Fact Check | ತಾಯಿಯೊಬ್ಬಳು ತನ್ನ ಧ್ವಂಸಗೊಂಡ ಮನೆಯಿಂದ ಮಗುವಿನ ಆಟಿಕೆ ತರುತ್ತಿರುವ ಫೋಟೋ ಗಾಜಾದಲ್ಲ!

ಇಸ್ರೆಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಸಾಕಷ್ಟು ಮಂದಿ ಹಮಾಸ್‌ ಜನರ ಶಕ್ತಿ ಕುಗ್ಗುವುದಿಲ್ಲ ಎಂದು ತಲೆ ಬರಹವನ್ನು ನೀಡಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಈ ಫೋಟೋಗೆ ವಿವಿಧ ರೀತಿಯ ಸುಳ್ಳು ಕತೆಗಳನ್ನು ಕಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ  “ಈ ಛಾಯಾಚಿತ್ರದಲ್ಲಿ ಪ್ಯಾಲೇಸ್ಟಿನಿಯನ್ ತಾಯಿಯೊಬ್ಬಳು ಗಾಜಾದಲ್ಲಿರುವ ಧ್ವಂಸವಾದ ಕಟ್ಟಡದಲ್ಲಿರುವ ತಮ್ಮ ಮನೆಯಿಂದ ತನ್ನ ಮಗುವಿನ ಆಟಿಕೆಯ ಕಾರನ್ನು ವಾಪಸ್ಸು ತರುತ್ತಿರುವುದನ್ನ ನೋಡಬಹುದಾಗಿದೆ.”…

Read More
ನೆಹರೂ

ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು ಎಂಬುದು ಸುಳ್ಳು

ನೆನ್ನೆಯಷ್ಟೆ ದೇಶದಾದ್ಯಂತ ಮಕ್ಕಳ ದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಸ್ವತಂತ್ರ್ಯ ಭಾರತಕ್ಕೆ ನೀಡಿದ ಕೊಡುಗೆಗಳನ್ನು, ಅವರ ದೂರದೃಷ್ಟಿಯ ಯೋಜನೆಗಳನ್ನು ಜನ ನೆನೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ನೆಹರೂ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ತಮ್ಮ ರಾಜಕೀಯ ಲಾಭಕ್ಕಾಗಿ ನೆಹರೂ ಮತ್ತು ಅವರ ಮನೆತನದವರ ಮೇಲೆ ಭಾರತೀಯರಲ್ಲಿ ದ್ವೇಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈಗಾಗಲೇ ನೆಹರುರವರ ಕುರಿತ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಬಯಲುಗೊಳಿಸಿದೆ….

Read More

ತಾಳಿ, ಕಾಲುಂಗುರ, ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ವದಂತಿ: ವಾಸ್ತವ ಇಲ್ಲಿದೆ

ಎಫ್‌ಡಿಎ ಪರೀಕ್ಷೆ, ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಬಹುದು, ಆದರೆ ಹಿಂದೂ ಹೆಣ್ಣು ಮಕ್ಕಳು ತಾಳಿ, ಕಾಲುಂಗುರ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಇದು ಹಿಂದೂ ವಿರೋಧಿ ನೀತಿ ಎಂದು ಹಲವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸಿದಾಗ, ಪರೀಕ್ಷಾ ನಿಯಮಾವಳಿಗಳು ಹಲವಾರು ಬಾರಿ ಬದಲಾಗಿರುವುದು ಕಂಡುಬಂದಿದೆ. ಅಕ್ಟೋಬರ್ 28 ರಂದು ಕಲಬುರಗಿ ಮತ್ತು ಯಾದಗಿರಿ…

Read More

Fact Check : “ಗೋವು ನಮ್ಮ ತಾಯಿಯಲ್ಲ” ಎಂದು ದಿಗ್ವಿಜಯ್ ಸಿಂಗ್‌ ಹೇಳಿಲ್ಲ

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಇದೀಗ ಅಲ್ಲಿನ ಆಡಳಿತರೂಢ  ಸರ್ಕಾರದ ವಿರುದ್ಧ ಮತ್ತು ಅಲ್ಲಿನ ವಿರೋಧ ಪಕ್ಷದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಅವರ ವಿರುದ್ಧ ಹಲವು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದೆ.  ಇದೇ ರೀತಿಯಾಗಿ “ಗೋವು ನಮ್ಮ ತಾಯಿಯಲ್ಲ. ಅದರ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ” ಎಂಬ ವಿಡಿಯೋ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ ಹೇಳಿದ್ದಾರೆ ಎಂಬ ಸುದ್ದಿಯೊಂದಿಗೆ…

Read More