ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಲೋಕಸಭಾ ಚುನಾವಣೆಯ ಅಂಗವಾಗಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿಯವರು “ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ.  ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ವಿಶ್ವಾದ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದರೆ, ಮಹಾತ್ಮ ಗಾಂಧಿಯನ್ನು ವಿಶ್ವಪ್ರಸಿದ್ಧ ವ್ಯಕ್ತಿಯಾಗಿ ಮಾಡಲು ಭಾರತವು ಉತ್ತಮವಾಗಿ ‘ಕೆಲಸ’ ಮಾಡಬೇಕಿತ್ತು ಎಂದು ವಿಶ್ವವನ್ನು ಸುತ್ತಿದ…

Read More
ರಾಹುಲ್ ಗಾಂಧಿ

Fact Check: ಕಾಂಗ್ರೆಸ್ ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ಕಾಂಗ್ರೆಸ್ ಪಕ್ಷವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಅದನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಡಿಯೋ ಒಂದು ಈಗ ಸಾಕಷ್ಟಯ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, “ನಮಸ್ಕಾರ, ನಾನು ರಾಹುಲ್ ಗಾಂಧಿ, ಒಂದು ಕಡೆ ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾದರೆ, ಇನ್ನೋಂದು ಕಡೆ, ಕಾಂಗ್ರೆಸ್ ಪಕ್ಷ ಮತ್ತು ಐಎನ್‌ಡಿಐಎ ಮೈತ್ರಿಕೂಟ ಅದನ್ನು ನಾಶಪಡಿಸುತ್ತಿದೆ, ಮತ್ತೊಂದು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯು 20-25…

Read More

Fact Check | “ಇಸ್‌ ಬಾರ್‌ 400 ಪಾರ್‌” ಎಂದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ಸುಳ್ಳು

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ‘ಈಸ್ ಬಾರ್ 400 ಪಾರ್’ ಅನ್ನು ಪದೇ ಪದೇ ಹೇಳುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ಬಹುತೇಕರು ಈತ ಬಿಜೆಪಿಯ ಚುನಾವಣ ಘೋಷಣೆಯನ್ನು ಹೇಳಿ ಹೇಳಿ ಮಾನಸಿಕ ಸ್ಥೀಮತತೆಯನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ವಿಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಘೋಷಣೆ ಕೂಗುತ್ತಿರುವ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಿರುವುದನ್ನು ಕೂಡ ಚಿತ್ರಿಸಲಾಗಿದೆ. ನಂತರ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ವ್ಯಕ್ತಿಯನ್ನು ನಿಯಂತ್ರಿಸಲು ವೈದ್ಯರು ಚುಚ್ಚುಮದ್ದು ಕೊಡುವುದನ್ನು ಕೂಡ…

Read More

Fact Check | ಮನೋಜ್‌ ತಿವಾರಿ ಸೋಲನ್ನು ಊಹಿಸುವ ಎಬಿಪಿ-ಸಿ ವೋಟರ್‌ ಗ್ರಾಫಿಕ್ಸ್‌ ಚಿತ್ರ ನಕಲಿ

ಪ್ರಸ್ತುತ ಬಿಜೆಪಿಯ ಸಂಸದರಾಗಿರುವ ಮನೋಜ್‌ ತಿವಾರಿಗೆ ಈಶಾನ್ಯ ದೆಹಲಿ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮೀಕ್ಷೆಯ ವರದಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ದೇಶದ ಪ್ರಮುಖ ಸಮೀಕ್ಷಾ ವರದಿಯನ್ನು ಪ್ರಕಟಿಸುವ ಸಂಸ್ಥೆಯಾದ ಎಬಿಪಿ-ಸಿ ವೋಟರ್ ಸಮೀಕ್ಷೆಯ ವರದಿಯ ಗ್ರಾಫಿಕ್ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತದೆ. अब तो मीडिया के ओपिनियन पोल भी दिखा रहे है @kanhaiyakumar के सामने मनोज तिवारी हारने वाले है।…

Read More
ಧ್ರುವ ರಾಠಿ

Fact Check: ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಯೂಟ್ಯೂಬರ್ ಧ್ರುವ ರಾಠಿ ನಡುವಿನ ಎಐ-ರಚಿಸಿದ ಫೋನ್ ಸಂಭಾಷಣೆಯನ್ನು ಇಬ್ಬರ ನಡುವಿನ ನಿಜವಾದ ಸಂಭಾಷಣೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಡಿಯೋ ಕ್ಲಿಪ್‌ನಲ್ಲಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಮುಂದೆ ಹೇಗೆ ಹಲ್ಲೆ ನಡೆಸಲಾಯಿತು ಎಂಬುದನ್ನು ಮಲಿವಾಲ್ ವಿವರಿಸುವುದನ್ನು ಕೇಳಬಹುದು ಮತ್ತು ಅದರ ಬಗ್ಗೆ ವೀಡಿಯೊ ಮಾಡದಂತೆ ರಾಠಿಗೆ ವಿನಂತಿಸಿದ್ದಾರೆ. ನಂತರ ಇಬ್ಬರೂ ರಾಠಿಯವರ ‘ಸಂಬಳ’ ಸಮಯಕ್ಕೆ ಬರುತ್ತಿವೆಯೇ…

Read More