Fact Check: ಬಿಜೆಪಿ ಮತ್ತು RSS ನಾಯಕರ ಮಕ್ಕಳು ಮುಸ್ಲೀಮರನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಂಡಿರುವ ಮಾಹಿತಿ ನಿಖರವಾಗಿಲ್ಲ

ಬಿಜೆಪಿ

ಬಿಜೆಪಿ ಮತ್ತು ಬಲಪಂಥೀಯ ಹಿಂದೂ ಸಂಘಟನೆಗಳ ನಾಯಕರ ಮಕ್ಕಳು ಮತ್ತು ಸಂಬಂಧಿಕರು ಮುಸ್ಲಿಂರನ್ನು ಮದುವೆಯಾದ ಪಟ್ಟಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪಟ್ಟಿಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ, ಎಲ್.ಕೆ. ಅಡ್ವಾಣಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಇನ್ನೂ ಅನೇಕರ ಮಕ್ಕಳು ಮುಸ್ಲಿಂ ಹುಡುಗರನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. 

ಫ್ಯಾಕ್ಟ್‌ಚೆಕ್: ವೈರಲ್ ಆಗುತ್ತಿರುವ ಬ್ರಾಹ್ಮಣರು ಮತ್ತು ಮುಸ್ಲೀಮರ ನಡುವೆ ನಡೆದಿರುವ ಮದುವೆಯ ಪಟ್ಟಿಯಲ್ಲಿ ಹಲವು ಸತ್ಯವಿದ್ದರೇ ಇನ್ನೂ ಕೆಲವು ತಪ್ಪು ಮಾಹಿತಿಯಿಂದ ಕೂಡಿದೆ.

ಮುರಳಿ ಮನೋಹರ್ ಜೋಶಿ ಅವರ ಪುತ್ರಿ ರೇಣು ಜೋಶಿ ಶಾನ್ವಾಜ್ ಹುಸೇನ್ ಅವರನ್ನು ವಿವಾಹವಾಗಿದ್ದಾರೆಯೇ?:

ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಮುರಳಿ ಮನೋಹರ್ ಜೋಶಿ ಅವರ ಜೀವನಚರಿತ್ರೆಯ ಪ್ರಕಾರ, ಎಂಎಂ ಜೋಶಿ ಅವರಿಗೆ ಪ್ರಿಯಂವದಾ ಮತ್ತು ನಿವೇದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಮುರಳಿ ಮನೋಹರ್ ಜೋಶಿ ಅವರಿಗೆ ರೇಣು ಜೋಶಿ ಎಂಬ ಹೆಸರಿನ ಮಗಳು ಇಲ್ಲ. ಮುರಳಿ ಮನೋಹರ್ ಜೋಶಿ ಅವರ ಪುತ್ರಿಯರು ಮುಸ್ಲಿಂ ಪುರುಷರನ್ನು ಮದುವೆಯಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ.

2014 ರಿಂದ ಶಾನವಾಜ್ ಹುಸೇನ್ ಜೊತೆ ಮುರಳಿ ಮನೋಹರ್ ಜೋಶಿ ಅವರ ಮಗಳ ಮದುವೆಯ ವದಂತಿಯು ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. 2018 ರಲ್ಲಿ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಅವರ ಈದ್-ಇಫ್ತಾರ್ ಪಾರ್ಟಿಯಲ್ಲಿ ಎಂಎಂ ಜೋಶಿ ಭಾಗವಹಿಸಿದ ನಂತರ ಈ ವದಂತಿಯು ಇನ್ನಷ್ಟು ಬಲವಾಗಿದೆ. ಪ್ರೇಮ ವಿವಾಹ ಮತ್ತು ಅವರ ಕಥೆಯನ್ನು ಹಲವು ಮಾಧ್ಯಮಗಳು ವರದಿಯನ್ನು ಸಹ ಮಾಡಿವೆ. ಆದರೆ ರೇಣು ಹುಸೇನ್ ಎಂಎಂ ಜೋಶಿಯವರ ಮಗಳಲ್ಲ. ಈ ಹಿಂದೆ, FACTLY ಯವರು 2019 ರಲ್ಲಿ ಸತ್ಯ-ಪರಿಶೀಲನಾ ಲೇಖನವನ್ನು ಪ್ರಕಟಿಸಿ ಈ ಪ್ರತಿಪಾದನೆಯನ್ನು ತಳ್ಳಿಹಾಕಿದ್ದರು.

ಎಲ್.ಕೆ. ಅಡ್ವಾಣಿಯವರ ಮಗಳು ರೋಶಿನಿ ಸಲೀಂ ಅವರನ್ನು ವಿವಾಹವಾದರೇ? ಮತ್ತು ಅವರ ಸೋದರ ಸೊಸೆ ಪ್ರತಿಭಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆಯೇ?:

ಬಿಜೆಪಿ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಎಲ್.ಕೆ. ಅಡ್ವಾಣಿ ಅವರಿಗೆ ಪ್ರತಿಭಾ ಮತ್ತು ಜಯಂತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪ್ರತಿಭಾ ಒಬ್ಬಳೇ ಮಗಳು ಎಲ್.ಕೆ. ಅಡ್ವಾಣಿ ಅವರಿಗೆ.

ನಾವು ಪ್ರತಿಭಾ ಅಡ್ವಾಣಿ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಹುಡುಕಿದಾಗ, ರಿಯಲ್ ಎಸ್ಟೇಟ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮತ್ತು ಪತ್ರಕರ್ತೆಯಾಗಿರುವ ಪ್ರತಿಭಾ ಅಡ್ವಾಣಿ ಅವರು ಅಹಮದಾಬಾದ್ ಮೂಲದ ಹೋಟೆಲ್ ಎಕ್ಸಿಕ್ಯೂಟಿವ್ ಕೈಲಾಶ್ ತದಾನಿಯನ್ನು ವಿವಾಹವಾಗಿದ್ದಾರೆ ಎಂದು ಮಾಹಿತಿಗಳು ದೊರಕಿವೆ. ಆದಾಗ್ಯೂ, ದಂಪತಿಗಳು ತಮ್ಮ ಮದುವೆಯಾದ ಕೆಲವು ವರ್ಷಗಳ ನಂತರ ಬೇರೆಯಾದರು. ಪ್ರತಿಭಾ ಅಡ್ವಾಣಿ ನಂತರ ಸಲೀಂ ಅಥವಾ ಹುಸೇನ್ ಎಂಬ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರು ಎಂದು ಎಲ್ಲಿಯೂ ವರದಿಯಾಗಿಲ್ಲ. ಅಲ್ಲದೆ, ಎಲ್.ಕೆ. ಅಡ್ವಾಣಿಯವರ ಸೊಸೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರು ಎಂಬ ಯಾವ ವರದಿಗಳು ಲಭ್ಯವಾಗಿಲ್ಲ. 

ಸುಬ್ರಮಣಿಯನ್ ಸ್ವಾಮಿಯವರ ಮಗಳು ಸುಹಾಸಿನಿ ನಾದಿಮ್ ಹೈದರ್ ಅವರನ್ನು ವಿವಾಹವಾಗಿದ್ದಾರೆಯೇ?

ಇದು ಸತ್ಯ. ‘ಜನಸತ್ತಾ’ದ ಸುದ್ದಿ ವರದಿಯ ಪ್ರಕಾರ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಪುತ್ರಿ ಸುಹಾಸಿನಿ ಅವರು ಮಾಜಿ ಭಾರತೀಯ ರಾಜತಾಂತ್ರಿಕ ಸಲ್ಮಾನ್ ಹೈದರ್ ಅವರ ಪುತ್ರ ನದೀಮ್ ಹೈದರ್ ಅವರನ್ನು ವಿವಾಹವಾಗಿದ್ದಾರೆ. ಅವರ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ (ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್) ಸಹ ನಾವು ಅವರ ಹೆಸರನ್ನು ಸುಹಾಸಿನಿ ಹೈದರ್ ಎಂದಿರುವುದನ್ನು ನೋಡಬಹುದು.

ಮೋಹನ್ ಭಾಗವತ್ ಸೋದರ ಸಂಬಂಧಿ ಊರ್ಮಿಳಾ ಮಾತೋಂಡ್ಕರ್ ಮೊಹ್ಸಿನ್ ಅಖ್ತರ್ ಅವರನ್ನು ವಿವಾಹವಾಗಿದ್ದಾರೆಯೇ?:

2016 ರಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಕಾಶ್ಮೀರಿ ಮೂಲದ ಉದ್ಯಮಿ ಮೊಹ್ಸಿನ್ ಅಕ್ತರ್ ಮಿರ್ ಅವರನ್ನು ವಿವಾಹವಾಗಿದ್ದಾರೆ. ಮಾರ್ಚ್ 2019 ರಲ್ಲಿ ಊರ್ಮಿಳಾ ಮಂಟೋಡ್ಕರ್ ಕಾಂಗ್ರೆಸ್ ಸೇರಿದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಊರ್ಮಿಳಾ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಸೋದರ ಸೊಸೆ ಎಂದು ಹಂಚಿಕೊಂಡಿದ್ದಾರೆ. ಊರ್ಮಿಳಾ ಮಾತೋಂಡ್ಕರ್ ಅವರು ‘ಇಂಡಿಯಾ ಟುಡೆ‘ ಜೊತೆ ಮಾತನಾಡುತ್ತಾ, ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಈ ಕಥೆಯು ನಿಜವಾಗಿದ್ದರೆ ಚಲನಚಿತ್ರ ಸ್ಕ್ರಿಪ್ಟ್‌ಗಿಂತ ಉತ್ತಮವಾಗಿರುತ್ತಿತ್ತು ಎಂದು ಹೇಳಿದ್ದಾರೆ. 2019 ರಲ್ಲಿ ಈ ವೈರಲ್ ಸಂದೇಶಕ್ಕೆ ಸಂಬಂಧಿಸಿದಂತೆ ಊರ್ಮಿಳಾ ಮಂಟೋಡ್ಕರ್ ಅವರ ಸ್ಪಷ್ಟೀಕರಣವನ್ನು ವರದಿ ಮಾಡುವ ಲೇಖನಗಳನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮೋಹನ್ ಭಾಗವತ್ ಅವರ ಸೊಸೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರೆ, ಹಲವಾರು ಮಾಧ್ಯಮ ಸಂಸ್ಥೆಗಳು ಆ ಮಾಹಿತಿಯನ್ನು ವರದಿ ಮಾಡಿರುತ್ತಿದ್ದವು. ಆದರೆ ಈ ವಿಷಯದಲ್ಲಿ ನಮಗೆ ಒಂದೇ ಒಂದು ಸುದ್ದಿ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. ಪ್ರವೀಣ್ ತಗೋಡಿಯಾ ಅವರ ಮಗಳ ಕುರಿತು ಸಹ ಯಾವುದೇ ವಿವರಗಳು ನಮಗೆ ಸಿಗಲಿಲ್ಲ.

ಬಾಳ್ ಠಾಕ್ರೆಯವರ ಮೊಮ್ಮಗಳು ಮುಸ್ಲಿಂರನ್ನು ವಿವಾಹವಾಗಿದ್ದಾರೆಯೇ?:

ಬಾಳ್ ಠಾಕ್ರೆ ಅವರ ಮೊಮ್ಮಗಳು ಮತ್ತು ಉದ್ಧವ್ ಠಾಕ್ರೆ ಅವರ ಸೊಸೆ ನೇಹಾ ಅವರ ಮದುವೆಯ ವಿಷಯ ಬಂದಾಗ, ಅವರು ಮುಸ್ಲಿಂರನ್ನು ಮದುವೆಯಾಗುತ್ತಾರೆ ಎಂಬ ವದಂತಿ ಯಾವಾಗಲೂ ಇತ್ತು. ನವೆಂಬರ್ 29, 2019 ರಂದು ನ್ಯೂಸ್ 18 ಪ್ರಕಟಿಸಿದ ವರದಿಯ ಪ್ರಕಾರ, “ಬಾಲ್ ಠಾಕ್ರೆ ಅವರ ಪುತ್ರ ಬಿಂದು ಮಾಧವ್ ಠಾಕ್ರೆ ಅವರ ಪುತ್ರಿ ನೇಹಾ ಬಾಲ್ ಠಾಕ್ರೆ ಅವರು ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕಾಗಿ ಕುಟುಂಬದ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದು ಹೇಳಲಾಗುತ್ತದೆ. ನೇಹಾ ಮುಸ್ಲಿಮರನ್ನು ಮದುವೆಯಾಗಿಲ್ಲ, ಗುಜರಾತಿ ಯುವಕನ್ನು ಮದುವೆಯಾಗಿದ್ದಾರೆ. ಆದರೆ ಬಾಳ್ ಠಾಕ್ರೆ ಸೇರಿದಂತೆ ಎಲ್ಲಾ ಕುಟುಂಬ ಸದಸ್ಯರು ನೇಹಾ ಅವರ ಮದುವೆಗೆ ಹಾಜರಾಗಿದ್ದರು ಪತಿ ಡಾ. ಮನನ್ ಠಕ್ಕರ್ ಹಿಂದೂ ಧರ್ಮಕ್ಕೆ ಮತಾಂತರಗೊಂಡರು, ಠಾಕ್ರೆ ಕುಟುಂಬ ಅದನ್ನು ನಿರಾಕರಿಸಿತು ಎಂದು ನ್ಯೂಸ್ 18 ವರದಿ ಮಾಡಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಹೆಣ್ಣುಮಕ್ಕಳು ಮುಸ್ಲಿಂ ಪುರುಷರನ್ನು ಮದುವೆಯಾಗುವ ಬಗ್ಗೆ ಹಂಚಿಕೊಳ್ಳುತ್ತಿರುವ ವಿವರಗಳು ನಿಖರವಾಗಿಲ್ಲ.


ಇದನ್ನು ಓದಿ: ನಾಥೂರಾಂ ಗೋಡ್ಸೆಗೆ ಮರಣದಂಡನೆ ವಿಧಿಸುವಂತೆ ನ್ಯಾಯಮೂರ್ತಿ ಜಿ.ಡಿ ಖೋಸ್ಲಾ ಅವರಿಗೆ ಸರ್ಕಾರ ಒತ್ತಡ ಹೇರಿತ್ತು ಎಂಬುದು ಸುಳ್ಳು


ವೀಡಿಯೋ ನೋಡಿ: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *