Fact Check | ಬಂಧಿತ PFI ನಾಯಕನಿಗೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಂಬಂಧವಿಲ್ಲ

“ಬೆಂಗಳೂರು ನಗರದ ಹೆಚ್​ಎಎಲ್​ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎನ್​ಐಎ (NIA) ಅಲರ್ಟ್ ಆಗಿದ್ದು, ಆಂಧ್ರ ಪ್ರದೇಶದಲ್ಲಿ ಒಬ್ಬ ಶಂಕಿತ ಉಗ್ರನನ್ನು (Suspect Terrorist) ಬಂಧಿಸಿದೆ. ತೆಲಂಗಾಣದ ಕಡಪ ಜಿಲ್ಲೆಯ ಮೈದುಕೂರು ಮಂಡಲಂ ಚೆರ್ಲೋಪಲ್ಲಿಯಲ್ಲಿ ನಿಷೇಧಿತ ಪಿಎಫ್‌ಐ ಏಜೆಂಟ್‌ ಅಬ್ದುಲ್‌ ಸಲೀಂ ಬಂಧತ ಶಂಕಿತ ಉಗ್ರನಾಗಿದ್ದಾನೆ.” ಎಂಬ ಸುದ್ದಿ ಸಂಚಲನ ಮೂಡಿಸಿದೆ.

ಶಂಕಿತ ಉಗ್ರನ ಬಂಧನ ಎಂಬ ಸುಳ್ಳು ಸುದ್ದಿ
                                                          ಶಂಕಿತ ಉಗ್ರನ ಬಂಧನ ಎಂಬ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ಮಂದಿ ಈ ಸುದ್ದಿಯನ್ನ ಹಂಚಿಕೊಂಡಿದ್ದು, ಕನ್ನಡದ ಏಷ್ಯಾನೆಟ್‌ ಸುರ್ವರ್ಣ ನ್ಯೂಸ್‌ ಕೂಡ ಇದೇ ವರದಿಯನ್ನ ಮಾಡಿದೆ. ದೇಶದ ಹಲವು ಸುದ್ದಿ ವಾಹಿನಿಗಳು ಈ ವರದಿ ಮಾಡಿದ್ದರಿಂದ, ಇದು ನಿಜವಿರಬಹುದು ಎಂದು ಜನ ಸಾಮಾನ್ಯರು ನಂಬಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅಸಲಿ ವಿಚಾರ ಹೊರ ಬಂದಿದೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ, ಅಂತರ್ಜಾಲದಲ್ಲಿ ಹುಡುಕಾಟ ನಡೆಸಿತು. ಈ ವೇಳೆ ಆಲ್ಟ್‌ನ್ಯೂಸ್‌ ವರದಿಯೊಂದು ಕಂಡು ಬಂದಿದ್ದು, ಅದರಲ್ಲಿ ದೃಶ್ಯ ಮಾಧ್ಯಮಗಳು ಹಂಚಿಕೊಂಡಿರುವ ಮಾಹಿತಿ ಸುಳ್ಳು ಎಂಬುದು ಬಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಬೆಂಗಳೂರು ಕಮಿಷನರ್‌ ಎಕ್ಸ್‌ ( ಈ ಹಿಂದಿನ ಟ್ವಿಟರ್‌) ಖಾತೆಯಲ್ಲೂ ರಾಮೇಶ್ವರಂ ಕೆಫೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾರ ಬಂಧನವೂ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಡಪ ಪೊಲೀಸರು, ತೆಲಂಗಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂನನ್ನು ಬಂಧಿಸಲಾಗಿದೆ. ಬೆಂಗಳೂರಿನ ಸ್ಫೋಟ ಪ್ರಕರಣಕ್ಕೂ ಈ ಬಂಧನಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಪೊಲೀಸರು ಕೂಡಾ ಇದನ್ನು ಧೃಡಪಡಿಸಿದ್ದಾರೆ ಎಂದು ಆಲ್ಟ್ ನ್ಯೂಸ್ ನ ಮಹಮ್ಮದ್ ಝುಬೈರ್ ಅವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ : Fact Check | ಈ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎಂದು ಎಡಿಟ್ ವೀಡಿಯೊ ಹಂಚಿಕೆ


ವಿಡಿಯೋ ನೋಡಿ : Fact Check | ಈ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎಂದು ಎಡಿಟ್ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *