾದರು

ಅದ್ಭುತವಾದ ಆಹಾರವನ್ನು ಸೇವಿಸಿದರು

ಮಕ್ಕಳಿಗೆ ಈದಿ ನೀಡಿ ಸಂತಸಗೊಳಿಸಿದರು

ಅವರ್ಯಾರೂ ಕುಡಿದು ಮತ್ತೊಬ್ಬರ ಪೂಜಾ ಸ್ಥಳಕ್ಕೆ ಹೋಗಿ ಕುಣಿದು ಕುಪ್ಪಳಿಸಲಿಲ್ಲ

ಎಂತಹ ಅದ್ಭುತ ಸಮುದಾಯ

ಎಂದು ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಠೀ ಟ್ವೀಟ್ ಮಾಡಿದ್ದಾರೆ ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ ಧ್ರುವ್‌ ರಾಠೀ ಅತಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಭಾರತ ಸರ್ವಾಧಿಕಾರದತ್ತ ಸಾಗುತ್ತಿದೆಯೇ ಎಂಬ ಶೀರ್ಷಿಕೆಯಲ್ಲಿ ಅವರು ಮಾಡಿದ ರಾಜಕೀಯ ವಿಡಿಯೋಗಳು ಕೋಟ್ಯಾಂತರ ವೀಕ್ಷಣೆ ಗಳಿಸಿ ಚರ್ಚೆಗೆ ಒಳಗಾಗಿದ್ದವು. ಆ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಮೇಲಿನ ರೀತಿ ಅವರು ಹೇಳಿದ್ದಾರೆಯೇ ಎಂದು ಪರಿಶೀಲಿಸಿದಾಗ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಈ ಮೇಲಿನ ಸಂದೇಶದ ಬಗ್ಗೆ ಉಲ್ಲೇಖವಿಲ್ಲ.

ಇನ್ನು ಕೀವರ್ಡ್‌ಗಳೊಂದಿಗೆ ಹುಡುಕಿದಾಗ ವೈರಲ್ ಆಗುತ್ತಿರುವ ಸಂದೇಶವನ್ನು Dhruv Rathee (Parody) (@dhruvrahtee) ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಅದರಲ್ಲಿ ಪರೋಡಿ (ವಿಡಂಬನೆ) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಅದು ಯಾರೋ ಬೇರೆಯವರು ಮಾಡಿರುವ ಖಾತೆ ಹೊರತು, ಧ್ರುವ್‌ ರಾಠೀಯವರ ಅಧಿಕೃತ ಖಾತೆಯಲ್ಲ.

ಇದೊಂದೆ ಅಲ್ಲದೇ ಧ್ರುವ್‌ ರಾಠೀ ಹೆಸರಿನಲ್ಲಿ ಹಲವು ಪರೋಡಿ, ಫೇಕ್ ಖಾತೆಗಳನ್ನು ರಚಿಸಲಾಗಿದೆ. ಇವುಗಳಿಗೆ ಹತ್ತಾರು ಸಾವಿರ ಫಾಲೋವರ್ಸ್ ಮಾತ್ರ ಇದ್ದಾರೆ. ಆದರೆ ಧ್ರುವ್ ರಾಠೀಯವರ ಅಧಿಕೃತ ಟ್ವಿಟರ್ ಖಾತೆಗೆ 26 ಲಕ್ಷ ಫಾಲೋವರ್ಸ್ ಇದ್ದಾರೆ.

ಇದರಲ್ಲಿ ಮೊದಲನೇಯದು ಮಾತ್ರ ಧ್ರುವ್ ರಾಠೀ ಅಧಿಕೃತ ಖಾತೆ. ಉಳಿದವು ಬೇರೆಯವರು ಮಾಡಿರುವುದು
ಧ್ರುವ್ ರಾಠೀ ಅಧಿಕೃತ ಖಾತೆ

ಒಟ್ಟಾರೆಯಾಗಿ ಹೇಳುವುದಾದರೆ ಇನ್ನೊಬ್ಬರ ಪೂಜಾ ಸ್ಥಳದಲ್ಲಿ ಕುಣಿಯದೇ ಈದ್ ಆಚರಿಸಿದ ಮುಸ್ಲಿಮರು ಅದ್ಭುತ ಸಮುದಾಯ ಎಂದು ಧ್ರುವ್ ರಾಠೀ ಹೇಳಿಲ್ಲ. ಅವರ ಹೆಸರಿನ ಪರೋಡಿ ಖಾತೆಯಲ್ಲಿ ಆ ರೀತಿ ಟ್ವೀಟ್ ಮಾಡಲಾಗಿದೆ ಅಷ್ಟೇ.


ಇದನ್ನೂ ಓದಿ; Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *