Fact Check | ಕ್ರೈಸ್ತರಿಂದಾಗಿ ಭಾರತದಲ್ಲಿ ಭಾನುವಾರ ರಜಾ ದಿನ ಬಂದಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಸುಳ್ಳು

“ನಮ್ಮ ದೇಶದಲ್ಲಿ ಭಾನುವಾರ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ಸಮುದಾಯದವರು ರಜಾದಿನವನ್ನು ಹೊಂದಿದ್ದರು, ಈ ಸಂಪ್ರದಾಯವು ಅಂದಿನಿಂದ ಪ್ರಾರಂಭವಾಯಿತು. ಭಾನುವಾರ ಹಿಂದೂಗಳೊಂದಿಗೆ ಸಂಬಂಧ ಹೊಂದಿಲ್ಲ, ಭಾನುವಾರದ ರಜೆ ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ. ಇದು ಕಳೆದ 200-300 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಒಂದೊಂದು ಜಿಲ್ಲೆಯಲ್ಲಿ ಭಾನುವಾರದ ರಜೆಗೆ ಬೀಗ ಹಾಕಿದ್ದು ಶುಕ್ರವಾರವೇ ರಜೆ ನೀಡಲಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಅವರು ಹೇಳಲು ಹೊರಟಿರುವುದು ಭಾನುವಾರದ…

Read More

Fact Check: ಉತ್ತರ ಗಾಜಾದಿಂದ ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗದ ಫೋಟೋವನ್ನು ಈಜಿಪ್ಟಿಗೆ ಸಂಪರ್ಕಿಸುವ ಸುರಂಗ ಎಂದು ಹಂಚಿಕೆ

ದಕ್ಷಿಣ ಗಾಜಾದ ರಾಫಾದಿಂದ ಈಜಿಪ್ಟ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾದ ಭೂಗತ ಸುರಂಗ ಮಾರ್ಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಮೇ 26 ರಂದು, ರಫಾದ ಶಿಬಿರದ ಮೇಲೆ ಇಸ್ರೆಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಂತರ, ಇಂಡೋನೇಷಿಯಾದ ಫೀಲ್ಡ್ ಆಸ್ಪತ್ರೆ ಸೇರಿದಂತೆ ರಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲಿ ಸೇನೆಯು ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸಧ್ಯ, ಸುರಂಗ…

Read More

Fact Check | 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು ಮತ್ತು ವಂಚನೆ

“ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆ 2024 ಗಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಗಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಮುಕ್ತವಾಗಿದೆ”  ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದಲ್ಲಿ ಇನ್ನೂ ಮುಂದುವರೆದು, “2024 ರಲ್ಲಿ 960,000 ವಿದ್ಯಾರ್ಥಿಗಳಿಗೆ ಅವರ ಕಲಿಕೆಯನ್ನು ಹೆಚ್ಚಿಸಲು ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ…

Read More
ಅರವಿಂದ್ ಕೇಜ್ರಿವಾಲ್

Fact Check: ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ 63 ಲಕ್ಷದಷ್ಟು ದುಬಾರಿ ಮಾವಿನ ಹಣ್ಣುಗಳನ್ನು ತಿನ್ನಲು ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರ ಕುರಿತು ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಒಂದು ತಿಂಗಳಷ್ಟರಲ್ಲಿ ಕೇವಲ ಮಾವಿನ ಹಣ್ಣು ತಿನ್ನಲು 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ” ಒಬ್ಬ ಮನುಷ್ಯ ಒಂದು ತಿಂಗಳಿನಲ್ಲಿ 63 ಲಕ್ಷರೂಪಾಯಿಯ ಮಾವಿನ ಹಣ್ಣು  ತಿನ್ನಲು ಸಾಧ್ಯವೆ? ಇದನ್ನು ಜನಸಾಮಾನ್ಯ ಪಕ್ಷದ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿನಲ್ಲಿ ಕುಳಿತು ಸಾಧನೆ ಮಾಡಿದ್ದಾರೆ…

Read More