Fact Check: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಸ್ಲಿಂ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನು ಮಾರುತ್ತೇವೆ ಎಂದು ಹೇಳಿಲ್ಲ

ರೇವಂತ್ ರೆಡ್ಡಿ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯದಲ್ಲಿನ ಮುಸ್ಲಿಮರ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ ಎಂದು ಎನ್‌ಟಿವಿ ಪ್ರಸಾರ ಮಾಡಿದ ಸುದ್ದಿ ಬುಲೆಟಿನ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ಘೋಷಣೆಗೆ ಹಣ ಸಂಗ್ರಹಿಸಲು ರೇವಂತ್ ರೆಡ್ಡಿ ದೇವಸ್ಥಾನದ ಭೂಮಿಯನ್ನು ಹರಾಜು ಹಾಕಲಿದ್ದಾರೆ ಎಂಬ ವೇ2ನ್ಯೂಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಕೆಲವರು ಹಂಚಿಕೊಂಡಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್: ದೇವಸ್ಥಾನದ ಜಮೀನುಗಳನ್ನು ಹರಾಜು ಮಾಡುವ ಮೂಲಕ ಮುಸ್ಲಿಂ ಘೋಷಣೆ ಅಥವಾ ಇತರ ಯಾವುದೇ ಮುಸ್ಲಿಂ ಕಲ್ಯಾಣ ಯೋಜನೆಗಳಿಗೆ ನಿಧಿ ಸಂಗ್ರಹಿಸುವ ಬಗ್ಗೆ ರೇವಂತ್ ರೆಡ್ಡಿ ಅಂತಹ ಯಾವುದೇ ಘೋಷಣೆ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಅದನ್ನು ಖಚಿತಪಡಿಸುವ ಯಾವುದೇ ಸುದ್ದಿ ವರದಿ ನಮಗೆ ಕಂಡುಬಂದಿಲ್ಲ. ಅಲ್ಲದೆ, NTV ಯ ಅಧಿಕೃತ YouTube ನಲ್ಲಿ ಅಂತಹ ಯಾವುದೇ ಸುದ್ದಿ ಪ್ರಸಾರವನ್ನು ನಾವು ಕಾಣಲಿಲ್ಲ. ಮುಸ್ಲಿಂ ಘೋಷಣೆಗೆ ನಿಧಿ ಸಂಗ್ರಹಿಸುವ ಕುರಿತು ರೇವಂತ್ ರೆಡ್ಡಿ ಅಂತಹ ಯಾವುದೇ ಘೋಷಣೆ ಮಾಡಿದ್ದರೆ, ಹಲವಾರು ಮಾಧ್ಯಮ ಸಂಸ್ಥೆಗಳು ಆ ಮಾಹಿತಿಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿರುತ್ತಿದ್ದವು.

ಎನ್‌ಟಿವಿ ಡಿಜಿಟಲ್ ಮ್ಯಾನೇಜರ್ ಚಿಲುಕುರಿ ಶ್ರೀನಿವಾಸ್ ರಾವ್ ಟ್ವೀಟ್ ಮೂಲಕ ಎನ್‌ಟಿವಿ ಸುದ್ದಿವಾಹಿನಿಯ ವೈರಲ್ ಸ್ಕ್ರೀನ್‌ಶಾಟ್ ನಕಲಿ ಎಂದು ಖಚಿತಪಡಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಎನ್‌ಟಿವಿ ಹೆಸರಿನಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ರೇವಂತ್ ರೆಡ್ಡಿ ಅವರು ಧರ್ಮಗಳ ನಡುವೆ ದ್ವೇಷವನ್ನುಂಟುಮಾಡುವ ಹೇಳಿಕೆ ನೀಡಿರುವಂತೆ ಮಾರ್ಫಿಂಗ್, ಫ್ಯಾಬ್ರಿಕೇಶನ್ ಮತ್ತು ಸುದ್ದಿ ಮಾಧ್ಯಮದ ನಕಲಿ ಸ್ಕ್ರೀನ್‌ಶಾಟ್ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ ತಂಡವು ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಸಲ್ಲಿಸಿದೆ ಎಂದು ದ ಹಿಂದು ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ Way2News ವರದಿಯ ವಿವರಗಳನ್ನು ಹುಡುಕಿದಾಗ, ವೈರಲ್ ಸ್ಕ್ರೀನ್‌ಶಾಟ್‌ಗೆ ಸಂಬಂಧಿಸಿದ ‘Fact-check by Way2News’ ಪ್ರಕಟಿಸಿದ ಟ್ವೀಟ್ ಒಂದು ಲಭ್ಯವಾಗಿದೆ. ವೈರಲ್ ಸ್ಕ್ರೀನ್‌ಶಾಟ್‌ನ ಚಿತ್ರವನ್ನು ಹಂಚಿಕೊಂಡಿರುವ Way2News, “ಇದು #Way2News ವರದಿಯಲ್ಲ. ಕೆಲವು ಕಿಡಿಗೇಡಿಗಳು ನಮ್ಮ ಲೋಗೋ ಬಳಸಿ ತಪ್ಪು ಮಾಹಿತಿ ಹರಡುತ್ತಿದ್ದು, ‘ಲಗತ್ತಿಸಿರುವ ಪೋಸ್ಟ್’ ವೈರಲ್ ಆಗಿದೆ. ಇದನ್ನು ನಮ್ಮಿಂದ ಪ್ರಕಟಿಸಲಾಗಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. ಎಂದು ಟ್ವೀಟ್ ಮಾಡಿದೆ.

ಆದ್ದರಿಂದ, ದೇವಸ್ಥಾನದ ಜಮೀನುಗಳನ್ನು ಹರಾಜು ಮಾಡುವ ಮೂಲಕ ಮುಸ್ಲಿಂ ಕಲ್ಯಾಣ ಯೋಜನೆಗಳಿಗೆ ಹಣವನ್ನು ಸಂಗ್ರಹಿಸುವ ಬಗ್ಗೆ ರೇವಂತ್ ರೆಡ್ಡಿ ಯಾವುದೇ ಘೋಷಣೆ ಮಾಡಿಲ್ಲ. ಮತ್ತು ಇದು ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯದಿಂದ ಹರಿದಾಡುತ್ತಿರುವ ಸುಳ್ಳು ಸುದ್ದಿಯಾಗಿದ್ದು ಇದಕ್ಕೂ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: ಅನಿಲ್‌ ಅಂಬಾನಿ, ಮುಖೇಶ್‌ ಅಂಬಾನಿ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿಲ್ಲ


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *