Fact Check | ಜುಮ್ಲಾಗಳ ವಿರುದ್ಧ ಅಮಿರ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“ಅಮೀರ್ ಖಾನ್ ‘ಜುಮ್ಲಾವಾದ’ ಅಥವಾ ಬಿಜೆಪಿಯ ಸುಳ್ಳು ರಾಜಕೀಯ ಭರವಸೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೀಡಿಯೊವನ್ನು ಕೊನೆಯವರೆಗೆ ನೋಡಿ.” ಎಂಬ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅಮಿರ್‌ ಖಾನ್‌ ಕಾಂಗ್ರೆಸ್‌ ಅನ್ನು ಈ ಬಾರಿ ಬೆಂಬಲಿಸುತ್ತಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಅಮಿರ್‌ ಖಾನ್‌ ವಿರುದ್ಧ ದ್ವೇಷವನ್ನು ಕೂಡ ಹರಡುವ ಪ್ರಯತ್ನವನ್ನು ಮಾಡಲಾಗಿದೆ. भारत के हर नागरिक लखपति है। क्योंकि सबके पास काम से…

Read More
NDA

Fact Check: NDA ಕೇವಲ 200 ಸ್ಥಾನ ದಾಟಲಿದೆ ಎಂದು ದೈನಿಕ್ ಭಾಸ್ಕರ್ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

2024 ರ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್‌ನ ಏಪ್ರಿಲ್ 13 ರ ಆವೃತ್ತಿಯ ಸ್ಕ್ರೀನ್ಶಾಟ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಸ್ಕ್ರೀನ್ಶಾಟ್‌ನ ಮುಖಪುಟದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯು 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಲಿದೆ ಮತ್ತು ದಕ್ಷಿಣದ ರಾಜ್ಯಗಳಿಂದ NDA ಒಕ್ಕೂಟವು ಕೊಚ್ಚಿಹೋಗುತ್ತದೆ ಎಂದು ಭವಿಷ್ಯ ನುಡಿದಿದೆ ಎಂದು ಹೇಳಲಾಗಿದೆ. “ದೈನಿಕ್ ಭಾಸ್ಕರ್-ನೆಲ್ಸನ್ ಸಮೀಕ್ಷೆ: 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಿದ್ದು, ಈ 10…

Read More

Fact Check: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಸುಳ್ಳು ಪೋಸ್ಟರ್‌ಗಳನ್ನು ಹಂಚಿಕೊಂಡು ಕೆಲವು ರಾಜಕೀಯ ನಾಯಕರ ತೇಜೋವದೆಗೆ ಇಳಿದಿದ್ದಾರೆ. ಈಗ, ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ. – ಪ್ರಿಯಾಂಕಾ ವಾದ್ರಾ” ಎಂಬ ಪೋಸ್ಟರ್‌ ಒಂದನ್ನು ಸುಳ್ಳುಸುದ್ದಿಗಳನ್ನು ಹರಡಲು ಕುಖ್ಯಾತಿ ಪಡೆದಿರುವ ಮಹೇಶ್ ವಿಕ್ರಂ ಹೆಗ್ಡೆ ನೇತೃತ್ವದ ಪೋಸ್ಟ್‌ಕಾರ್ಡ್‌ ಹರಿಬಿಟ್ಟಿದ್ದೆ….

Read More