ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ಶ್ರೀರಾಮನ ಲೇಸರ್ ಲೈಟಿಂಗ್ ಎಂದು ಡೆಹ್ರಾಡೂನ್‌ ಫೋಟೊ ಹಂಚಿಕೆ

ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ದಿನಗಳಿಂದ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ಸಹ ಇವುಗಳನ್ನೇ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಪ್ರಯತ್ನ ಮಾಡಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಇದರಂತೆ ಇತ್ತೀಚೆಗೆ “ಅವರ(ಕಾಂಗ್ರೆಸ್) ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದರು. ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು..! ಎಂಬ ವಿಡಿಯೋ…

Read More

Fact Check: ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ

ಇತ್ತೀಚೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರಿಂದ ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ ಎನ್ನುವಂತೆ ಬಿಂಬಿಸಲು ಅನೇಕರು ಶ್ರಮ ಪಡುತ್ತಿದ್ದಾರೆ. ಕೇವಲ ಟಿಪ್ಪು ಸುಲ್ತಾನ್ ನಡೆಸಿದ ದಾಳಿಗಳನ್ನು ಮುನ್ನಲೆಯಾಗಿಟ್ಟುಕೊಂಡು ಈ ವಾದಗಳನ್ನು ಮಂಡಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಸಹ ಟಿಪ್ಪುಸುಲ್ತಾನ್ ಪರವಾಗಿ ಮತ್ತು ವಿರೋಧಿಸಿ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇತ್ತೀಚೆಗೆ ಸಚಿವ ರಾಜಣ್ಣನವರು ತಮ್ಮ ಭಾಷಣವೊಂದರಲ್ಲಿ “ಕೆಆರ್‌ಎಸ್‌ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮೈಸೂರು ಮಹಾರಾಜರು ಕೇವಲ ಮುಂದುವರೆಸಿದರು” ಎಂದಿದ್ದಾರೆ. ಈ ಹೇಳಿಕೆಯು ತೀವ್ರ ಚರ್ಚೆಗೆ ಕಾರಣವಾಗಿದ್ದು ಕೆಲವರು “KRS…

Read More

Fact Check | ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿಲ್ಲ

“ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು, ಇದೇ ವೈರಲ್‌ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ  “ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ….

Read More