ರಾಜಸ್ಥಾನ

ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ ಎಂಬುದು ಸುಳ್ಳು

ರಾಜಸ್ಥಾನದ ಚುನಾವಣೆ ಮುಗಿದು ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮುಖ್ಯಮಂತ್ರಿಯ ಆಯ್ಕೆಯ ಕುರಿತು, ಗೆಲುವಿನ ಕುರಿತು ಅನೇಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿವೆ. ಕಳೆದ ಕೆಲವು ದಿನಗಳಿಂದ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ. ಅದು ರಾಜಸ್ಥಾನದ 5 ವರ್ಷದ ಹೊಲಸು ಸ್ವಚ್ಛ ಮಾಡಲು ಜೆಸಿಬಿ ಉಡುಗೊರೆ ನೀಡಿದ್ದಾರೆ. ಎಂದು ಪ್ರತಿಪಾದಿಸಿ ಹಲವಾರು ಜನ ವಿಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಮೆಗ್ ಅಪ್ಡೆಟ್ಸ್‌ ಎಂಬ ಬಲಪಂಥೀಯ ಟಿಟ್ವರ್ ಖಾತೆಯಿಂದ…

Read More
ಜೇಡ

Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು

ಕೀಟಗಳ ಜಗತ್ತಿನಲ್ಲಿ ಜೇಡಗಳದೇ ಒಂದು ವಿಶಿಷ್ಟ ಬದುಕು. ಹೆಣ್ಣೇ ಪ್ರಧಾನವಾಗಿರುವ ಜೇಡಗಳ ಜಗತ್ತಿನ ಕುರಿತು ಎಷ್ಟು ತಿಳಿದುಕೊಂಡರೂ ಇನ್ನಷ್ಟು ಕುತೂಹಲ ಮೂಡುತ್ತದೆ. ಆ ಕಾರಣಕ್ಕಾಗಿಯೇ ಏನೋ ಜೇಡಗಳ ಕುರಿತು ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳು ಮತ್ತು ಅಪನಂಬಿಕೆಗಳು ಬೆಳೆದು ಬಂದಿವೆ. ಜೇಡಗಳನ್ನು ಇನ್ನಲೆಯಾಗಿಟ್ಟುಕೊಂಡು ಅನೇಕ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಬಂದಿವೆ. ಅದರಂತೆ ಜೇಡಗಳಿಗೆ ಸಂಬಂಧಿಸಿದಂತೆ ಹರಡುತ್ತಿರುವ ಸುಳ್ಳು ಮಾಹಿತಿಗಳೇ ಹೆಚ್ಚು. ಇತ್ತೀಚೆಗೆ, “ಮುಂಬೈನ ದಂತ ಚಿಕಿತ್ಸಾಲಯಕ್ಕೆ ಒಸಡಿನ ನೋವು ಎಂದು ಬಂದ ಗೌತಮ್ ಅಗರ್ವಾಲ್ ಎಂಬ…

Read More

Fact Check |’ದೆಹಲಿ ಏಮ್ಸ್’ನಲ್ಲಿ 7 ಚೀನಾದ ‘ನ್ಯೂಮೋನಿಯಾ’ ಕೇಸ್ ಪತ್ತೆ ವರದಿ ಸುಳ್ಳು

“ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ.” ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ ಇನ್ನು ಕೆಲ ಮಾಧ್ಯಮಗಳಲ್ಲಿ “ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ…

Read More

Fact Check | ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ಓಡಾಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ತೂರಾಡುತ್ತಾ ನಡೆಯುತ್ತಿದ್ದರು. ಈ ವೇಳೆ ಆಟೋ ರಿಕ್ಷಾ ಚಾಲಕನೋರ್ವ ಸನ್ನಿ ಡಿಯೋಲ್ ಅವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ್ದಾನೆ.” ಎಂಬ ತಲೆ ಬರಹದೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನು ಈ ತಲೆ ಬರಹದೊಂದಿಗೆ ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಕಮೆಂಟ್‌ ಮಾಡಿ ಸನ್ನಿ ಲಿಯೋನ್‌ ಅವರ ವಿರುದ್ಧ ಕಿಡಿ ಕಾರಿದ್ದರೆ. ಅವರ…

Read More

Fact Check | ಪ್ರವಾಹದ ನೀರಿನಲ್ಲಿ ಜನರು ಆಟವಾಡುತ್ತಿರುವ ವಿಡಿಯೋ ಚೆನೈಗೆ ಸಂಬಂಧಿಸಿದಲ್ಲ..!

“ನೋಡಿ ಚೆನೈನಲ್ಲಿ ಮಿಚಾಂಗ್ ಚಂಡಮಾರುತದ ಅಬ್ಬರದ ನಡುವೆ ಅಲ್ಲಿನ ಜನರು ಹೇಗೆ ಪ್ರವಾಹದ ನೀರಿನಲ್ಲಿ, ವಾಲಿಬಾಲ್, ಪುಶ್ಅಪ್ ಗೇಮ್‌ಗಳನ್ನು ಆಡುತ್ತಿದ್ದಾರೆ” ಎಂಬ ತಲೆ ಬರಹದೊಂದಿಗೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ  ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವಿನ ಸತ್ಯಾಸತ್ಯತೆಯ ಬಗ್ಗೆ ಅರಿಯದೆ ಸಾಕಷ್ಟು ಜನ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಪರಿಶೀಲನೆ ನಡೆಸದೆ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ People on social media :prayers for Chennai they are in trouble 🙏 Meanwhile people of…

Read More