Fact Check: ಮಯನ್ಮಾರ್‌ನ ಪೋಟೋವೊಂದನ್ನು ರೈತ ಹೋರಾಟ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ರೈತ

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ಹೋರಾಟ ನಿರತ ರೈತರು ದೆಹಲಿಯನ್ನು ಪ್ರವೇಶಿಸದಂತೆ ಬ್ಯಾರಿಕೆಡ್, ಮುಳ್ಳಿನ ತಂತಿಗಳು ಮತ್ತು ಅಶ್ರುವಾಯು ದಾಳಿಗಳಿಂದ ಅವರನ್ನು ಹಿಮ್ಮೆಟ್ಟಿಸುತ್ತಿದೆ. ಹಲವು ಸುತ್ತಿನ ಮಾತುಕತೆಗಳು ಜರುಗಿದ್ದರೂ ಕೂಡ ಕೇಂದ್ರ ಮತ್ತು ರೈತರ ನಡುವಿನ ಚರ್ಚೆಗಳು ಸಫಲವಾಗುತ್ತಿಲ್ಲ.

ಈಗ, “ಮೋದಿಯವರು ರೈತರನ್ನು ಹೇಗೆ ಸಾಯಿಸುತ್ತಿದ್ದಾರೆ ನೋಡಿ. ರೈತರ ಹತ್ಯೆ ಮಾಡಿದವರನ್ನು ತಿರುಗಾಡಲು ಬಿಡುತ್ತೀರಾ? ಕೇವಲ ಮಾತನಾಡಿದ್ದಕ್ಕೆ ಜನರನ್ನು ಬಂಧಿಸುವ ಸರಕಾರ, ಗುಂಡು ಹಾರಿಸುವವರ ಮೇಲೆ ಇಷ್ಟೊಂದು ವ್ಯಾಮೋಹ ತೋರಿಸುತ್ತಿರುವುದು ಏಕೆ?” ಎಂದು ಆರೋಪಿಸಿದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪೋಟೋದಲ್ಲಿ ಅಡುಗೆ ಪಾತ್ರೆಯೊಂದಕ್ಕೆ ದೊಡ್ಡಗಾತ್ರದ ಬುಲೆಟ್ ಒಂದು ನಾಟಿರುವುದನ್ನು ನೋಡಬಹುದಾಗಿದೆ.

ಕೆಲವು X ಖಾತೆದಾರರು ಇದು ಮಣಿಪುರಕ್ಕೆ ಸಂಬಂಧಿಸಿದ ಪೋಟೋ “ಮಣಿಪುರದಲ್ಲಿ ಜನರು ಊಟವನ್ನು ಹೇಗೆ ಉಳಿಸುತ್ತಾರೆ” ಎಂದು ಬರೆದು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: ಇದು 2024 ರ ಫೆಬ್ರವರಿ ಆರಂಭದಲ್ಲಿ ಮಯನ್ಮಾರ್ ಮತ್ತು ಬಾಂಗ್ಲಾದೇಶ ಗಡಿಯಾದ ಟೆಕ್ನಾಫ್‌ನ ಶಾಹಪರಿರ್ ದ್ವೀಪದಲ್ಲಿ ನಡೆದ ಘಟನೆಯಾಗಿದೆ. 24 onbd ಎಂಬ ಸುದ್ದಿ ಮಾಧ್ಯಮ “ಮ್ಯಾನ್ಮಾರ್‌ನ ಗುಂಡುಗಳು ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಅಡುಗೆಮನೆಯ ಮುಚ್ಚಳದ ಮೇಲೆ ಬಿದ್ದಿವೆ” ಎಂದು ವರದಿ ಮಾಡಿದೆ.2017 ರಲ್ಲಿ, 1 ಮಿಲಿಯನ್ ರೋಹಿಂಗ್ಯಾಗಳು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದರು. ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದಿಂದ ಚಿತ್ರಹಿಂಸೆಗೊಳಗಾದ ರೋಹಿಂಗ್ಯಾಗಳಿಗೆ ಬಾಂಗ್ಲಾದೇಶವು ಮಾನವೀಯ ಆಧಾರದ ಮೇಲೆ ಆಶ್ರಯ ನೀಡಿತು. ಆ ರೋಹಿಂಗ್ಯಾಗಳಿಂದಾಗಿ ಸ್ಥಳೀಯರು ಈಗ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಬಾಂಗ್ಲಾದೇಶವು ಸಂಘರ್ಷವನ್ನು ನಿಲ್ಲಿಸಲು ಮತ್ತು ರೋಹಿಂಗ್ಯಾಗಳನ್ನು ರಖೈನ್‌ಗೆ ಹಿಂತಿರುಗಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸಲು ಮನವಿ ಮಾಡುತ್ತಿದ್ದಾರೆ. ಆದರೆ ಭಾರತ ಸೇರಿದಂತೆ ಹಲವು ಮಿತ್ರ ರಾಷ್ಟ್ರಗಳು ಈ ವಿಷಯದಲ್ಲಿ ಮೌನವಾಗಿದ್ದಾವೆ.

