Fact Check | ಶೇ.50ರಷ್ಟು ಮೀಸಲಾತಿ ರದ್ದು ಪಡಿಸುವುದಾಗಿ ರಾಹುಲ್‌ ಗಾಂಧಿ ಹೇಳಿಲ್ಲ.!

“ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ’50 ಶೇ.ಮೀಸಲಾತಿಯನ್ನು ತೆಗೆದು ಹಾಕಲಾಗುವುದು’ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ” ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ ರಾಹುಲ್‌ ಗಾಂಧಿ ಅವರ ಮೀಸಲಾತಿ ವಿರೋಧಿ ಮನಸ್ಥಿತಿ ಇದು ಹಂಚಿಕೊಳ್ಳುತ್ತಿದ್ದಾರೆ.

ವಾಸ್ತವದಲ್ಲಿ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ನ್ಯಾಯ ಯಾತ್ರಯನ್ನು ನಡೆಸುತ್ತಿದ್ದು, ಇದು ಸಾಕಷ್ಟು ಜನ ಮನ್ನಣೆಗಳನ್ನು ಗಳಿಸುತ್ತಿರುವುದರ ಜೊತೆಗೆ, ಹಲವು ಸುಳ್ಳು ಸುದ್ದಿಗಳಿಂದ ಈ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ವಿವಾದಗಳು ಕೂಡ ಅಂಟಿಕೊಂಡಿದೆ. ಇದರ ನಡುವೆ ಈಗ ಈ ರೀತಿಯ ಸುದ್ದಿಯು ಕೂಡ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಕಳಂಕ ತರುವ ಪ್ರಯತ್ನೆವೇ ಎಂಬುದನ್ನ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ NDTV ವರದಿಯೊಂದು ಪ್ರಕಟವಾಗಿದ್ದು ಅದರಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರಯಲ್ಲಿ ರಾಹುಲ್‌ ಗಾಂಧಿ ಅವರು ಮಾತನಾಡಿದ ಹೈಲಟ್ಸ್‌ಗಳನ್ನು ಉಲ್ಲೇಖಿಸಲಾಗಿತ್ತು

ಭಾರತ್‌ ಜೋಡೋ ನ್ಯಾಯ ಯಾತ್ರೆ ಜಾರ್ಖಂಡ್‌ನ ರಾಂಚಿಗೆ ತಲುಪಿದ ಸಂದರ್ಭದಲ್ಲಿ, ಅಲ್ಲಿನ ಬುಡಕ್ಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಜನರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, 50% ಮೀಸಲಾತಿ ಮಿತಿಯನ್ನು ತೆಗೆದುಹಾಕಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ. ಭಾರತ್‌ ಜೋಡೋ ನ್ಯಾಯ ಯಾತ್ರೆ ಜಾರ್ಖಂಡ್‌ಗೆ ತಲುಪುವ ಮುನ್ನವೇ ಅಲ್ಲಿ ಯಾವ ವಿಷಯದ ಕುರಿತಾಗಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಕಟಣೆಯನ್ನ ಹೊರಡಿಸಿತ್ತು

ಇನ್ನು ಈ ಕುರಿತು ಈ ಕುರಿತು ನಾನು ಗೌರಿ.ಕಾಮ್‌ ಫೆಬ್ರವರಿ 6,2024ರಂದು ವರದಿಯೊಂದನ್ನ ಪ್ರಕಟ ಮಾಡಿದ್ದು ಅದರಲ್ಲಿ ‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 50% ಮೀಸಲಾತಿ ಮಿತಿ ಕಿತ್ತೆಸೆಯುತ್ತೇವೆ: ರಾಹುಲ್ ಗಾಂಧಿ‘ ಎಂದು ರಾಹುಲ್‌ ಗಾಂಧಿ ಹೇಳಿಕೆಯನ್ನ ಉಲ್ಲೇಖಿಸಿ ಸ್ಪಷ್ಟವಾಗಿ ವರದಿಯನ್ನ ಮಾಡಿದೆ.

ಅದರಲ್ಲಿ ಕೂಡ 50% ಮೀಸಲಾತಿ ಮಿತಿಯನ್ನು ತೆಗೆದು ಹಾಕುವ ಕುರಿತು ರಾಹುಲ್‌ ಗಾಂಧಿ ಮಾತನಾಡಿರುವುದರ ಕುರಿತು ಉಲ್ಲೇಖವನ್ನು ಮಾಡಲಾಗಿದೆ.  ಈ ಕುರಿತು ಹಲವು ಮಾಧ್ಯಮಗಳು ಸ್ಪಷ್ಟವಾಗಿ ವರದಿಯನ್ನು ಮಾಡಿವೆ. ಆದರೂ ಕೂಡ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.


ಇದನ್ನೂ ಓದಿ : Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *