Fact Check | 1980ರಲ್ಲಿ‌ಯೇ ಜಪಾನ್ ಪತ್ರಕರ್ತ ತನ್ನ ವರದಿ ವೇಳೆ ಐಫೋನ್‌ 13 ತೋರಿಸಿದ್ದ ಎಂಬುದು ಸುಳ್ಳು

“1980ರಲ್ಲಿ ಜಾಪಾನಿನ ಪತ್ರಕರ್ತರೊಬ್ಬರು ಜನರು ವಾಸಿಸಲು ಬಯಸದ ಹಿರೋಷಿಮಾ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಆ ಪ್ರದೇಶದ ಕುರಿತು ವರದಿ ಮಾಡುವಾಗ ಅವರಿಗೆ ಐ ಫೋನ್ 13 ಕಂಡುಬರುತ್ತದೆ. ಆದರೆ ಅದನ್ನು ಅವರು ಯಾವುದೋ ವಿಭಿನ್ನ ಕನ್ನಡಿ ಎಂದು ಭಾವಿಸಿ, ಐಫೋನ್ 13 ಅನ್ನು ಅಲ್ಲೇ ಬಿಟ್ಟು, ತಮ್ಮ ವರದಿಯನ್ನು ಮುಂದುವರೆಸುತ್ತಾರೆ. ಆದರೆ ಜಗತ್ತಿಗೆ ಐಫೋನ್ ಬಗ್ಗೆ ತಿಳಿಯದಿರುವ ಕಾಲದಲ್ಲಿ ಹೇಗೆ ವರದಿಯೊಂದರಲ್ಲಿ ಐಫೋನ್ ಪತ್ತೆಯಾಗಿದೆ?” ಎಂಬ ಬರಹದೊಂದಿಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಹಲವರು ಇದು ನಿಜವೋ ಅಥವಾ ಸುಳ್ಳೋ ಎಂಬ ಗೊಂದಲಕ್ಕೆ ಕೂಡ ಸಿಲುಕಿದ್ದಾರೆ.

“ಹಲವರು ಇದೇ ವಿಡಿಯೋವನ್ನು ಬಳಸಿಕೊಂಡು ಟೈಮ್ ಟ್ರಾವೆಲ್ ಮಾಡಿರುವವರು ಯಾರೋ ಈ ಫೋನ್‌ ಅನ್ನು 1980ರಲ್ಲಿ ಅಲ್ಲೇ ಬಿಟ್ಟು ಹೋಗಿದ್ದಾರೆ. ಇದು ಈಗ ಪತ್ತೆಯಾಗಿದೆ.” ಎಂದು ರಿಲ್ಸ್‌ಗಳು ಮತ್ತು ಶಾರ್ಟ್ಸ್‌ಗಳನ್ನು ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ

ಫ್ಯಾಕ್ಟ್‌ಚೆಕ್

ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಹಲವು ವಿಡಿಯೋಗಳಲ್ಲಿ ಹೇಳಿಕೊಂಡಂತೆ ವೈರಲ್ ಆದ ವಿಡಿಯೋ 1980ರಲ್ಲಿ ಚಿತ್ರಿಸಲಾಗಿಲ್ಲ ಎಂಬುದು ಹುಡುಕಾಟದ ವೇಳೆ ಸ್ಪಷ್ಟವಾಗಿ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಜೂನ್ 2023ರಲ್ಲಿ ನಿರ್ಮಿಸಲಾದ ಜಪಾನಿನ ಕಿರು ಸರಣಿಯಿಂದ ಚಿತ್ರಿಸಲಾಗಿದೆ. 17 ಜೂನ್ 2023 ರಂದು ಮೂವಿ ಇಸ್‌ ಟಿವಿ ಎಂಬ ಯೂಟ್ಯೂಬ್ ಚಾನೆಲ್ ಒಂದಕ್ಕೆ ಅಪ್ಲೋಡ್ ಮಾಡಲಾಗಿದ್ದು, ಈ ಜಪನ್‌ ಸರಣಿ ಐದು ಭಾಗಗಳನ್ನು ಒಳಗೊಂಡಿದೆ.  ‘ದಿ ವುಮನ್ ಹೂ ನೋ ಟೂ ಮಚ್ – ದಿ ವುಮನ್ ಕಾಲ್ಡ್ ಕಿಯೋಕೊ ಒನೊಗುಚಿ’ ಎಂಬುದು ಈ ಸರಣಿಯ ಹೆಸರಾಗಿದ್ದು, ಈ ಸರಣಿಯ ಕ್ಲಿಪ್‌ಗಳನ್ನೇ ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಇನ್ನು ಈ ಕುರಿತು ಮೂವಿ ಇಸ್‌ ಟಿವಿ ತಂಡ ಪ್ರತಿಕ್ರಿಯೆ ನೀಡಿದ್ದು, “ಇದೊಂದು ಕಾಲ್ಪನಿಕ ಘಟನೆಯ ಬಗ್ಗೆ ನಿರ್ಮಿಸಿಲಾದ ಸರಣಿ ಚಿತ್ರವಾಗಿದೆ. ಇದಕ್ಕೂ ಹಿರೋಷಿಮಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಆದರೆ ಯಾರೋ ಕಿಡಿಗೇಡಿಗಳು ನಮ್ಮ ಚಿತ್ರದ ದೃಶ್ಯಾವಳಿಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ.” ಎಂದು ಕಿಡಿಕಾರಿದ್ದಾರೆ.

ಟಿವಿ ಇಸ್‌ ಮೂವಿ ತಂಡ ಮಾಧ್ಯವೊಂದಕ್ಕೆ ನೀಡಿದ ಪ್ರತಿಕ್ರಿಯೆ
                    ಟಿವಿ ಇಸ್‌ ಮೂವಿ ತಂಡ ಮಾಧ್ಯವೊಂದಕ್ಕೆ ನೀಡಿದ ಪ್ರತಿಕ್ರಿಯೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು  ಗಮನಿಸಿದಾಗ ಜಪಾನಿ ಟಿವಿ ಸೀರಿಸ್‌ ದೃಶ್ಯಗಳನ್ನು ಬಳಸಿಕೊಂಡು, 1980ರಲ್ಲೇ ಐಫೋನ್‌ 13 ಕಂಡು ಬಂದಿತ್ತು ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಚುನಾವಣ ಪೂರ್ವ ಭರವಸೆ ಈಡೇರಿಸಲಾಗದಕ್ಕೆ ರಾಹುಲ್‌ ಗಾಂಧಿ ಕ್ಷಮೆ ಕೇಳಿದ್ದಾರೆಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *