Fact Check | ಗ್ಯಾರಂಟಿ ಯೋಜನೆಯ ಹಣ ಕೇಳಿದ ಮಹಿಳೆಯನ್ನು ದಿಗ್ವಿಜಯ ಸಿಂಗ್‌ ಓಡಿಸಿದ್ದಾರೆ ಎಂಬುದು ಸುಳ್ಳು

“ಗ್ಯಾರಂಟಿ ಯೋಜನೆಯ ಹಣ ಕೇಳಲು ಬಂದ ಮಹಿಳೆಯೊಬ್ಬರನ್ನು ಕಾಂಗ್ರೆಸ್‌ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರು ನಿಂದಿಸಿ ಕಳುಹಿಸಿದ್ದಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ದಿಗ್ವಿಜಯ್ ಸಿಂಗ್‌ ತನ್ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯನ್ನು ಓಡಿಸುವಂತೆ ತನ್ನ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹಾಗೆಯೇ ‘ಈ ಮಹಿಳೆಗೆ ಹುಚ್ಚು ಹಿಡಿದಿದೆ, ಅವಳನ್ನು ಹೊರಹಾಕಿ’ ಎಂದು ದಿಗ್ವಿಜಯ್ ಸಿಂಗ್ ಅವರೇ ಹೇಳುವುದನ್ನು ಕೇಳಬಹುದು. ಹಾಗಾದರೆ ನಿಜಕ್ಕೂ ದಿಗ್ವಿಜಯ್ ಸಿಂಗ್‌‌ ಅವರು ಗ್ಯಾರಂಟಿ ಯೋಜನೆಯ 8,500 ರೂ. ಕೇಳಲು ಬಂದ ಮಹಿಳೆಯನ್ನು ಓಡಿಸಿದ್ದಾರೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು ಇದಕ್ಕಾಗಿ ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರಲ್ಲಿ the_madhya_pradeshmp ಎಂದು ವಿಡಿಯೋದ ಮೇಲೆ ವಾಟರ್‌ ಮಾರ್ಕ್‌ ಇರುವುದು ಪತ್ತೆಯಾಗಿದೆ. ಈ ವಾಟರ್‌ ಮಾರ್ಕ್‌ ಆಧಾರದಲ್ಲಿ ಹುಡುಕಾಟವನ್ನು ನಡೆಸಿದಾಗ, ಇನ್‌ಸ್ಟಾಗ್ರಾಂ ಖಾತೆಯೊಂದು ಕಂಡು ಬಂದಿದೆ. ಅದರಲ್ಲಿ 21 ಫೆಬ್ರವರಿ 2024ರಂದು ವಿಡಿಯೋ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಈ ಘಟನ ಲೋಕಸಭೆ ಚುನಾವಣೆಗೆ ಮುನ್ನ ನಡೆದಿದೆ ಎಂಬುದು ತಿಳಿದು ಬಂದಿದೆ.

ಈ ವಿಡಿಯೋ ಕುರಿತು ಇನ್ನಷ್ಟು ಪರಿಶೀಲನೆ ನಡೆಸಿದಾಗ ಹಲವಾರು ವರದಿಗಳು ಕೂಡ ಕಂಡು ಬಂದಿದೆ. ಇದರಲ್ಲಿ NDTV ಮಧ್ಯಪ್ರದೇಶ/ಛತ್ತೀಸ್‌ಗಢ ವರದಿಯ ಪ್ರಕಾರ , ಈ ಘಟನೆಯು 21 ಫೆಬ್ರವರಿ 2024 ರಂದು ಗ್ವಾಲಿಯರ್‌ನಲ್ಲಿ ದಿಗ್ವಿಜಯ್ ಸಿಂಗ್ ಅವರ ರಾಜಕೀಯ ಪ್ರವಾಸದ ಸಮಯದಲ್ಲಿ ನಡೆದಿದೆ. ಅಲ್ಲಿ ಅವರು ಸ್ಥಳೀಯ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಈ ವೇಳೆ ಮಹಿಳೆಯೊಬ್ಬರು ಪದೇ ಪದೆ ಭೇಟಿ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯನ್ನೂ ನಡೆಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ದಿಗ್ವಿಜಯ್ ಸಿಂಗ್ ಅವರು “ಅವಳು ಹುಚ್ಚಳಾಗಿದ್ದಾಳೆ, ಅವಳನ್ನು ಹೋರಹಾಕಿ” ಎಂದು ಹೇಳಿದ್ದಾರೆ. ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.

ಇನ್ನು MP Tak  ವರದಿಯ ಪ್ರಕಾರ , ವೈರಲ್ ವೀಡಿಯೊದಲ್ಲಿರುವ ಮಹಿಳೆ ಡಾ. ಲೀನಾ ಶರ್ಮಾ ಎಂಬುದು ತಿಳಿದು ಬಂದಿದೆ. ಈಕೆ ಗುಣ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು. ಈಕೆ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ವಾರಣಾಸಿ ಎಂಪಿ ಟಿಕೆಟ್ ಕೇಳಲು ಅವರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲು ಹೋಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ದಿಗ್ವಿಜಯ್‌ ಸಿಂಗ್‌ ಅವರು ಗ್ಯಾರಂಟಿ ಯೋಜನೆಯ 8,500 ಕೇಳಲು ಬಂದ ಮಹಿಳೆಯನ್ನು ನಿಂದಿಸಿ, ಓಡಿಸಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗು ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ


ಇದನ್ನೂ ಓದಿ : Fact Check | ರಾಹುಲ್‌ ಗಾಂಧಿಯನ್ನು ಉದ್ಧವ್ ಠಾಕ್ರೆ ನಿಂದಿಸಿದ್ದಾರೆ ಎಂಬುದು ಹಳೆಯ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.Dua

Leave a Reply

Your email address will not be published. Required fields are marked *