Fact Check : ಬಾಬಾಬುಡನ್ ಗಿರಿಯ ಗೋರಿ ದ್ವಂಸ ಪ್ರಕರಣ ರೀ ಓಪನ್ ಆಗಿಲ್ಲ

“ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ 2017ರಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ‌ಒಟ್ಟು 14 ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.” ಎಂದು ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆ ಟಿವಿ 9 ಕನ್ನಡ ಸೇರಿದ ಹಾಗೆ ಹಲವು ಮಾಧ್ಯಮಗಳು ವರದಿಯನ್ನ ಮಾಡಿವೆ. ಫ್ಯಾಕ್ಟ್‌ಚೆಕ್‌ ಈ ಸುದ್ದಿ ನಿಜವೇ ಎಂದು ಪರಿಶೀಲಿಸಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ…

Read More

ದೇವಾಲಯಗಳಿಗೆ ಮಾತ್ರ ತೆರಿಗೆ, ಮಸೀದಿ-ಚರ್ಚ್‌ಗಳಿಗೆ ತೆರಿಗೆಯಿಲ್ಲ ಎಂಬುದು ಸುಳ್ಳು

ಮಸೀದಿ ಚರ್ಚ್‌ಗಳಿಗೂ ತೆರಿಗೆ ವಿಧಿಸಿ. ಇಲ್ಲದಿದ್ದರೆ ನಮ್ಮ ಪವಿತ್ರ ದೇವಾಲಯಗಳಿಂದ ತೆರಿಗೆಯನ್ನು ತೆಗೆದುಹಾಕಿ. ಇದಕ್ಕೆ ಸಹಮತವಿದ್ದರೆ ಶೇರ್ ಮಾಡಿ ಎಂಬ ಸಂದೇಶವನ್ನು ಯುನೈಟೆಡ್ ಹಿಂದೂಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 26, 2020ರಲ್ಲಿ ಈ ಸಂದೇಶ ಪೋಸ್ಟ್ ಮಾಡಲಾಗಿದ್ದರೂ ಇಂದಿಗೂ ಹಲವಾರು ಜನರು ಅದನ್ನು ನಿಜವೆಂದು ನಂಬಿ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ಜನರು ಟ್ವಿಟರ್‌ನಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂಬುದನ್ನು ಪರಿಶೀಲಿಸೋಣ. In a…

Read More

Fact Check | ಅಯೋಧ್ಯೆಯ ರಾಮಮಂದಿರಕ್ಕಾಗಿ BHEL ಸಂಸ್ಥೆ ಗಂಟೆಗಳನ್ನು ನಿರ್ಮಿಸಿಲ್ಲ

“ಈ ವಿಡಿಯೋ ನೋಡಿ ಇದು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಭಾರತ್‌ ಹೇವಿ ಎಲೆಕ್ಟ್ರಿಕಲ್‌ ಲಿಮಿಟೆಡ್‌ ( BHEL ) ಸಂಸ್ಥೆ ನಿರ್ಮಿಸಿರುವ ಗಂಟೆಗಳು. ಈ 42 ಗಂಟೆಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. ” ಎಂಬ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಮೋಜೋ ಸುದ್ದಿ…

Read More
Rahul Gandhi

Fact Check: ರಾಹುಲ್ ಗಾಂಧಿಯವರು ಸುಕನ್ಯ ದೇವಿ ಎಂಬ ಹೆಣ್ಣುಮಗಳ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬುದು ಸುಳ್ಳು

ರಾಜಕೀಯ ನಾಯಕರುಗಳ ಮೇಲೆ ಆರೋಪ- ಪ್ರತ್ಯಾರೋಪಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ ಆದರೆ ಕಳೆದ ಎರಡು ದಶಕಗಳಿಂದ ರಾಹುಲ್ ಗಾಂಧಿಯವರ ಮೇಲೆ ಸುಳ್ಳು ಸುದ್ದಿಗಳಿಂದ ಸುಳ್ಳು ಆರೋಪಗಳಿಂದ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. 2006ರಲ್ಲಿ ಸುಕನ್ಯಾ ದೇವಿ ಎಂಬ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನು ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರು ಹಂಚಿಕೊಳ್ಳುತ್ತಿದ್ದಾರೆ. ಆದರೆ ಸತ್ಯವೇನೆಂದರೆ 2012ರಲ್ಲಿ ರಾಹುಲ್ ಗಾಂಧಿ ವಿರುದ್ಧದ ಅತ್ಯಾಚಾರ…

Read More