Kerala

ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಎಂದಿರುವ ಆಜ್‌ತಕ್‌ ವರದಿ ಸುಳ್ಳು

“ದೀಪಾವಳಿಯನ್ನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.  ಭಾರತದಲ್ಲಿಯೂ ಸಹ ಅಂದು ರಾಷ್ಟ್ರೀಯ ರಜೆ ಘೋಷಿಸಿದ್ದಾರೆ. ಆದರೆ ಭಾರತದಲ್ಲಿ ಒಂದು ರಾಜ್ಯ ಮಾತ್ರ ಸಡಗರದಿಂದ ದೀಪಾವಳಿಯನ್ನು ಆಚರಿಸುವುದಿಲ್ಲ. ನಿಜ ನೀವು ಕೇಳಿದ್ದು ಸತ್ಯ. ಭಾರತದಾದ್ಯಂತ  ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಂದೇ ಭಗವಾನ್ ರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.  ಆದರೆ ಕೇರಳದಲ್ಲಿ ಈ ಹಬ್ಬವನ್ನು ಆಚರಿಸುವುದಿಲ್ಲ. ಇದರ ಕಾರಣ ಏನು ಅಂದರೆ ಆ ದಿನವೇ ಮಹಾರಾಜ ಮಹಾಬಲಿಯು…

Read More

Fact Check : ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ ಎಂದು ತಮಿಳುನಾಡಿನ ವಿಡಿಯೋ ಹಂಚಿಕೆ.!

ಸಾಮಾಜಿಕ ಜಾಲತಾಣದಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸಂಬಂಧಿಸಿದ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಅದರಲ್ಲಿ ಟಿಟಿಡಿಗೆ ಸಂಬಂಧಿಸಿದ್ದಂತೆ ವಾಟ್ಸ್‌ಆಪ್‌ ಸೇರಿದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಈ ವಿಡಿಯೋವನ್ನು ಸಾಕಷ್ಟು ಮಂದಿ ಇಂದಿಗೂ ಶೇರ್‌ ಮಾಡುತ್ತಿದ್ದಾರೆ ವೈರಲ್‌ ಆಗಿರುವ ಆ ವಿಡಿಯೋದಲ್ಲಿ “ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್‌ಕಮ್‌ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ…

Read More
ಮುಸ್ಲಿಂ

ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು

ಹಲವು ವರ್ಷಗಳಿಂದ ಭಾರತ ಮುಂಬರುವ ದಿನಗಳಲ್ಲಿ ಮುಸ್ಲಿಂ ರಾಷ್ಟ್ರವಾಗಲಿದೆ ಏಕೆಂದರೆ  ಮುಸ್ಲಿಂ ಜನಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪ್ರತಿಪಾದಿಸಿದ ಹಲವು ಸುದ್ದಿಗಳು, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ 10 ಏಪ್ರಿಲ್ 2023ರಲ್ಲಿ ದೆಹಲಿಯಲ್ಲಿ ನಡೆದ ಹಿಂದು ಒಕ್ಕುಟ ಸಭೆಯಲ್ಲಿ ಜೈ ಭಗವಾನ್ ಗೋಯಲ್ ಎಂಬ ಬಿಜೆಪಿ ನಾಯಕ “ನಾವು ತ್ರಿಶೂಲ ಹಿಡಿದು ಮಟ್ಟಹಾಕದೇ ಇದ್ದರೆ ಇನ್ನೂ ಆರೇಳು ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗಲಿ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅವರ ಮೇಲೆ FIR ಕೂಡ ದಾಖಲಾಗಿತ್ತು….

Read More

Fact Check | ಬಿಎಸ್‌ಎನ್‌ಎಲ್‌ KYC ಗೆ ಸಂಬಂಧ ಪಟ್ಟಂತೆ ಯಾವುದೇ ಮೆಸೆಜ್‌ ಕಳುಹಿಸುವುದಿಲ್ಲ

ಬಿಎಸ್‌ಎನ್‌ಎಲ್‌ ಕಂಪನಿ ಅಧಃ ಪತನದತ್ತ ತಲುಪುತ್ತಿದೆ ಎಂಬ ಸುದ್ದಿಯ ನಡುವೆ ಇದೀಗ ಬಿಎಸ್‌ಎನ್‌ಎಲ್‌ 4 ಜಿ ಸಿಮ್‌ಗಳು ಮಾರುಕಟ್ಟೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ಆದರೆ ಇದರ ನಡುವೆ ಇದೀಗ ಬಿಎಸ್‌ಎನ್‌ಎಲ್‌ ಗೆ ಸಂಬಂಧಿಸಿದಂತೆ ಮೋಸದ ಜಾಲವೊಂದು ಪತ್ತೆಯಾಗಿದ್ದು ಇದೇ ವಿಚಾರದ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಇದೇ ಸುಳ್ಳು ಸುದ್ದಿಯಲ್ಲಿ  “ಪ್ರಿಯ ಗ್ರಾಹಕರೆ ನಿಮ್ಮ ಬಿಎಸ್‌ಎನ್‌ಲ್‌ ಸಿಮ್‌ ಕಾರ್ಡ್‌ನ KYC ಅನ್ನು ಟೆಲಿಕಾಮ್‌ ರೆಗ್ಯುಲೆಟರಿ ಆಥರಿಟಿ ಆಫ್‌ ಇಂಡಿಯಾ ರದ್ದು ಪಡಿಸುತ್ತಿದೆ. ಹೀಗಾಗಿ ನಿಮ್ಮ ಸಿಮ್‌ ಕಾರ್ಡ್‌ನ್ನು…

Read More

ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ

ಕಳೆದ ಒಂದು ದಶಕಗಳಿಂದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರುರವರ ಕುರಿತು ಇನ್ನಿಲ್ಲದ ಆರೋಪಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ಬೆಂಬಲಿಗರು, ಬಲಪಂಥೀಯರು ದೇಶಕ್ಕೆ ನೆಹರೂರವರ ಕೊಡುಗೆಗಳು ಶೂನ್ಯ ಎನ್ನುವಂತೆ ಬಿಂಬಿಸುತ್ತಿದ್ದಾರೆ . ಇನ್ನೂ ನೆಹರುರವರ ಮೂಲ ಧರ್ಮ ಇಸ್ಲಾಂ, ಆತನೊಬ್ಬ ಅವಕಾಶವಾದಿ ರಾಜಕಾರಣಿ, ಸ್ತ್ರೀಲೋಲ ಹೀಗೆ ನಾನಾ ವಿಧವಾಗಿ ಪಂಡಿತ್ ನೆಹರೂರವರ ಇತಿಹಾಸವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ. ನಾನು ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸ್ಲಿಂ, ಆಕಸ್ಮಿಕವಾಗಿ ಹಿಂದೂ! ಎಂದು ಜವಾಹರಲಾಲ್ ನೆಹರು ಹೇಳಿಕೊಂಡಿದ್ದಾರೆ ಎಂಬ…

Read More
ಟಿಪ್ಪು ಸುಲ್ತಾನ್

ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನರನ್ನು ಜಿಹಾದಿ, ಅತ್ಯಾಚಾರಿ ಎಂದು ಘೋಷಿಸಿದೆ ಎಂಬುದು ಸುಳ್ಳು

‘ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನನನ್ನು ಜಿಹಾದಿ ಎಂದು ಘೋಷಿಸಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂದು ಹೇಳಿದೆ ಎಂದು ಬರೆಯಲಾಗಿರುವ ಪೋಸ್ಟ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಪೋಸ್ಟ್‌ನಲ್ಲಿ ‘ಟಿಪ್ಪು ಸುಲ್ತಾನ್ ಹಿಂದೂಗಳನ್ನು ಹತ್ಯೆಗೈದ, ಅತ್ಯಾಚಾರ ಮಾಡಿದ, ಮತ್ತು ಮತಾಂತರ ಮಾಡುತ್ತಿದ್ದ’ ಎಂದು ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೇಳಿದ್ದಾರೆ’ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿನ ಪ್ರತಿಪಾದನೆ ನಿಜವೆ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಕುರಿತು ಹುಡುಕಿದಾಗ…

Read More

Fact Check : ಮ್ಯಾಕ್ಸ್‌ವೆಲ್ ಜಾಗದಲ್ಲಿ ಕೊಹ್ಲಿ ಇದ್ದಿದ್ದರೆ ಸಿಂಗಲ್ ತೆಗೆದುಕೊಳ್ಳುತ್ತಿದ್ದರು ಎಂದು ಗೌತಮ್ ಗಂಭೀರ್ ಹೇಳಿಲ್ಲ

“ಒಂದು ವೇಳೆ ವಿರಾಟ್‌ ಕೊಹ್ಲಿ 195 ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದರೆ, ಅಲ್ಲಿ ದ್ವಿಶತಕ ಬಾರಿಸುವ ಸಲುವಾಗಿ ಅವರು ಸಿಂಗಲ್ಸ್‌ ತೆಗೆದುಕೊಳ್ಳುತ್ತಿದ್ದರು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೆ ಮಾಡಲಿಲ್ಲ. ಅವರು ಸಿಕ್ಸರ್‌ ಬಾರಿಸಿದರು. ಆದ್ದರಿಂದಲೇ ಅವರು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ವೈಯಕ್ತಿಕ ಮೈಲುಗಲ್ಲುಗಳ ಸಲುವಾಗಿ ಆಡುವವರಲ್ಲ” ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭಿರ್‌ ಅವರು ಹೇಳಿದ್ದಾರೆ ಎಂದು  ವ್ಯಾಪಕವಾಗಿ ಸುದ್ದಿಯೊಂದು ಹರಡುತ್ತಿದೆ. ಈ ಸುದ್ದಿಯ ಪೂರ್ವಪರವನ್ನು ಅಳೆಯದೆ, ತಿಳಿಯದೆ ಯಥಾವತ್ತಾಗಿ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ….

Read More