“ಈ ವಿಡಿಯೋ ನೋಡಿ ಸಂಸತ್ತಿನ ಒಳಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಮೀಸಲಾತಿ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಮೀಸಲಾತಿ ರದ್ದು ಮಾಡುವ ಸೂಚನೆ ನೀಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಮೀಸಲಾತಿ ವಿರೋಧಿ ಮೀಸಲಾತಿಯನ್ನು ಶೀಘ್ರದಲ್ಲೇ ರದ್ದು ಪಡಿಸಲಾಗುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಮೀಸಲಾತಿಯನ್ನು ವಿರೋಧಿಸುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದರೆ ಈ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಪರಿಶೀಲಿಸೋಣ
ಫ್ಯಾಕ್ಟ್ಚೆಕ್
ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ವಿಡಿಯೋವನ್ನು ವಿವಿಧ ಕೀ ಫ್ರೇಮ್ಗಳಾಗಿ ವಿಂಗಡಿಸಿತು. ಬಳಿಕ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಮೋದಿ ಅವರ ಹಲವಾರು ವಿಡಿಯೋಗಳು ಕಂಡು ಬಂದಿದೆ. ಅದರಲ್ಲಿ ಸಂಸದ್ ಟಿವಿಯ ಸಂಪೂರ್ಣ ಆವೃತ್ತಿಯೊಂದು ಯುಟ್ಯುಬ್ನಲ್ಲಿ ಕಂಡು ಬಂದಿದೆ. ಅದರಲ್ಲಿ ಪ್ರಧಾನಿ ಮೋದಿ ಅವರು 1:34:04 ಸಮಯದವರೆಗೆ ಮಾತನಾಡಿರುವುದನ್ನು ನೋಡಬಹುದಾಗಿದೆ.
ಹಾಗಾಗಿ ಇದು ಮೋದಿಯವರ ಸಂಪೂರ್ಣ ಭಾಷಣದ ಎಡಿಟ್ ಮಾಡಿದ ವೀಡಿಯೊ ಕ್ಲಿಪ್ ಎಂಬು ಸ್ಪಷ್ಟವಾಗಿದೆ. ಇನ್ನು ಸಂಸದ್ ಟಿವಿಯಲ್ಲಿ ಉಲ್ಲೇಖವಿರುವಂತೆ ಈ ವೈರಲ್ ವಿಡಿಯೋ ಫೆಬ್ರವರಿ 7, 2024 ರದ್ದಾಗಿದೆ. ರಾಜ್ಯಸಭೆಯಲ್ಲಿ ಭಾರತದ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಮೋದಿ ಉತ್ತರಿಸುವ ವೇಳೆ ತಮ್ಮ ಭಾಷಣದಲ್ಲಿ, ಕಾಂಗ್ರೆಸ್ ಯಾವಾಗಲೂ ಎಸ್ಸಿ/ಎಸ್ಟಿಗಳು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತದೆ ಎಂದು ಪ್ರಸ್ತಾಪಿಸಿದ್ದಾರೆ.. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಕೂಡ ವರದಿಯನ್ನು ಮಾಡಿದೆ
ಇದೇ ವೇಳೆ ಪ್ರಧಾನಿ ಮೋದಿ ಅವರು ನೆಹರು ಅವರ ಉಲ್ಲೇಖವನ್ನು ಓದಿದ್ದು, ಅದರಲ್ಲಿ “ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ವಿಶೇಷವಾಗಿ ಸೇವೆಗಳಲ್ಲಿ. ರಾಜ್ಯಸಭೆಯಲ್ಲಿ ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಯಾವುದೇ ಅಂಶವಾದರೂ ನಾನು ಬಲವಾಗಿ ವಿರೋಧಿಸುತ್ತೇನೆ” ಎಂದು ಓದಿದ್ದಾರೆ. ಇದನ್ನೇ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಿಬಿಡಲಾಗಿದೆ.
ಇದನ್ನೂ ಓದಿ : Fact Check | ಯುಸಿಸಿ ವಿರುದ್ಧ ಮುಸಲ್ಮಾನರು ಬೃಹತ್ ರ್ಯಾಲಿ ನಡೆಸಿದ್ದಾರೆಂದು 2022ರ ವಿಡಿಯೋ ಹಂಚಿಕೆ.!
ವಿಡಿಯೋ ನೋಡಿ : Fact Check | ಯುಸಿಸಿ ವಿರುದ್ಧ ಮುಸಲ್ಮಾನರು ಬೃಹತ್ ರ್ಯಾಲಿ ನಡೆಸಿದ್ದಾರೆಂದು 2022ರ ವಿಡಿಯೋ ಹಂಚಿಕೆ.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.