ಹಲವು ತಜ್ಞರ ಪ್ರಕಾರ, “ಈ ಬಾರಿ ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ 2017 ರಂತಿಲ್ಲ. ಮ್ಯಾನ್ಮಾರ್‌ನಲ್ಲಿನ ಸಂಘರ್ಷದಿಂದ ಬಾಂಗ್ಲಾದೇಶಕ್ಕೆ ಹೆಚ್ಚು ಪರಿಣಾಮ ಬೀರಿದೆ. ಈಗ ಬಾಂಗ್ಲಾದೇಶವು ಮ್ಯಾನ್ಮಾರ್ ಸಮಸ್ಯೆಯನ್ನು ಪರಿಹರಿಸಲು ಅಂತರರಾಷ್ಟ್ರೀಯ ಒತ್ತಡವನ್ನು ಸೃಷ್ಟಿಸುವ ಕೆಲಸ ಮಾಡಬೇಕಾಗಿದೆ. ರಾಜತಾಂತ್ರಿಕ ಚಟುವಟಿಕೆಗಳ ಮೂಲಕ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದ ಮ್ಯಾನ್ಮಾರ್ ಗಡಿ ಸಿಬ್ಬಂದಿ ಸೇರಿದಂತೆ 330 ಜನರನ್ನು 11 ದಿನಗಳಲ್ಲಿ ವಾಪಸ್ ಕಳುಹಿಸಲು ಬಾಂಗ್ಲಾದೇಶಕ್ಕೆ ಸಾಧ್ಯವಾಗಿದೆ. ಅದೇ ರೀತಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾಗಳ ವಾಪಸಾತಿ ಶೀಘ್ರ ಆಗಲಿದೆ ಎಂದು ರೋಹಿಂಗ್ಯಾಗಳು ನಿರೀಕ್ಷಿಸುತ್ತಿದ್ದಾರೆ.

ಬಾಂಗ್ಲಾದೇಶದ ಗಡಿಯಲ್ಲಿರುವ ಮ್ಯಾನ್ಮಾರ್‌ನ ಸಂಪೂರ್ಣ ರಾಖೈನ್ ರಾಜ್ಯವು ಈಗ ಅರಕನ್ ಸೇನೆಯ ನಿಯಂತ್ರಣದಲ್ಲಿದೆ. ಮ್ಯಾನ್ಮಾರ್ ಮಿಲಿಟರಿಯಂತಹ ಅರಕನ್ ಸೇನೆಯ ವಿರೋಧಿಗಳು ಜುಂಟಾ ಸರ್ಕಾರವಾಗಿದೆ. ಅದೇ ರೀತಿಯಲ್ಲಿ, ಅವರ ವಿರೋಧಿಗಳು ಈಗ ರೋಹಿಂಗ್ಯಾ ಮೂಲದ ಸಂಘಟನೆಗಳು. ಅವರು ಭಯದಿಂದ ಗುಂಡು ಹಾರಿಸುತ್ತಿದ್ದಾರೆ ಮತ್ತು ಮಾರ್ಟರ್(mortar) ಶೆಲ್‌ಗಳನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿನ ಸ್ಥಳಿಯ ಜನರು ನೆಮ್ಮದಿಯಿಂದ ಬದುಕುವುದೇ ಈಗ ದುಸ್ಥರವಾಗಿದೆ. 

ಸಧ್ಯ ವೈರಲ್ ಪೋಟೋಗೆ ಸಂಬಂಧಿಸಿದಂತೆ ಅನೇಕ ವಿಡಿಯೋ ಶಾಟ್ಸ್‌ಗಳು ಯೂಟೂಬಿನಲ್ಲಿ ಲಭ್ಯವಿವೆ. ಮತ್ತು ಬಾಂಗ್ಲಾದೇಶದ ಕೆಲವು ಪತ್ರಿಕೆಗಳು ಸಹ ವರದಿ ಮಾಡಿವೆ. ಆದ್ದರಿಂದ ಈ ಚಿತ್ರ ರೈತ ಹೋರಾಟಕ್ಕೆ ಸಂಬಂಧಿಸಿರದಾಗಿರದೆ ಮಯನ್ಮಾರಿಗೆ ಸಂಬಂಧಿಸಿದ್ದಾಗಿದೆ.


ಇದನ್ನು ಓದಿ: Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ವಿಡಿಯೋ ನೋಡಿ: Fact Check | ಸುಪ್ರೀಂ ಕೋರ್ಟ್‌ ಇವಿಎಂ ಅನ್ನು ಬ್ಯಾನ್‌ ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *