Fact Check: ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬುದು ಸಂಪೂರ್ಣ ಸುಳ್ಳು

Aravind Kejriwal

ಕಳೆದ ಅನೇಕ ದಿನಗಳಿಂದ ತಮ್ಮ ವಿರೋಧ ಪಕ್ಷದ ನಾಯಕರನ್ನು ದಾಳಿ ಮಾಡಲು ಬಿಜೆಪಿ ಪಕ್ಷವು ಧರ್ಮವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಹೀಗಾಗಲೇ ನೆಹರೂ ಮನೆತನವು ಮೂಲ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಅದೇ ರೀತಿ ಮಹಾತ್ಮ ಗಾಂಧೀಜಿಯವರನ್ನು ಸಹ ಮುಸ್ಲಿಂ ಎಂದು ಆರೋಪಿಸಲಾಗುತ್ತಿತ್ತು. ಈಗ ಅರವಿಂದ್ ಕೇಜ್ರಿವಾಲ್ ಅವರನ್ನು ಕ್ರಿಶ್ಚಿಯನ್ ಎನ್ನಾಗುತ್ತಿದೆ. ಈ ಮೂಲಕ ಬಿಜೆಪಿ ವಿರೋದಿ ನಾಯಕರುಗಳೆಲ್ಲಾ ಮೂಲ ಹಿಂದುಗಳಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ.

ಇದರ ಸಲುವಾಗಿ, “ಅರವಿಂದ್ ಕೇಜ್ರಿವಾಲ್ ಹಿಂದೂ ವಿರೋಧಿ ಮತ್ತು ಕ್ರಿಪ್ಟೋ ಕ್ರಿಶ್ಚಿಯನ್. ಮದರ್ ತೆರೇಸಾ ಅವರು 1992 ರಲ್ಲಿ ಕೇಜ್ರಿವಾಲ್ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿದರು ಮತ್ತು ನಂತರ, ಕೇಜ್ರಿವಾಲ್ 6 ತಿಂಗಳ ಕಾಲ ಮಿಷನರೀಸ್ ಆಫ್ ಚಾರಿಟಿಗಾಗಿ ಸ್ವಯಂಸೇವಕರಾಗಿದ್ದರು.” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಟ್ವಿಟ್‌ ಅನ್ನು ಮೊದಲು ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ಉತ್ತರ ಪ್ರದೇಶ ವಕ್ತಾರ ಪ್ರಶಾಂತ್ ಪಟೇಲ್ ಉಮ್ರಾವ್ ಹಂಚಿಕೊಂಡಿದ್ದರು ಈಗ ಈ ಪೋಸ್ಟ್‌ ಲಭ್ಯವಿಲ್ಲ.ಫ್ಯಾಕ್ಟ್‌ಚೆಕ್: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹಲವಾರು ಸಂದರ್ಶನಗಳಲ್ಲಿ ತಮ್ಮನ್ನು ತಾವು ‘ಹಿಂದೂ ಭಕ್ತ’ ಮತ್ತು ಹನುಮಂತನ ಅನುಯಾಯಿ ಎಂದು ಘೋಷಿಸಿಕೊಂಡಿದ್ದಾರೆ. ನ್ಯೂಸ್ 18 ಚಾನೆಲ್‌ನೊಂದಿಗೆ 2020 ರ ಟೌನ್ ಹಾಲ್ ನ ಕಾರ್ಯಕ್ರಮದಲ್ಲಿ, ಆಂಕರ್ ತನ್ನ ಧರ್ಮವನ್ನು ಪ್ರಶ್ನಿಸಿದಾಗ ಕೇಜ್ರಿವಾಲ್ ತನ್ನನ್ನು ‘ಧರ್ಮನಿಷ್ಠ ಹಿಂದೂ’ ಎಂದು ಗುರುತಿಸಿಕೊಂಡಿದ್ದರು. ಅರವಿಂದ್ ಕೇಜ್ರಿವಾಲ್ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮಿಷನರೀಸ್ ಆಫ್ ಚಾರಿಟಿಯ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಕೇಜ್ರಿವಾಲ್ ಮಿಷನರೀಸ್ ಆಫ್ ಚಾರಿಟಿಗೆ ಸ್ವಯಂಸೇವಕರಾಗಿದ್ದರು ಎಂದು ತಿಳಿದುಬಂದಿದೆ. ಕೋಲ್ಕತ್ತಾದ ನಿರ್ಮಲ್ ಹೃದಯ ಆಶ್ರಮದಲ್ಲಿ ಮದರ್ ತೆರೆಸಾ ಅವರೊಂದಿಗೆ ಕೆಲವು ತಿಂಗಳು ಕೆಲಸ ಮಾಡಿರುವುದಾಗಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು 2016 ರಲ್ಲಿ ನಡೆಸಿದ ‘ನ್ಯೂಸ್ 18’ ಸಂದರ್ಶನದಲ್ಲಿ ಮದರ್ ತೆರೇಸಾ ಅವರೊಂದಿಗೆ ಬಹು ಸಂವಾದಗಳನ್ನು ವಿವರಿಸಿದ್ದರು. ‘ನ್ಯೂಸ್ 18’ ಲೇಖನದ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರು ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್‌ಗೆ ರಾಜೀನಾಮೆ ನೀಡಿದ ನಂತರ ಮಿಷನರೀಸ್ ಆಫ್ ಚಾರಿಟಿಗೆ ಸೇರಿದರು. 2013 ರಲ್ಲಿ, ಅರವಿಂದ್ ಕೇಜ್ರಿವಾಲ್ ಮದರ್ ತೆರೇಸಾ ಅವರೊಂದಿಗಿನ ಕೆಲಸದ ಅನುಭವವನ್ನು ವಿವರಿಸುವಾಗ, “ಈ ಹಳ್ಳಿಗಳಲ್ಲಿ ಬಹಳಷ್ಟು ಜನರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಪ್ರಾರಂಭಿಸಿದರು ಎಂದು ಹೇಳಿದ್ದರು ಎಂದು ‘ಇಂಡಿಯಾ ಟಿವಿ’ ವರದಿ ಮಾಡಿದೆ. ನನಗೆ ತಪ್ಪಿತಸ್ಥ ಭಾವನೆ ಕಾಡಿತು. ಹಿಂದೂ ಧರ್ಮವು ತನ್ನ ಸ್ವಂತ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆಯೇ? ನಾವು ಅವರಿಗಾಗಿ ಏನು ಮಾಡುತ್ತಿದ್ದೇವೆ?”. ಎಂದು. ಆದರೆ ಕೇಜ್ರಿವಾಲ್ ಮಿಷನರೀಸ್ ಆಫ್ ಚಾರಿಟಿ ಸೇವೆಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಎಂದಿಗೂ ಹೇಳಲಿಲ್ಲ.

ಆದ್ದರಿಂದ ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬ ಪ್ರತಿಪಾಧನೆ ಅಧಾರ ರಹಿತ ಸುಳ್ಳಾಗಿದೆ.


ಇದನ್ನು ಓದಿ: Fact Check | ED ಇಂದ ಬಂಧಿಸಲ್ಪಟ್ಟ ನಂತರ ಅರವಿಂದ ಕೇಜ್ರಿವಾಲ್ ತಮ್ಮ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂಬ ಫೋಟೋ ನಕಲಿ


ವಿಡಿಯೋ ನೋಡಿ: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *