RBI

ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ ಎಂಬುದು ಸುಳ್ಳು

ಇತ್ತೀಚೆಗೆ ಎರಡು ಸಾವಿರ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದ ಬೆನ್ನಲ್ಲೆ ಈಗ ರೂಪಾಯಿ ಅಮಾನ್ಯದ ಕುರಿತು ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರು ಇದರ ಸತ್ಯಾಸತ್ಯೆತೆಯನ್ನು ತಿಳಿಯದೇ ಈ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಆದೇಶ ಹೊರಡಿಸಿದ್ದು ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ. ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಇಂತಹ ಯಾವ ಪ್ರಕಟನೆಯನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿಲ್ಲ….

Read More

10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ

ಇಂದಿಗೂ ಭಾರತದ ಗ್ರಾಮೀಣ ಭಾಗಗಳಲ್ಲಿ ತಮ್ಮ ದಿನನಿತ್ಯದ ಅಡುಗೆಗೆ ಸೌದೆಗಳನ್ನು, ಬೆರಣಿಯನ್ನು ಬಳಸುವುದು ರೂಢಿಯಲ್ಲಿದೆ. ಆದರೆ ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಗೃಹ ಮಾಲಿನ್ಯವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಆನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಮಾಣವೇ ಅಧಿಕವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoP&NG) ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು “LPGಯಂತಹ ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ…

Read More
ಖರ್ಗೆ

ಖರ್ಗೆಯವರು ಭಾಷಣ ಮಾಡುವಾಗ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ

AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ದೇಶಾದ್ಯಂತ ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖರ್ಗೆಯವರು  ಭಾಷಣ ಮಾಡುವಾಗ ಪ್ರೇಕ್ಷಕರು ಮೋದಿ ಮೋದಿ ಎಂಬ ಘೋಷಣೆ ಕೂಗಿ, ಹಿಂಸೆ ನೀಡಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ವೈರಲ್ ಮಾಡಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರೆ ಖರ್ಗೆಯವರಿಗೆ ಗೌರವ ಕೊಡದೇ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್ ವೈರಲ್ ವಿಡಿಯೋದ…

Read More