ಅಂಗನವಾಡಿ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಗೊತ್ತಿರಬೇಕೆಂಬ ಆದೇಶ ಹಿಂದಿನ ಬಿಜೆಪಿ ಸರ್ಕಾರದ್ದು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಉರ್ದು ಭಾಷೆ’ ಗೊತ್ತಿರುವುದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಆರೋಪಿಸುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮನೆಹಾಳು ಸರ್ಕಾರದ ಮತ್ತೊಂದು ಆದೇಶ * ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕೇವಲ ಉರ್ದು ಗೊತ್ತಿರೋರು ಅರ್ಜಿ ಹಾಕಬೇಕಂತೆ ? ಅಲ್ಲಿಗೆ ಮತ್ತೊಂದು ಕನ್ನಡದ ಕಗ್ಗೊಲೆ. ಅಂಗನವಾಡಿ ಕೆಲಸಕ್ಕೆ ಅರ್ಜಿ ಹಾಕಿರುವರು ಅತ್ಯಂತ ಕಡುಬಡವ ಹೆಣ್ಣುಮಕ್ಕಳು.. ತನ್ನ ಕುಟುಂಬಕ್ಕೆ ಒಂದೊತ್ತು ಅನ್ನ ಕಂಡುಕೊಳ್ಳುವವರು,,, ಅಲ್ಲಿ ಕೆಲಸಕ್ಕೆ ಕೇವಲ ಮುಸ್ಲಿಂ…

Read More
ಸಂವಿಧಾನ

Fact Check: ಸಂವಿಧಾನದ 30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ ಧರ್ಮವನ್ನು ಬೋಧಿಸಲು ಅವಕಾಶವಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ನಮ್ಮ ಭಾರತದ ಸಂವಿಧಾನವನ್ನು ತಪ್ಪಾಗಿ ಅರ್ಥೈಸುವ ಮೂಲಕ ಸಂವಿಧಾನಕ್ಕೆ ಅಗೌರವ ತರುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ “ಮೋದಿಯ ಎರಡನೇ ಹೊಡೆತ ಬರಲಿದೆ, 30-A ಕಾಯಿದೆಯನ್ನು ರದ್ದುಗೊಳಿಸಬಹುದು. ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿ ಜಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಸಂವಿಧಾನದ  30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ “ಹಿಂದೂ ಧರ್ಮ” ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ. “ಕಾನೂನು 30″ ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್,…

Read More

Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಬನಾರಸ್‌ನಿಂದ ಗಾಜಿಪುರಕ್ಕೆ ವಂದೇ ಭಾರತ್ ಬಸ್‌ ಸಂಚಾರ ಆರಂಭವಾಗಿದೆ. ಅದರ ಮೊದಲು ಚಿತ್ರ ಇದು ಎಲ್ಲಾರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು, ಇದು ನಿಜವಾದ ಬಸ್‌ ಎಂದು ನಂಬಿಕೊಂಡಿದ್ದಾರೆ. ಈ ವಂದೇ ಭಾರತ್‌ ಬಸ್‌ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಟೋವನ್ನು ಗಮನಿಸಿದಾಗ, ಇದರಲ್ಲಿ ವಂದೇ ಭಾರತ್‌ ರೈಲು ಮುಂಭಾಗದಿಂದ ನೋಡಲು ಹೇಗೆ ಕಾಣಿಸುತ್ತದೋ ಅದೇ ವಿನ್ಯಾಸವನ್ನ ಈ ವೈರಲ್‌ ಫೋಟೋದಲ್ಲಿರುವ ವಂದೇ ಭಾರತ್‌ ಬಸ್‌ನಲ್ಲಿ…

Read More

Fact Check: ಭಾರತ್ ನ್ಯಾಯ್ ಯಾತ್ರೆ ವೇಳೆ ಮೋದಿ ಮೋದಿ ಘೋಷಣೆಯಿಂದ ರಾಹುಲ್ ಗಾಂಧಿ ಕಿರಿಕಿರಿಯಾಗಿ ಸಿಟ್ಟಿನಿಂದ ಹೋಗಿಲ್ಲ

ಯಾತ್ರೆ ವೇಳೆ ಹಿಂದೂಗಳ ಶ್ರೀರಾಮ್ ಘೋಷಣೆಯಿಂದ ಕಿರಿಕಿರಿಯಾದ ಕೈ ಯುವರಾಜ ರಾಹುಲ್ ! ಬಸ್ ನಿಲ್ಲಿಸಿ‌ ಜನರ‌ ಗುಂಪಿನ ಮೇಲೆ‌ ಸಿಟ್ಟಿನಿಂದ ಹೋದ ಕೈ ನೇತಾರ ? 🙆 ಏಕಿಷ್ಟು ಸಿಟ್ಟು ? ಇದು ನಾಯಕನ‌ ಲಕ್ಷಣವೇ ? ಏನಿದು ಆವೇಶ ? ಇದು PM ಅಭ್ಯರ್ಥಿ ವರ್ತಿಸುವ ರೀತಿಯೇ ? ಎಂಬ ಸಂದೇಶದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ ರಾಹುಲ್…

Read More