ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿಯನ್ನು ಕರೆದೊಯ್ದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅಲ್ಲ

ಜೋ ಬೈಡನ್

ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆ ನಡೆಯಿತು. ಅದರಲ್ಲಿ ಏಳು ಪ್ರಮುಖ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು. ನರೇಂದ್ರ ಮೋದಿಯವರು ಸಹ ಈ ಸಂದರ್ಭದಲ್ಲಿ ಭಾಗವಹಿಸಿದರು. ಆಗ ಅವರನ್ನು ವೇದಿಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರೆ ಖುದ್ದು ಕರೆದುಕೊಂಡು ಹೋದರು. ಅವರು ಕೈ ಕುಲುಕಲು ಮುಂದಾದರೂ ಮೋದಿ ಕೈ ಕುಲಕಲಿಲ್ಲ. ಮೋದಿಯವರು ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೋಡಿ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್‌

2024ರ ಜಿ7 ಶೃಂಗಸಭೆಯ ನೇರ ಪ್ರಸಾರದ ವಿಡಿಯೋವನ್ನು ಗಮನಿಸಿದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಿ7 ವೇದಿಕೆಗೆ ಕರೆಕೊಯ್ದ ವ್ಯಕ್ತಿ ಜೋ ಬೈಡಲ್ ಅಲ್ಲ ಎಂದು ತಿಳಿಯುತ್ತದೆ. ಅಲ್ಲದೇ ಅದೇ ವ್ಯಕ್ತಿ ಜಗತ್ತಿನ ಇತರ ರಾಷ್ಟ್ರಗಳ ಪ್ರಮುಖರನ್ನು ಸಹ ವೇದಿಕೆಗೆ ಕರೆದೊಯ್ಯುವುದನ್ನು ನಾವು ಕಾಣಬಹುದು.

ಅದೇ ವ್ಯಕ್ತಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ಗೆರ್ಟ್ರುಡ್ ವಾನ್ ಡೆರ್ ಲೇಯೆನ್, ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವಾರು ಇತರ ವಿಶ್ವ ನಾಯಕರನ್ನು ವೇದಿಕೆಗೆ ಕರೆದೊಯ್ಯುವುದನ್ನು ನಾವು ನೋಡಬಹುದು.

ಅಷ್ಟೇ ಅಲ್ಲದೇ ಅದೇ ವ್ಯಕ್ತಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ರವರನ್ನು ಸಹ ವೇದಿಕೆಗೆ ಕರೆದೊಯ್ಯುವುದನ್ನು ನೋಡಬಹುದು. ಇಷ್ಟೆಲ್ಲಾ ಆಧಾರಗಳಿಂದ ಪಿಎಂ ಮೋದಿಯನ್ನು ಕರೆದೊಯ್ದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅಲ್ಲ ಎಂದು ಖಚಿತವಾಗಿ ಹೇಳಬಹುದಾಗಿದೆ.


ಇದನ್ನೂ ಓದಿ; ಭಾರತದ ರೋಹಿಂಗ್ಯಾ ಶಿಬಿರಗಳಲ್ಲಿ ಒಂದು ವರ್ಷದಲ್ಲಿ 60,000 ಶಿಶುಗಳು ಜನಿಸಿವೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *